Exclusive: ಲಂಡನ್‌ನ ಸ್ಟೋಕ್‌ಪಾರ್ಕ್‌ನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆ

By Santosh Naik  |  First Published Apr 22, 2024, 4:49 PM IST

ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ಜುಲೈನಲ್ಲಿ ಲಂಡನ್‌ನಲ್ಲಿ ನಡೆಯಲಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.
 


ನವದೆಹಲಿ (ಏ.22): ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಖೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ಪ್ರೀ ವೆಡ್ಡಿಂಗ್‌ ಸಮಾರಂಭ ಮಾರ್ಚ್‌ ತಿಂಗಳ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆದಿತ್ತು. ಜಗತ್ತಿನ ಖ್ಯಾತನಾಮ ತಾರೆಗಳು ಈ ಸಮಾರಮಭಕ್ಕೆ ಬಂದಿದ್ದರಿಂದ, ಪ್ರಿ ವೆಡ್ಡಿಂಗ್‌ ಸಮಾಂಭ ಜಗತ್ತಿನೆಲ್ಲೆಡೆ ಸುದ್ದಿಯಾಗಿತ್ತು. ಜಗತ್ತಿನ ಶ್ರೇಷ್ಠ ಪಾಪ್‌ ತಾರೆಯಾರದ ರಿಹಾನ, ಅಕಾನ್‌ ಮಾತ್ರವಲ್ಲದೆ, ಇಡೀ ಬಾಲಿವುಡ್‌ಗೆ ಬಾಲಿವುಡ್‌ಅನ್ನೇ ಮುಖೇಶ್‌ ಅಂಬಾನಿ ಜಾಮ್‌ನಗರಕ್ಕೆ ಕರೆಸಿದ್ದರು. ಹೆಚ್ಚಿನವರು ಇದು ಮದುವೆ ಸಮಾರಂಭ ಎಂದುಕೊಂಡಿದ್ದರು. ಆದರೆ, ಇದು ಪ್ರಿ ವೆಡ್ಡಿಂಗ್‌ ಕಾರ್ಯಕ್ರಮವಾಗಿತ್ತು. ಆದರೆ, ಮದುವೆ ಸಮಾರಂಭ ಇದಕ್ಕಿಂತ ಭಿನ್ನ ಹಾಗೂ ಇದಕ್ಕಿಂತ ಅದ್ದೂರಿಯಾಗಲಿರಲಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಮದುವೆ ಜುಲೈನಲ್ಲಿ ನಡೆಯಲಿದೆ ಎನ್ನಲಾಗಿತ್ತಾದರೂ, ಸ್ಥಳ ನಿಗದಿಯಾಗಿರಲಿಲ್ಲ.

ಆದರೆ, ಈಗ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ, ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ಜುಲೈನಲ್ಲಿ ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ನಡೆಯಲಿದೆ. ಮದುವೆಯ ಸಿದ್ದತೆಗಳು ಈಗಾಗಲೇ ಆರಂಭವಾಗಿದ್ದು, ನೀತಾ ಅಂಬಾನಿ ಎಲ್ಲದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಿ  ವೆಡ್ಡಿಂಗ್‌ ಕಾರ್ಯಕ್ರಮವನ್ನೂ ನೀತಾ ಅಂಬಾನಿ ಬಹಳ ಮುತುವರ್ಜಿಯಿಂದ ಮಾಡಿದ್ದರು. ಕಾರ್ಯಕ್ರಮದ ವೇಳೆ ಅನಂತ್‌ ಅಂಬಾನಿ ವೇದಿಕೆಯಲ್ಲಿಯೇ ತಮ್ಮ ತಾಯಿಗೆ ಕೃತಜ್ಞತೆ ಸಲ್ಲಿಸಿದ್ದರು.

Tap to resize

Latest Videos

ಅಬ್ಬಬ್ಬಾ..ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಮಕ್ಕಳ ಮದ್ವೆಗೆ ಖರ್ಚು ಮಾಡಿರೋದು ಇಷ್ಟೊಂದು ಕೋಟಿನಾ?

ಬ್ರಿಟನ್‌ನ ಐಕಾನಿಕ್‌ ಕಂಟ್ರಿ ಕ್ಲಬ್‌ ಮತ್ತು ಲಕ್ಷುರಿ ಗಾಲ್ಫ್‌ ರೆಸಾರ್ಟ್‌ ಆಗಿರುವ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ಅನ್ನು ಮುಖೇಶ್‌ ಅಂಬಾನಿ 2021ರಲ್ಲಿ ಬರೋಬ್ಬರಿ 592 ಕೋಟಿ ರೂಪಾಯಿ ಖರೀದಿ ಮಾಡಿದ್ದರು. ಅಂದಾಜು 900 ವರ್ಷಗಳ ಇತಿಹಾಸ ಹೊಂದಿರುವ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌, 1908ರವರೆಗೂ ಇದು ಖಾಸಗಿ ವ್ಯಕ್ತಿಗಳ ನಿವಾಸವಾಗಿತ್ತು ಎನ್ನುವುದು ಅಧಿಕೃತ ವೆಬ್‌ಸೈಟ್‌ನಲ್ಲಿದೆ. ಇದು 49 ಲಕ್ಷುರಿ  ಬೆಡ್‌ರೂಮ್‌ ಹೊಂದಿರುವ ಎಸ್ಟೇಟ್‌ ಆಗಿದ್ದು, 27 ಹೋಲ್‌ ಚಾಂಪಿಯನ್‌ಷಿಪ್‌ ಗಾಲ್ಫ್‌ ಕೋರ್ಸ್‌ ಆಗಿದೆ. 13 ಟೆನಿಸ್‌ಕೋರ್ಟ್‌ 14 ಎಕರೆ ಪ್ರೈವೇಟ್‌ ಗಾರ್ಡನ್‌ ಕೂಡ ಹೊಂದಿದೆ.

ಅಬ್ಬಬ್ಬಾ..ಅಂಬಾನಿ ಸೊಸೆ ಧರಿಸಿದ್ದ ಚಿನ್ನ, ಬೆಳ್ಳಿ ಕಸೂತಿಯ ಮಿರಿ ಮಿರಿ ಮಿಂಚೋ ಸೀರೆ ಬೆಲೆ ಇಷ್ಟೊಂದಾ?

ಇಲ್ಲಿನ ಅನೇಕ ಕೋಣೆಗಳ ಪೈಕಿ, ಪೆನ್ಸಿಲ್ವೇನಿಯಾ ಸೂಟ್ ಅತ್ಯಂತ ಜನಪ್ರಿಯವಾಗಿದೆ ಮತ್ತು 'ಬ್ರಿಡ್ಜೆಟ್ ಜೋನ್ಸ್ ಡೈರಿ' ಸಿನಿಮಾದಲ್ಲಿಯೂ ಇದು ಸಹ ಕಾಣಿಸಿಕೊಂಡಿದೆ. ವಿಂಟೇಜ್ ಪುರಾತನ ವಸ್ತುಗಳು ಮತ್ತು ಕಲಾಕೃತಿಗಳೊಂದಿಗೆ ಈ ಕೋಣೆ ಅಲಂಕೃತವಾಗಿದೆ. ರೆನೀ ಜೆಲ್ವೆಗ್ಗರ್, ಹಗ್ ಗ್ರಾಂಟ್ ಮತ್ತು ಕಾಲಿನ್ ಫಿರ್ತ್ ನಟಿಸಿದ 2001 ರ ಹಿಟ್ ಚಲನಚಿತ್ರದ 'ಮಿನಿ-ಬ್ರೇಕ್' ಮತ್ತು ರೋಯಿಂಗ್ ದೃಶ್ಯಗಳನ್ನು ಸ್ಟೋಕ್ ಪಾರ್ಕ್‌ನಲ್ಲಿ ಚಿತ್ರೀಕರಿಸಲಾಗಿತ್ತು.

click me!