ಬೊಕ್ಕ ತಲೆಗೆ ಉಚಿತ ಚಿಕಿತ್ಸೆ ಕಾರಣ ಸಾವಿವಾರು ಮಂದಿ ಚಿಕಿತ್ಸೆ ಪಡೆಯಲು ಹಾಜರಾಗಿದ್ದಾರೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆ 60ಕ್ಕೂ ಹೆಚ್ಚಿನ ಮಂದಗೆ ಕಣ್ಣಿನ ಸಮಸ್ಯೆ ಎದುರಾಗಿದೆ. ಇನ್‌ಫೆಕ್ಷನ್, ದೃಷ್ಠಿ ದೋಷ ಸೇರಿದಂತೆ ಹಲವು ಕಾರಣಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಿಯಾಲ(ಮಾ.26) ಜೀವನ ಪದ್ಧತಿ, ಆಹಾರ, ಆರೋಗ್ಯ ಸಮಸ್ಯೆಗಳಿಂದ ಇದೀಗ ಬಹುತೇಕರಿಗೆ ಬೊಕ್ಕ ತಲೆ ಸಮಸ್ಸೆ ಎದುರಾಗುತ್ತಿದೆ. ಬೋಳು ತಲೆಯಿಂದ ಮುಜುಗರ ಪರಿಸ್ಥಿತಿ ಮಾತ್ರವಲ್ಲ, ಯುವ ಸಮೂಹಕ್ಕೆ ಮದುವೆ ಕೂಡಿ ಬರದ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ ಬಹುತೇಕರು ಬೊಕ್ಕ ತಲೆಗೆ ಕೂದುಲು ಪ್ಲಾಂಟೇಶನ್, ಮತ್ತೆ ಕೂದಲು ಬೆಳೆಸುವ ಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆ ಪಡೆಯುತ್ತಾರೆ. ಕೂದಲಿನ ಪ್ರತಿ ಚಿಕಿತ್ಸೆ ದುಬಾರಿಯಾಗಿರುವುದರಿಂದ ಹಲವರಿಗೆ ಚಿಕಿತ್ಸೆ ಪಡೆಯುಲು ಸಾಧ್ಯವಾಗುವುದಿಲ್ಲ. ಇದರ ನಡುವೆ ಮೆಡಿಕಲ್ ಕ್ಯಾಂಪ್ ಹೆಸರಿನಲ್ಲಿ ಸಣ್ಣ ತಂಡ ಉಚಿತ ಬೊಕ್ಕ ತಲೆ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಉಚಿತ ಘೋಷಣೆ ಕಾರಣ ಸಾವಿರಾರು ಮಂದಿ ಚಿಕಿತ್ಸೆ ಪಡೆಯಲು ಆಗಮಿಸಿದ್ದಾರೆ. ಆದರೆ ಚಿಕಿತ್ಸೆ ಆರಂಭಗೊಂಡ ಬೆನ್ನಲ್ಲೇ ಹಲವರ ಕಣ್ಣುಗಳಲ್ಲಿ ಊತ ಕಾಣಿಸಿಕೊಂಡಿದೆ. ದೃಷ್ಟಿ ಹೀನವಾಗಿದೆ. ಉರಿ ಹಾಗೂ ತೀವ್ರ ನೋವಿನಿಂದ ಬಳಲಿದ ಘಟನೆ ಪಂಜಾಬ್‌ನ ಸಂಗ್ರೂರ್ ಬಳಿ ನಡೆದಿದೆ.
ಮಾತಾ ಕಾಳಿ ಮಾತಾ ದೇವಿ ದೇವಸ್ಥಾನ ಪಕ್ಕದಲ್ಲಿ ಉಚಿತ ಬೊಕ್ಕ ತಲೆ ಕ್ಯಾಂಪ್ ಆಯೋಜಿಸಲಾಗಿದೆ. ಕಳೆದ ಹಲವು ದಿನಗಳಿಂದ ಈ ಉಚಿತ ಕ್ಯಾಂಪ್ ಕುರಿತು ಜಾಹೀರಾತು, ಪ್ರಚಾರ ನೀಡಲಾಗಿತ್ತು. ಉದುರಿ ಹೋಗಿರುವ ಕೂದಲಿನ ಬೊಕ್ಕ ತಲೆಯ ಭಾಗದಲ್ಲಿ ಮತ್ತೆ ಕೂದಲು ಬೆಳೆಸಲು ಆಯುರ್ವೇದ ಸೇರಿದಂತೆ ಯಾವುದೇ ಅಡ್ಡ ಪರಿಣಾಮವಿಲ್ಲದ ಔಷಧಿ ನೀಡಲಾಗುತ್ತದೆ ಎಂದು ಪ್ರಚಾರ ಮಾಡಲಾಗಿತ್ತು.
₹20ರಿಂದ ಆರಂಭಿಸಿ ಇದೀಗ ಒಬ್ಬರ ಹೇರ್ ಕಟ್ಟಿಂಗ್‌ಗೆ ₹1 ಲಕ್ಷ ರೂ, ಅಲೀಮ್ ರೋಚಕ ಪಯಣ
ಉಚಿತ ಘೋಷಣೆ ಹಾಗೂ ಪ್ರಚಾರದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಚಿಕಿತ್ಸೆಗೆ ಬಂದವರಿಗೆ ತೈಲ ನೀಡಲಾಗಿದೆ. ಎಲ್ಲರೂ ತಲೆಗೆ ಹಚ್ಚಿಕೊಳ್ಳಲು ಸೂಚಿಸಿದ್ದಾರೆ. ನೀಡಿದ ತೈಲವನ್ನು ತಲೆಗೆ ಹಚ್ಚಿದ ಬೆನ್ನಲ್ಲೇ ಉರಿ ಶುರುವಾಗಿದೆ. ಕೆಲವೇ ಹೊತ್ತಲ್ಲಿ ಕಣ್ಣುಗಳಲ್ಲಿ ಊತ ಶುರುವಾಗಿದೆ. ಹಲವರಿಗೆ ದೃಷ್ಠಿ ಹೀನವಾಗಲು ಶುರುವಾಗಿದೆ. ತುರಿಕೆ, ಊತ, ತೀವ್ರ ನೋವು ಕಾಣಿಸಿಕೊಂಡ ಬೆನ್ನಲ್ಲೇ ಹಲವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಕಣ್ಣಿನ ಆಸ್ಪತ್ರೆಗೆ ಆಸ್ವಸ್ಥರನ್ನು ದಾಖಲಿಸಿದ್ದಾರೆ. ಬರೋಬ್ಬರಿ 60 ಮಂದಿ ಅಸ್ವಸ್ಥರಾಗಿದ್ದಾರೆ.
ಇದೀಗ ಹಲವರು ಎರಡು ಕಣ್ಣುಳು ಊತಗೊಂಡಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತ ಕ್ಯಾಂಪ್ ನಡೆಸಿದ ಬೊಕ್ಕ ತಲೆ ಚಿಕಿತ್ಸೆ ನೀಡುವ ನಕಲಿ ವೈದ್ಯರು ನಾಪತ್ತೆಯಾಗಿದ್ದಾರೆ. ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಈ ಪೈಕಿ ಓರ್ವನ ಬಂಧಿಸಲಾಗಿದೆ. ಘಟನೆ ನಡೆದಿ ಕೆಲ ದಿನಗಳಾದರೂ ಹಲವರು ಕಣ್ಣಿನ ಸಮಸ್ಯೆ ಪರಿಹಾರವಾಗಿಲ್ಲ. 60 ಮಂದಿ ಪೈಕಿ ಹಲವರು ಸ್ಥಿತಿ ಗಂಭೀರವಾಗಿದೆ.
ಭಾರತದ 7 ಟ್ರೆಂಡಿಂಗ್ ಗಜ್ರಾ ಕೇಶವಿನ್ಯಾಸಗಳು; ನೀವು ಅಪ್ಸರೆಯಂತೆ ಕಾಣುವಿರಿ!