
ಅಹಮದಾಬಾದ್ (ಏ.22): ಗುಜರಾತ್ (Gujarat) ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ದೊಡ್ಡ ಹಿನ್ನಡೆ ಕಾಣುವುದು ಬಹುತೇಕ ನಿಶ್ಚಿತವಾಗಿದೆ. ಪಾಟಿದಾರ್ ಚಳವಳಿಯಿಂದ (Patidar Protest) ರಾಜಕೀಯದಲ್ಲಿ ಗುರುತಿಸಿಕೊಂಡ ಗುಜರಾತ್ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ (Congress leader Hardik Patel) ರಾಜ್ಯ ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸುವ ಭರದಲ್ಲಿ ಬಂಡಾಯ ಧೋರಣೆ ತಳೆದಿದ್ದಾರೆ. ಹಾರ್ದಿಕ್ ತನ್ನನ್ನು ತಾನು ರಾಮಭಕ್ತ ಎಂದು ಕರೆದುಕೊಂಡಿದ್ದಲ್ಲದೆ, ನಾನೂ ಹಿಂದೂ ಎನ್ನಲು ಹೆಮ್ಮೆಪಡುತ್ತೇನೆ ಎಂದಿದ್ದಾರೆ. ಆದರೆ ಬಿಜೆಪಿ ಸೇರುವ ವಿಚಾರವಾಗಿ ಹಾರ್ದಿಕ್ ಪಟೇಲ್ ಮುಕ್ತವಾಗಿ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಕಾಂಗ್ರೆಸ್ ಹೈಕಮಾಂಡ್ (Congress High Command) ಮುಂದೆ ರಾಜ್ಯ ನಾಯಕತ್ವದ ಬಗ್ಗೆ ಹಾರ್ದಿಕ್ ಪಟೇಲ್ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (Congress general secretary KC Venugopal ) ಜತೆಗೂ ಈ ಕುರಿತಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ನ ರಾಜ್ಯ ನಾಯಕತ್ವದಿಂದ ನನಗೆ ಸಮಸ್ಯೆ ಇದೆ ಎಂದರು. ಅವರು ಯಾರೂ ಕೆಲಸ ಮಾಡಲು ಬಯಸುವುದಿಲ್ಲ ಮತ್ತು ಯಾರಾದರೂ ಕೆಲಸ ಮಾಡಿದರೆ, ಅವರು ಅದನ್ನು ಮಾಡಲು ಬಿಡುವುದಿಲ್ಲ. ಇದರಿಂದಾಗಿ ಗುಜರಾತ್‌ನಲ್ಲಿ ಪ್ರತಿಪಕ್ಷವಾಗಿ ಜನರ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಗುಜರಾತ್ ಕಾಂಗ್ರೆಸ್‌ನ ಹಿರಿಯ ನಾಯಕತ್ವವು ಹಾರ್ದಿಕ್ ಪಟೇಲ್‌ಗೆ ಸಾರ್ವಜನಿಕವಾಗಿ ಮಾತನಾಡದಂತೆ ಮತ್ತು ಆಂತರಿಕ ವಿಷಯವನ್ನು ವೈಯಕ್ತಿಕವಾಗಿ ಚರ್ಚಿಸದಂತೆ ಎಚ್ಚರಿಕೆ ನೀಡಿತ್ತು. ಹೀಗಿದ್ದರೂ ಹಾರ್ದಿಕ್ ಪಟೇಲ್ ರಾಜ್ಯ ನಾಯಕತ್ವದ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಿರುವಾಗ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಭಿನ್ನಮತೆ ತಲೆದೋರಿದ್ದು. ಪಕ್ಷಕ್ಕೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಪ್ರತಿಪಕ್ಷಗಳು ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮತ್ತು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದರು. ನಾವು ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಜನರು ಬೇರೆ ಆಯ್ಕೆಗಳನ್ನು ಹುಡುಕುತ್ತಾರೆ. ನಾಯಕತ್ವವನ್ನು ಹೊಂದಿರುವುದರಿಂದ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಗುಜರಾತ್‌ನಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದು ಹೇಳಿದರು. ಆದರೆ, ಬಿಜೆಪಿ ಸೇರುವ ಯೋಚನೆ ಇಲ್ಲ, ನನ್ನ ಮನಸ್ಸಿನಲ್ಲೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ. ಶತ್ರುಗಳ ಬಲವನ್ನು ಒಪ್ಪಿಕೊಳ್ಳಬೇಕು ಎಂದರು. ಅವರು ಶಕ್ತಿಶಾಲಿಯಾಗಿದ್ದಾರೆ ಮತ್ತು ಶತ್ರುಗಳನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು.
ಕಾಂಗ್ರೆಸ್ ಪಕ್ಷದ ವಿರುದ್ಧ ಹಾರ್ದಿಕ್ ಪಟೇಲ್ ಕಿಡಿ, ಸಂತಾನಹರಣ ಮಾಡಿದ ವರನಂತೆ ನನ್ನ ಸ್ಥಿತಿ!
ಗುಜರಾತ್ ಕಾಂಗ್ರೆಸ್ ವಿಚಾರದಲ್ಲಿ ಸಿಟ್ಟಾಗಿರುವ ಹಾರ್ದಿಕ್ ಪಟೇಲ್, ನಾವು ಭಗವಾನ್ ರಾಮನನ್ನು ನಂಬುತ್ತೇವೆ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ. ತಂದೆಯ ಮರಣದ ಬಳಿಕ ಅವರ ವಿಧಿವಿಧಾನದ ವೇಳೆ ನಾಲ್ಕು ಸಾವಿರ ಭಗವದ್ಗೀತೆಯನ್ನು ನಾನು ಹಂಚಿದ್ದೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ಹಿಂದೂ ಧರ್ಮದಿಮದ ಬಂದವನು, ಹಿಂದೂ ಎನ್ನಲು ತಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಹಾರ್ದಿಕ್‌ಗೆ ಈ ಕೆಲಸ ಮಾಡಲು ಅವಕಾಶ ಕೊಟ್ಟವರ ಮೇಲೆಯೂ ಕೇಸ್!
ಇತ್ತೀಚಿನ ದಿನಗಳಲ್ಲಿ ಗುಜರಾತ್ ಕಾಂಗ್ರೆಸ್ ನಾಯಕತ್ವದ ಮೇಲೆ ಹಾರ್ದಿಕ್ ಪಟೇಲ್ ಕೋಪಗೊಂಡಿದ್ದಾರೆ. ಗುಜರಾತ್‌ನಲ್ಲಿ ಯಾವುದೇ ವ್ಯಕ್ತಿಯ ನಾಯಕನೊಂದಿಗೆ ನನಗೆ ಯಾವುದೇ ತೊಂದರೆ ಇಲ್ಲ, ಆದರೆ ಕಾಂಗ್ರೆಸ್ ನಾಯಕತ್ವವು ಯಾರಿಗೂ ಕೆಲಸ ಮಾಡಲು ಬಿಡುವುದಿಲ್ಲ ಮತ್ತು ಯಾರಾದರೂ ಕೆಲಸ ಮಾಡಿದರೆ ಅದನ್ನು ಮಾಡಲು ಅವರು ಬಿಡುವುದಿಲ್ಲ ಎಂದು ಹೇಳಿದರು. ನಾನು ಪಕ್ಷದ ಹೈಕಮಾಂಡ್‌ಗೆ ಕಳವಳ ವ್ಯಕ್ತಪಡಿಸಿದ್ದೇನೆ ಮತ್ತು ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂದು ಹಾರ್ದಿಕ್ ಹೇಳಿದರು.
ಮನೆಯಲ್ಲಿ ಯಾವುದಾದರೂ ಇಷ್ಟವಾಗದೇ ಇದ್ದಲ್ಲಿ ಅದನ್ನು ನಿಮ್ಮ ಪೋಷಕರ ಮುಂದೆ ವ್ಯಕ್ತಪಡಿಸುತ್ತೀರಿ ಎಂದು ಹಾರ್ದಿಕ್ ಹೇಳಿದ್ದಾರೆ. ಅದೇ ರೀತಿ ಪಕ್ಷದ ಸಮಸ್ಯೆಯನ್ನೂ ನನ್ನ ಪಕ್ಷದ ಉನ್ನತ ನಾಯಕರ ಮುಂದೆ ಇಟ್ಟಿದ್ದೇನೆ. ಹಾಗಾಗಿ ನಾನು ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದು ಭಾವಿಸಬೇಡಿ. ನನ್ನ ಮನಸ್ಸಿನಲ್ಲಿಯೂ ಅಂಥದ್ದೇನೂ ಇಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ