ಕೊರೋನಾ ಸಮರ: ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಗೌರವಿಸಿದ ವಿಶ್ವಸಂಸ್ಥೆ!

By Suvarna News  |  First Published Jun 24, 2020, 11:03 AM IST

ಕೊರೋನಾ ವಿರುದ್ಧ ಕೇರಳ ಸಮರ| ಕೊರೋನಾ ಹತ್ತಿಕ್ಕಲು ಯಶಸ್ವಿಯಾದ ಕೇರಳ| ಕೇರಳ ಆರೋಗ್ಯ ಸಚಿವೆಗೆ ವಿಶ್ವಸಂಸ್ಥೆ ಬಹುಪರಾಕ್!| 


ವಾಷಿಂಗ್ಟನ್(ಜೂ.24): ಜೂನ್ 23ರಂದು ಸಾರ್ವಜನಿಕ ಸೇವಾ ದಿನ ಆಚರಣೆ ವೇಳೆ ವಿಶ್ವಸಂಸ್ಥೆಯು ಕೊರೋನಾ ಮಣಿಸಲು ಸೂಕ್ತ ಕ್ರಮ ಕೈಗೊಂಡು ಅದನ್ನು ಹತ್ತಿಕ್ಕುವಲ್ಲಿ ಸೂಕ್ತ ಕ್ರಮ ಕೈಗೊಂಡ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾರನ್ನು ಗೌರವಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಅಂಟೊನಿಯೊ ಗುಟೆರಸ್‌ ಸೇರಿ ವಿಶ್ವಸಂಸ್ಥೆಯ ಇನ್ನಿತರ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ಇವರೆಲ್ಲರೂ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಸೇರಿ ಕೊರೋನಾವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ನಾಯಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಸಮುದಾಯದಲ್ಲಿ ಕೊರೋನಾ ಹರಡುವಿಕೆ ತಡೆಯಲು ಪ್ರೈಮರಿ ಲೆವೆಲ್ ಟೆಸ್ಟ್ ಆರಂಭಿಸಿದ ಕೇರಳ!

ಇನ್ನು ಕೊರೋನಾ ವಿರುದ್ಧದ ಈ ಸಮರದ ಅನುಭವವನ್ನು ಹಂಚಿಕೊಂಡಿರುವ ಶೈಲಜಾರವರು 'ಈ ಹಿಂದೆ ರಾಜ್ಯವನ್ನು ಕಂಗೆಡಿಸಿದ್ದ ನಿಫಾ ವೈರಸ್ ಹಾಗೂ 2018, 2019ರ ಪ್ರವಾಹದ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಿತ್ತು. ಇವೆಲ್ಲವೂ ಕೊರೋನಾ ವಿರುದ್ಧ ಸೂಕ್ತ ಸಮಯದಲ್ಲಿ ಪರಿಣಾಮಕಾರಿಯಾಗಿ ಹೋರಾಡಲು ಅದು ಬಹಳಷ್ಟು ಅಹಾಯ ಮಾಡಿದವು' ಎಂದಿದ್ದಾರೆ.

ಅಲ್ಲದೇ ವುಹಾನ್‌ನಲ್ಲಿ ಕೊರೋನಾ ವೈರಸ್ ಪ್ರಕರಣ ದಾಖಲಾದ ಸಂದರ್ಭದಲ್ಲೇ ಕೇರಳ ವಿಶ್ವಸಂಸ್ಥೆಯನ್ನು ಸಂಪರ್ಕಿಸಿ, ಎಲ್ಲಾ ರೀತಿಯ ಮಾರ್ಗಸೂಚಿಯನ್ನು ಪಾಲಿಸಲಾರಂಭಿಸಿತು. ಇಷ್ಟೇ ಅಲ್ಲದೇ ವಿದೇಶದಿಂದ ಬಂದವರ ಮೇಲೂ ನಿಗಾ ಇಡಲಾಯಿತು.ಇವೆಲ್ಲದರಿಂದ ಕೊರೋನಾ ಹಬ್ಬುವ ಮಿತಿ ಶೇ. 12.5ಕ್ಕಿಂತ ಕೆಳಗಿದ್ದು, ಸಾವನ್ನಪ್ಪುವರ ಮಿತಿ ಶೇ. 0.6ಕ್ಕಿಳಿಯಿತು ಎಂದಿದ್ದಾರೆ.

ಕೊರೋನಾಗೆ ಭಾರತದಲ್ಲೇ ಔಷಧ, ಲಸಿಕೆ!

ಅದರಲ್ಲೂ ಪ್ರಮುಖವಾಗಿ ಕೊರೋನಾ ವಿರುದ್ಧದ ಈ ಸಮರದಲ್ಲಿ 'ಟ್ರೇಸ್, ಕ್ವಾರಂಟೈನ್, ಟೆಸ್ಟ್, ಐಸೋಲೇಟ್, ಟ್ರೀಟ್', 'ಬ್ರೇಕ್ ದ ಚೈನ್' ಹಾಗೂ 'ರಿವರ್ಸ್ ಕ್ವಾರಂಟೈನ್' ಈ ಮೂರನ್ನು ತಪ್ಪದೇ ಪಾಲಿಸಲಾಗಿದೆ. ಇದೇ ಕಾರಣದಿಂದ ಮಹಾಮಾರಿ ಹತ್ತಿಕ್ಕಲು ಸಾಧ್ಯವಾಯ್ತು ಎಂಬುವುದು ಆರೋಗ್ಯ ಸಚಿವೆ ಮಾತಾಗಿದೆ.

click me!