ಮಹಾರಾಷ್ಟ್ರದಲ್ಲಿ ಬಿರುಸು ಪಡೆದ ದ್ವೇಷ ಹಗೂ ಹಗೆತನದ ರಾಜಕಾರಣ| ಬುಲೆಟ್ ರೈಲು ಯೋಜನೆ ಮರುಪರಿಶೀಲನೆಗೆ ಮುಂದಾದ ಉದ್ಧವ್ ಸರ್ಕಾರ| ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆ| ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ಕೋಕ್| ರೈತರು ಮತ್ತು ಬುಡಕಟ್ಟು ಜನಾಂಗದ ತೀವ್ರ ವಿರೋಧದ ಹಿನ್ನೆಲೆ| ಬುಲೆಟ್ ರೈಲು ಯೋಜನೆ ಮರುಪರಿಶೀಲಿಸುವುದಾಗಿ ಹೇಳಿದ ಉದ್ಧವ್|
ಮುಂಬೈ(ಡಿ.02): ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್’ಸಿಪಿ-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೇ, ದ್ವೇಷ ಹಗೂ ಹಗೆತನದ ರಾಜಕಾರಣ ಬಿರುಸು ಪಡೆದುಕೊಂಡಿದೆ.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ಮರುಪರಿಶೀಲಿಸಲು ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಮುಂದಾಗಿದೆ.
‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!
ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ ಸೇರಿದಂತೆ ಸದ್ಯ ಪ್ರಗತಿಯಲ್ಲಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಮರು ಪರಿಶೀಲಿಸುವಂತೆ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ.
ಈ ಕುರಿತು ಖುದ್ದು ಮಾಹಿತಿ ನೀಡಿರುವ ಉದ್ಧವ್ ಠಾಕ್ರೆ, ಬುಲೆಟ್ ರೈಲು ಯೋಜನೆಗೆ ರೈತರು ಮತ್ತು ಬುಡಕಟ್ಟು ಜನಾಂಗ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಯೋಜನೆ ಮರುಪರಿಶೀಲನೆಗೆ ಆದೇಶ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ರೈತರೇ ನಮ್ಮ ಆದ್ಯತೆ ಎಂದ ಶಿವಸೇನೆ, ಮೋದಿ ಬುಲೆಟ್ ರೈಲು ಯೋಜನೆಗೆ ವಿಘ್ನ!
ಸರ್ಕಾರ ಜನ ಸಾಮಾನ್ಯರ ಪರವಾಗಿದ್ದು, ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬುಲೆಟ್ ರೈಲು ಯೋಜನೆ ಮರುಪರಿಶೀಲಿಸುವುದಾಗಿ ಉದ್ಧವ್ ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ಹಣಕಾಸು ಸ್ಥಿತಿ ಕುರಿತು ರಾಜ್ಯ ಸರ್ಕಾರ ಶಿಘ್ರದಲ್ಲೇ ಶ್ವೇತಪತ್ರ ಹೊರಡಿಸುವುದಾಗಿ ಸಿಎಂ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.