Aurangzeb's tomb: ಮಹಾರಾಷ್ಟ್ರದಲ್ಲಿರುವ ಔರಂಗಜೇಬ್ ಸಮಾಧಿಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಔರಂಗಜೇಬ್ ತನ್ನ ಸಮಾಧಿ ಮೇಲೆ ತುಳಸಿ ಇರೋದು ಯಾಕೆ ಗೊತ್ತಾ?
ಮುಂಬೈ: ಮಹಾರಾಷ್ಟ್ರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೊಘಲ್ ಚಕ್ರವರ್ತಿಗಳು ತಮ್ಮ ಸಮಾಧಿಗಾಗಿ ಬೃಹತ್ ಗುಮ್ಮಟ್ಟಗಳನ್ನು ಕಟ್ಟಿಸಿಕೊಳ್ಳುತ್ತಾರೆ. ಔರಂಗಜೇಬ್ ತಂದೆ ಷಹಜಹಾನ್ ತನ್ನ ಪ್ರೀತಿಯ ಮಡದಿಗಾಗಿ ತಾಜ್‌ಮಹಲ್ ಕಟ್ಟಿಸಿದ್ದನು. ಆದ್ರೆ ಇಷ್ಟು ವರ್ಷಗಳಾದರೂ ಔರಂಗಜೇಬ್ ಸಮಾಧಿಗೆ ಒಂದು ಛಾವಣಿಯನ್ನು ಸಹ ಮಾಡಿಲ್ಲ. ಸಮಾಧಿ ಸುತ್ತಲೂ ಗೋಡೆ ಮಾತ್ರ ಕಟ್ಟಲಾಗಿದೆ. ಸಾಮಾನ್ಯವಾಗಿ ಸಮಾಧಿ ಮೇಲೆ ಬಿಳಿ ಬಟ್ಟೆಯೊಂದನ್ನು ಹಾಕಲಾಗಿರುತ್ತದೆ. ಹಾಗೆ ಸಮಾಧಿ ಮೇಲೆ ತುಳಸಿ ಗಿಡವೊಂದನ್ನು ನೆಡಲಾಗಿದೆ. ಮೊಘಲ್ ಚಕ್ರವರ್ತಿಯಾಗಿದ್ದ ಔರಂಗಜೇಬ್‌ನ ಸಮಾಧಿ ಇಷ್ಟೊಂದು ಸಿಂಪಲ್ ಆಗಿರೋದ್ಯಾಕೆ? ಸಮಾಧಿ ಮೇಲೆ ತುಳಸಿ ಇರೋದ್ಯಾಕೆ? ಎಲ್ಲೋ ಸತ್ತಿದ್ದ ಔರಂಗಜೇಬ್‌ನ ಸಮಾಧಿಯನ್ನು ಔರಂಗಾಬಾದ್‌ನಲ್ಲಿ ಮಾಡಿದ್ದೇಕೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಖುಲ್ದಾಬಾದ್‌ನಲ್ಲಿ ಔರಂಗಜೇಬ್‌ನ ಸಮಾಧಿ ಇದೆ. ದಖನ್ ಪ್ರಸ್ಥಭೂಮಿಯಲ್ಲಿ ಹತನಾದ ಔರಂಗಜೇಬ್‌ನ ಶವವನ್ನು ಔರಂಗಾಬಾದ್‌ಗೆ ತಂದು ಮಾಡಲಾಗಿದೆ. ಇದೇ ನಗರದಲ್ಲಿ ಔರಂಗಜೇಬ್ ಪತ್ನಿಯ ಸಮಾಧಿಯನ್ನು ಕಾಣಬಹುದು. ವಿವಾದದ ಬಳಿಕ ಔರಂಗಾಬಾದ್ ನಗರಕ್ಕೆ ಛತ್ರಪತಿ ಸಂಭಾಜಿನಗರ ಎಂದು ಮರು ನಾಮಕರಣ ಮಾಡಲಾಗಿದೆ.
ಸಮಾಧಿಯನ್ನು ಛಾವಣಿಯಿಂದ ಮುಚ್ಚಬೇಡಿ!
ಔರಂಗಜೇಬ್ ಓರ್ವ ಪ್ರಭಾವಶಾಲಿ ಮೊಘಲ್ ಚಕ್ರವರ್ತಿಯಾಗಿದ್ದರೂ ತನ್ನ ಸಮಾಧಿ ಹೀಗೆಯೇ ಇರಬೇಕೆಂದು ಹೇಳಿದ್ದನು. ಸಮಾಧಿ ಮೇಲೆ ಮಣ್ಣು ಮಾತ್ರ ಇರಬೇಕು. ಮೇಲೆ ತುಳಸಿ ಗಿಡ ನೆಟ್ಟಿರಬೇಕು. ಯಾವುದೇ ಕಾರಣಕ್ಕೂ ಸಮಾಧಿಯನ್ನು ಛಾವಣಿಯಿಂದ ಮುಚ್ಚಬಾರದು. ಸದಾ ಸಮಾಧಿ ಬೆಳಕಿಗೆ ತೆರದಿಬೇಕು ಎಂದು ಔರಂಗಜೇಬ್ ಬಯಸಿದ್ದನು. ಈ ಹಿನ್ನೆಲೆ ಇಂದಿಗೂ ಔರಂಗಜೇಬ್ ಸಮಾಧಿಗೆ ಛಾವಣಿಯನ್ನು ನಿರ್ಮಾಣ ಮಾಡಿಲ್ಲ. ಸಮಾಧಿಯ ಬಳಿ ಕಲ್ಲು ಇರಿಸಲಾಗಿದ್ದು, ಅದರ ಮೇಲೆ ಪೂರ್ಣ ಹೆಸರು ಅಬ್ದುಲ್ ಮುಜಾಫರ್ ಮುಹಿಯುದ್ದೀನ್ ಔರಂಗಜೇಬ್ ಅಲಂಗೀರ್ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಮೀಸಲಿಗೆ ಅವಕಾಶವಿಲ್ಲ : ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
ಕ್ರೂರ ಆಡಳಿತಗಾರನಾಗಿದ್ದ ಔರಂಗಜೇಬ್ 1707ರಲ್ಲಿ ಸಾವನ್ನಪ್ಪುತ್ತಾನೆ. ಔರಂಗಜೇನ್ ತನ್ನ ಜೀವನದ 37 ವರ್ಷಗಳನ್ನು ಔರಂಗಬಾದ್‌ನಲ್ಲಿಯೇ ಕಳೆದಿದ್ದನು. ಹಾಗಾಗಿಯೇ ಔರಂಗಾಬಾದ್ ಮೇಲೆ ಔರಂಗಜೇಬ್‌ನಿಗೆ ಅಪಾರ ಪ್ರೀತಿಯನ್ನು ಹೊಂದಿದ್ದನು. ಇದೇ ಕಾರಣಕ್ಕಾಗಿಯೇ ಔರಂಗಾಬಾದ್‌ನಲ್ಲಿ ಪತ್ನಿಯ ಸಮಾಧಿ 'ಬೀವಿ ಕಾ ಮಕ್ಬರಾ'ವನ್ನು ನಿರ್ಮಿಸಿದ್ದನು ಎಂದು ಹೇಳಲಾಗುತ್ತದೆ. ತನ್ನ ಆಳ್ವಿಕೆಯಲ್ಲಿ ನಾನು ಭಾರತದ ಯಾವುದೇ ಮೂಲೆಯಲ್ಲಿ ಸಾಯಬಹುದು, ಆದರೆ ನನ್ನ ಸಮಾಧಿ ಸೂಫಿ ಸಂತ ಜೈನುದ್ದೀನ್ ಶಿರಾಜಿಯ ಹತ್ತಿರದಲ್ಲಿರಬೇಕು ಎಂದು ಹೇಳಿದ್ದನು. ಹಾಗಾಗಿಯೇ ಸೂಫಿ ಸಂತರ ಪಕ್ಕದಲ್ಲಿಯೇ ಔರಂಗಜೇಬ್ ಅಂತ್ಯಕ್ರಿಯೆಯನ್ನು ಮಾಡಲಾಗಿದೆ.
ದಖನ್ ಪ್ರಸ್ಥಭೂಮಿಯಾಗಿ ಹೋರಾಟ ನಡೆಸುತ್ತಿರುವಾಗ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಔರಂಗಜೇಬ್ ಸಾವು ಆಗುತ್ತದೆ. ತನ್ನ ಸಮಾಧಿ ಎಲ್ಲಿ ಮತ್ತು ಹೇಗೆ ಆಗಬೇಕು ಎಂದು ಉಲ್ಲೇಖಿಸಿದ್ದರಿಂದ ಶವವನ್ನು ಔರಂಗಬಾದ್‌ಗೆ ತೆಗೆದುಕೊಂಡು ಬರಲಾಯ್ತು. ಇಂದಿಗೂ ಸಮಾಧಿ ಇಲ್ಲಿಯೇ ಇದ್ದು,ಅದನ್ನು ಇಲ್ಲಿಂದ ಸ್ಥಳಾಂತರಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸವೆ. ಇದೇ ವಿಷಯವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಗಲಾಟೆಯೂ ನಡೆದಿತ್ತು.
ಇದನ್ನೂ ಓದಿ: ರಂಜಾನ್‌ಗೆ ಮೊದಲು ರಾಮ ಬರ್ತಾನೆ ಎಂದ ಈ ಮುಸ್ಲಿಂ ಮಹಿಳಾ ನಾಯಕಿ ಯಾರು?