'ಸನಾತನ ಅನ್ನೋದೇ ಏಕೈಕ ಧರ್ಮ, ಉಳಿದವೆಲ್ಲ..' ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮಾತು

By Santosh Naik  |  First Published Oct 3, 2023, 5:51 PM IST

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಡಿಎಂಕೆ ನಾಯಕ ಉದಯನಿಧಿ ಸ್ಟ್ಯಾಲಿನ್‌ ಅವರ ವಿವಾದಾತ್ಮಕ ಮಾತಿನ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಈ ಮಾತು ಹೇಳಿದ್ದಾರೆ.


ನವದೆಹಲಿ (ಅ.3): ಸನಾತನ ಧರ್ಮದ ಮಹತ್ವವನ್ನು ಒತ್ತಿಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಜಗತ್ತಿನಲ್ಲಿ ಸನಾತನ ಧರ್ಮ ಅನ್ನೋದೇ ಏಕೈಕ ಧರ್ಮವಾಗಿದೆ. ಉಳಿದವೆಲ್ಲವೂ ಪಂಥಗಳು ಅಥವಾ ಪೂಜಾ ವಿಧಾನಗಳಾಗಿವೆ ಎಂದು ಹೇಳಿದ್ದಾರೆ.  ಸನಾತನ ಧರ್ಮದ ಮೇಲಿನ ಯಾವುದೇ ದಾಳಿಯು ಇಡೀ ಮಾನವಕುಲವನ್ನು ಅಪಾಯಕ್ಕೆ ತಳ್ಳಬಹುದು ಎಂದು ತಿಳಿಸಿದ್ದಾರೆ. ಸನಾತನ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಅವರ ಹೇಳಿಕೆಯ ಬೆನ್ನಲ್ಲಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಮಾತು ಹೇಳಿದ್ದಾರೆ. ಸನಾತನ ಧರ್ಮ ಅನ್ನೋದು ಏಕೈಕ ಧರ್ಮ, ಉಳಿದವು ಎಲ್ಲಾ ಪಂಥಗಳು ಮತ್ತು ಪೂಜಾ ವಿಧಾನಗಳು. ಸನಾತನವು ಮಾನವೀಯತೆಯ ಧರ್ಮವಾಗಿದೆ ಮತ್ತು ಅದರ ಮೇಲಿನ ಯಾವುದೇ ದಾಳಿಯು ಇಡೀ ಮಾನವೀಯತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಆದಿತ್ಯನಾಥ್ ಅವರು ಗೋರಖ್‌ಪುರದ ಗೋರಖನಾಥ ದೇವಾಲಯದಲ್ಲಿ ನಡೆದ 'ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ'ದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

ಮಹಾಂತ್ ದಿಗ್ವಿಜಯ್ ನಾಥ್ ಅವರ 54 ನೇ ಪುಣ್ಯತಿಥಿ ಮತ್ತು ಮಹಂತ್ ಅವೈದ್ಯನಾಥ್ ಅವರ ಒಂಬತ್ತನೇ ಪುಣ್ಯತಿಥಿಯ ನಿಮಿತ್ತ ಏಳು ದಿನಗಳ ಯಾಗ ನಡೆಯಿತು. ದೇಗುಲದ ದಿಗ್ವಿಜಯ್ ನಾಥ್ ಸ್ಮೃತಿ ಸಭಾಂಗಣದಲ್ಲಿ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿದ ಗೋರಕ್ಷಪೀಠಾಧೀಶ್ವರ ಆದಿತ್ಯನಾಥ್, ಶ್ರೀಮದ್ ಭಾಗವತದ ಸಾರವನ್ನು ಅರಿಯಲು ಮುಕ್ತ ಮನಸ್ಸು ಹೊಂದುವ ಮಹತ್ವವನ್ನು ಒತ್ತಿ ಹೇಳಿದರು. "ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ವಿಶಾಲತೆಯನ್ನು ಗ್ರಹಿಸಲು ಹೆಣಗಾಡುತ್ತವೆ" ಎಂದು ಅವರು ಹೇಳಿದರು.

Tap to resize

Latest Videos

ಸನಾತನ ಧರ್ಮ ನಾಶ ಮಾಡ್ತೇವೆ ಎನ್ನುವವರಿಗೆ ಪಾಠ ಕಲಿಸಬೇಕು: ಆರೆಸ್ಸೆಸ್ ಮುಖಂಡ ಪಟ್ಟಾಭಿರಾಮ

ಆದಿತ್ಯನಾಥ್ ಅವರು ಏಳು ದಿನಗಳ ಕಾಲ ಕೇಳಿದ ಭಗವದ್ ಕಥಾ ಬೋಧನೆಗಳು ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ ಎಂದು ಭಕ್ತರಿಗೆ ಹೇಳಿದರು. "ಭಾಗವತ್ ಕಥೆಗಳಿಗೆ ಯಾವುದೇ ಮಿತಿಯಿಲ್ಲ ಮತ್ತು ನಿರ್ದಿಷ್ಟ ದಿನಗಳು ಅಥವಾ ಗಂಟೆಗಳಿಗೆ ಸೀಮಿತವಾಗಿರುವುದಿಲ್ಲ" ಎಂದು ಅವರು ಒತ್ತಿ ಹೇಳಿದರು. ಇದು ಅಂತ್ಯವಿಲ್ಲದೆ ಹರಿಯುತ್ತದೆ ಮತ್ತು ಭಕ್ತರು ತಮ್ಮ ಜೀವನದಲ್ಲಿ ಅದರ ಸಾರವನ್ನು ನಿರಂತರವಾಗಿ ಹೀರಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು. ಗೋರಕ್ಷಪೀಠಾಧೀಶ್ವರರು ಕೂಡ ಭಾರತೀಯರಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ, ಭಾರತದಲ್ಲಿ ಹುಟ್ಟುವುದು ಅಪರೂಪ, ಮನುಷ್ಯರಾಗಿ ಹುಟ್ಟುವುದೇ ಅಪರೂಪ ಎಂದು ಹೇಳಿದರು.

ಧರ್ಮ, ಸಂಸ್ಕೃತಿ, ಆಚರಣೆ ವಿರೋಧ ಪ್ರಚಾರಕ್ಕಾ? ಸನಾತನ ಧರ್ಮ ನಾಶ ಹೇಳಿಕೆ ಬೆಂಬಲಿಸ್ತಾರಾ ಭಗವಾನ್..?

click me!