ಕಾರು ಮಾರಿ ಬಡ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಹಂಚಿದ ಯುವಕ!

Suvarna News   | Asianet News
Published : Jun 23, 2020, 08:40 PM IST
ಕಾರು ಮಾರಿ ಬಡ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಹಂಚಿದ ಯುವಕ!

ಸಾರಾಂಶ

ವಲಸೆ ಕಾರ್ಮಿಕರು, ಬಡವರು, ಸ್ಲಂ ನಿವಾಸಿಗಳಿಗೆ ಕೊರೋನಾ ವೈರಸ್ ವಕ್ಕರಿಸಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಚಿಕಿತ್ಸೆ ದುಡ್ಡಿಲ್ಲದೆ ಸೋಂಕು ಅತಿಯಾಗಿ ಸಾವನ್ನಪ್ಪುತ್ತಿದ್ದಾರೆ.  ಈ  ರೀತಿ ಬಡ ಸೋಂಕಿತರಿಗೆ 31ರ ಹರೆಯದ ಯುವಕನೋವ್ರ ತನ್ನು SUV ಕಾರು ಮಾರಾಟ ಮಾಡಿ ನೆರವಾಗುತ್ತಿದ್ದಾನೆ. ಈತನ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈ(ಜೂ. 23): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ಮಾನವೀಯತೆ ಮೆರದವರು ಹಲವರಿದ್ದಾರೆ. ನಿರ್ಗತಿಕರಿಗೆ ಸಹಾಯ ಮಾಡಿ ಅವರ ಮುಖದಲ್ಲಿ ನಗು ಮೂಡಿಸಿದವರಿದ್ದಾರೆ. ಹೀಗೆ ಕೊರೋನಾ ವೈರಸ್ ತಗುಲಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪರದಾಡುತ್ತಿದ್ದ ಹಲವರಿಗೆ ಮುಂಬೈನ 31ರ ಹರೆಯದ ಶಹನವಾಜ್ ಶೈಕ್ ನೆರವಾಗುತ್ತಿದ್ದಾರೆ. ತುರ್ತು ಅಗತ್ಯವಾದ ಆಕ್ಸಿಜನ್ ಸಿಲಿಂಡರ್ ನೀಡಿ ಜೀವ ಉಳಿಸುತ್ತಿದ್ದಾನೆ.

ಕೋವಿಡ್19 ಆಸ್ಪತ್ರೆಗಳಲ್ಲಿ ಅವವ್ಯವಸ್ಥೆ ದೂರು: ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟ ಸಿಎಂ

ಜೂನ್ 5 ರಿಂದ ಶೆಹನವಾಜ್ ಶೈಕ್, ಮುಂಬೈನ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಹಂಚುತ್ತಿದ್ದಾರೆ. ಇದುವರೆಗೆ 250 ಕುಟುಂಬಗಳಿಗೆ ಶಹನವಾಝ್ ನೆರವಾಗುತ್ತಿದ್ದಾರೆ. ತನ್ನ ಫೋರ್ಡ್ ಎಂಡೇವರ್ ಕಾರು ಮಾರಾಟ ಮಾಡಿ ಈ ಹಣದಲ್ಲಿ ಆಕ್ಸಿಜನ್ ಸಿಲಿಂಡರ್ ಉಚಿತವಾಗಿ ನೀಡುತ್ತಿದ್ದಾನೆ.

ಕೊರೋನಾ ಕೇಕೆ ನಡುವೆ ಪಶ್ಚಿಮ ಬಂಗಾಳದಿಂದ ಬಂತು ಸಿಹಿ ಸುದ್ದಿ!..

ಕಾರು ಮಾರಾಟ ಮಾಡುವ ಮುನ್ನು ಸೋಂಕಿತರನ್ನು ಉಚಿತವಾಗಿ ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ನೆರವಾಗುತ್ತಿದ್ದರು. ಶೆಹನವಾಜ್ ಕಾರು ಮಾರಾಟ ಮಾಡಿ ಆಕ್ಸಿಜನ್ ಸಿಲಿಂಡರ್ ನೀಡಲು ಮನಕಲುಕುವ ಕಾರಣವಿದೆ. 

ಶಹನವಾಜ್ ಶೈಕ್ ಬಿಸಿನೆಸ್ ಪಾರ್ಟ್ನರ್ ತಂಗಿ ಕೊರೋನಾ ವೈರಸ್‌ ತಗುಲಿ ತುರ್ತು ಚಿಕಿತ್ಸೆಯ ಅವಶ್ಯತೆ ಎದುರಾಗಿತ್ತು. ಮೇ. 28 ರಂದು ಬಿಸಿನೆಸ್ ಪಾರ್ಟ್ನರ್ ತಂಗಿಯನ್ನು ಆಸ್ಪತ್ರೆ ಸೇರಿಸುವ ಮಾರ್ಗ ಮದ್ಯದಲ್ಲೇ ಕೊನೆಯುಸಿರೆಳೆದಿದ್ದರು. ಆಸ್ಪತ್ರೆ ವೈದ್ಯರು ಆಕ್ಸಿಜನ್ ಸಿಲಿಂಡರ್ ಇದ್ದರೆ ಸೋಂಕಿತೆಯ ಪ್ರಾಣ ಉಳಿಯುತ್ತಿತ್ತು ಎಂದಿದ್ದರು. ತಕ್ಷಣವೇ ಶೆಹನವಾಜ್ ತನ್ನ ಕಾರು ಮಾರಾಟ ಮಾಡಿ, ನಿರ್ಗತಿಕರಿಗೆ ಆಕ್ಸಿಜನ್ ಸಿಲಿಂಡರ್ ಹಂಚಲು ಮುಂದಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?