ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!

By Kannadaprabha News  |  First Published Jun 24, 2020, 8:30 AM IST

ಪಾಕ್‌ಗಿಂತ ಚೀನಾ ಡೇಂಜರ್‌| ಚೀನಾ ಹಣಿಯಲು ಮೋದಿ ಸೂಕ್ತ: ಸಿವೋಟರ್‌ ಸಮೀಕ್ಷೆ| ಮೋದಿ ನಿರ್ಧಾರದ ಮೇಲೆ ಶೇ.89ರಷ್ಟುಜನಕ್ಕೆ ನಂಬಿಕೆ


ನವದೆಹಲಿ(ಜೂ.24): ಭಾರತ-ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವಾಗಲೇ, ಪಾಕಿಸ್ತಾನಕ್ಕಿಂತ ಚೀನಾವೇ ನಮಗೆ ದೊಡ್ಡ ಶತ್ರು ಎಂದು ದೇಶದ ಜನರು ಹೇಳಿದ್ದಾರೆ. ಅಲ್ಲದೆ ಚೀನಾಕ್ಕೆ ಪಾಠ ಕಲಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಸೂಕ್ತ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ನಾಯಕತ್ವದ ಬಗ್ಗೆ ತಮಗೆ ನಂಬಿಕೆಯಿಲ್ಲ ಎಂದೂ ಅರ್ಧಕ್ಕಿಂತ ಹೆಚ್ಚು ಜನರು ಹೇಳಿದ್ದಾರೆ.

"

Tap to resize

Latest Videos

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆಗೈದ ನಂತರ ಐಎಎನ್‌ಎಸ್‌ ಮತ್ತು ಸಿ-ವೋಟರ್‌ ಸಂಸ್ಥೆಗಳು ದೇಶದ ಜನರ ಮನದಿಂಗಿತ ತಿಳಿದುಕೊಳ್ಳಲು ಜಂಟಿಯಾಗಿ ತುರ್ತು ಸಮೀಕ್ಷೆಯೊಂದನ್ನು ನಡೆಸಿವೆ. ಅದರಲ್ಲಿ ಪಾಕಿಸ್ತಾನಕ್ಕಿಂತ ನಮಗೆ ಚೀನಾವೇ ದೊಡ್ಡ ಶತ್ರು. ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

'ಬಿಜೆಪಿ ಸರ್ಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲ'

ಚೀನಾಕ್ಕೆ ಸಡ್ಡು ಹೊಡೆಯಲು ಪ್ರಧಾನಿ ಮೋದಿ ಕೈಗೊಳ್ಳುವ ನಿರ್ಧಾರದಲ್ಲಿ ತಮಗೆ ನಂಬಿಕೆಯಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.89ರಷ್ಟುಜನರು ಹೇಳಿದ್ದಾರೆ. ಪಾಕಿಸ್ತಾನಕ್ಕಿಂತ ಚೀನಾವೇ ನಮಗೆ ದೊಡ್ಡ ಶತ್ರು ಎಂದು ಶೇ.68.3ರಷ್ಟುಜನರು ಹೇಳಿದ್ದಾರೆ. ಶೇ.31.7ರಷ್ಟುಜನರು ಮಾತ್ರ ಪಾಕಿಸ್ತಾನವೇ ದೊಡ್ಡ ಅಪಾಯ ಎಂದು ಹೇಳಿದ್ದಾರೆ. ಶೇ.60ರಷ್ಟುಜನರು ಚೀನಾಕ್ಕೆ ಭಾರತ ನೀಡಿರುವ ತಿರುಗೇಟು ಯಾತಕ್ಕೂ ಸಾಲದು, ಇನ್ನೂ ಕಠಿಣ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದಾರೆ. ಶೇ.39.8ರಷ್ಟುಜನರು ಮಾತ್ರ ಭಾರತ ಸರ್ಕಾರ ನೀಡಿದ ತಿರುಗೇಟು ಸಮರ್ಪಕವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ತಾವು ವಿರೋಧ ಪಕ್ಷಗಳು ಹೇಳುತ್ತಿರುವುದಕ್ಕಿಂತ ಸರ್ಕಾರವನ್ನೇ ನಂಬುತ್ತೇವೆ ಎಂದು ಶೇ.73.6ರಷ್ಟುಜನರು ಹೇಳಿದ್ದಾರೆ. ಕೇವಲ ಶೇ.16.7ರಷ್ಟುಜನರು ಮಾತ್ರ ವಿರೋಧ ಪಕ್ಷಗಳನ್ನು ನಂಬುತ್ತೇವೆ ಎಂದಿದ್ದಾರೆ.

ಇನ್ನು, ಚೀನಾದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಶೇ.68.2ರಷ್ಟುಜನರು ಹೌದು ಎಂದು ಉತ್ತರಿಸಿದ್ದಾರೆ. ಶೇ.31.8ರಷ್ಟುಜನರು ಚೀನಾ ಉತ್ಪನ್ನಗಳ ಖರೀದಿ ಭಾರತದಲ್ಲಿ ನಿಲ್ಲದು ಎಂದಿದ್ದಾರೆ. ಚೀನಾ ಸಂಘರ್ಷದ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ರಾಹುಲ್‌ ಗಾಂಧಿ ಕುರಿತೂ ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಶೇ.61.3ರಷ್ಟುಜನರು ರಾಷ್ಟ್ರೀಯ ಭದ್ರತೆಯಂತಹ ವಿಷಯದಲ್ಲಿ ತಾವು ರಾಹುಲ್‌ ಗಾಂಧಿಯನ್ನು ನಂಬುವುದಿಲ್ಲ ಎಂದಿದ್ದಾರೆ. ಶೇ.39ರಷ್ಟುಜನರು ರಾಹುಲ್‌ರನ್ನು ನಂಬುತ್ತೇವೆ ಎಂದಿದ್ದಾರೆ.

'ಸುಭದ್ರ ಆಡಳಿತ ನೀಡುವಲ್ಲಿ ಪ್ರಧಾನಿ ಮೋದಿ ಕೊಡುಗೆ ಅಪಾರ'

ಪಾಕ್‌ಗಿಂತ ಚೀನಾ ದೊಡ್ಡ ಶತ್ರು ಎಂದವರು| ಶೇ.68.3

ಪಾಕಿಸ್ತಾನವೇ ದೊಡ್ಡ ಅಪಾಯ ಎಂದವರು| ಶೇ.31.7

ಮೋದಿ ನಿರ್ಧಾರದ ಮೇಲೆ ನಂಬಿಕೆ ಇದೆ ಎಂದವರು| ಶೇ. 89

ರಾಹುಲ್‌ಗಾಂಧಿ ಮೇಲೆ ನಂಬಿಕೆ ಇಲ್ಲ ಎಂದವರು| ಶೇ.61.3

ರಾಷ್ಟ್ರೀಯ ಭದ್ರತೆ: ಮೋದಿ ನಂಬುವವರು| ಶೇ.73.3

ರಾಷ್ಟ್ರೀಯಭದ್ರತೆ ವಿಪಕ್ಷವನ್ನು ನಂಬುವವರು| ಶೇ.16.7

ಚೀನಾ ಉತ್ಪನ್ನ ಖರೀದಿಸಲ್ಲ ಎಂದವರು| ಶೇ.68.2

ಚೀನಾ ಉತ್ಪನ್ನ ಖರೀದಿ ನಿಲ್ಲದು ಎಂದವರು| ಶೇ.31.8

click me!