
ಚೆನ್ನೈ(ಏ.22) ಲೋಕಸಭಾ ಚನಾವಣೆ ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಮುಗಿದಿದ್ದು, ಇನ್ನುಳಿದ 6 ಹಂತದ ಚುನಾವಣೆ ಹಂತ ಹಂತವಾಗಿ ನಡೆಯಲಿದೆ. ತಮಿಳುನಾಡಿನಲ್ಲಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ನಿಟ್ಟುಸಿರು ಬಿಟ್ಟ ಚುನಾವಣಾ ಅಧಿಕಾರಿಗಳು ಇದೀಗ ಯುಕೆಜಿ ಬಾಲಕಿ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದ ಮೊಗಪ್ಪರ್ ಈಸ್ಟ್ ವೇಣುಗೋಪಾಲ್ ರಸ್ತೆಯಲ್ಲಿರುವ ಶಾಲೆಯಲ್ಲಿ ಮತದಾನ ನಡೆದಿತ್ತು. ಆದರೆ ಮತದಾನದ ಬಳಿಕ ಶಾಲಾ ಕೊಠಡಿ ಕಸ ಕಡ್ಡಿಗಳು, ಆಹಾರ ಸವಿದ ಪ್ಲೇಟು, ಖಾಲಿ ಬಾಟಲಿ, ಹರಿದ ಪೋಸ್ಟರ್‌ಗಳಿಂದ ತುಂಬಿತ್ತು. ಶಾಲಾ ಕೊಠಡಿ ನೋಡಿದ ಯುಕೆಜೆ ಬಾಲಕಿಗೆ ತೀವ್ರ ಬೆಸರವಾಗಿದೆ. ಅಚ್ಚುಕಟ್ಟಾಗಿ, ಚೊಕ್ಕವಾಗಿಟ್ಟಿದ್ದ ಶಾಲೆಯನ್ನು ಈ ಪಾಟಿ ಗಲೀಜು ಮಾಡಿದ್ದಕ್ಕೆ ಆಕ್ರೋಶಗೊಂಡ ಬಾಲಕಿ, ಚುನಾವಣಾ ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ. ನೀವು ಅಧಿಕಾರಿಗಳು, ಆದರೆ ಶಾಲಾ ಕೊಠಡಿಯನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನೋದು ಗೊತ್ತಿಲ್ಲವೇ ಎಂದು ವಿಡಿಯೋ ಮೂಲಕ ಪ್ರಶ್ನಿಸಿದ್ದಾಳೆ.
ಯುಕೆಜಿ ಬಾಲಕಿ ಅಂಹಿಸಾ ವಿಡಿಯೋ ಮೂಲಕ ಚುನಾವಣಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾಳೆ. ಶಾಲಾ ಕೊಠಡಿಯ ಟೇಬಲ್, ಚೇರ್ ಡ್ಯಾಮೇಜ್ ಆಗಿದೆ. ಗೋಡೆಗಳು ಅಂಟಿಸಿದ ಚುನಾವಣಾ ಪೋಸ್ಟರ್, ಹರಿದು ಹಾಕಿದ ಪೋಸ್ಟರ್‌ನಿಂದ ಕಳೆಗುಂದಿದೆ. ಆಹಾರ ತಿಂದ ಪ್ಲೇಟುಗಳು ಕೋಣೆಯಲ್ಲಿ ಹರಡಿದೆ. ಖಾಲಿ ಬಾಟಲಿ, ಕಸ ಕಡ್ಡಿಗಳಿಂದ ಶಾಲಾ ಕೊಠಡಿ ತುಂಬಿದೆ ಎಂದು ಅಂಹಿಸಾ ಹೇಳಿದ್ದಾಳೆ.
ಚುನಾವಣಾ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಹಣ ಜಪ್ತಿ ಮಾಡಿದ ಎಲೆಕ್ಷನ್ ಕಮಿಷನ್!
ನನ್ನ ಶಾಲೆಯ ಪರಿಸ್ಥಿತಿ ನೋಡಿ ಹೇಗಿದೆ? ಎಲ್ಲಾ ಕಸಕಡ್ಡಿಗಳನ್ನು ಕೊಠಡಿಯಲ್ಲಿ ಹಾಕಲಾಗಿದೆ. ನಿಮ್ಮ ಮನೆಯಾಗಿದ್ದರೆ ಈ ರೀತಿ ಮಾಡುತ್ತೀರಾ? ನೀವು ಅಧಿಕಾರಿಗಳು, ಶಾಲಾ ಕೊಠಡಿಯನ್ನು ಹೇಗೆ ಇಟ್ಟಕೊಳ್ಳಬೇಕು ಅನ್ನೋದು ಗೊತ್ತಿಲ್ಲವೇ? ನಾವು ಶಾಲಾ ಮಕ್ಕಳು ನಮ್ಮ ಶಾಲೆಯನ್ನು ಅತ್ಯಂತ ಶುಚಿಯಾಗಿಟ್ಟಿದ್ದೇವು. ಇದೀಗ ಶಾಲಾ ಕೊಠಡಿಗೆ ಪ್ರವೇಶಿಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ ಎಂದು ಅಂಹಿಸಾ ಹೇಳಿದ್ದಾಳೆ.
ಈ ಕುರಿತು ಶಿಕ್ಷಣ ಅಧಿಕಾರಿ ಶರಣ್ಯ ಆರಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಗಮನಕ್ಕೆ ಬಂದಿದೆ. ಬಾಲಕಿ ಪೋಷಕರು ವಿಡಿಯೋ ಶೂಟ್ ಮಾಡಿದ್ದಾರೆ. ಈ ಕುರಿತು ಸೂಚನೆ ನೀಡಲಾಗಿದೆ. ಶಾಲಾ ಕೊಠಡಿಯ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಚು. ಆಯೋಗದ ಮುಂದೆ ಟಿಎಂಸಿ ಪ್ರತಿಭಟನೆ: ಸಿಬಿಐ, ಇ.ಡಿ., ಐಟಿ, ಎನ್‌ಐಎ ಮುಖ್ಯಸ್ಥರ ಬದಲಿಸಲು ಮನವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ