ಮೃಗಾಲಯದಲ್ಲಿ ಹರಡುತ್ತಿದೆ ಕೊರೋನಾ; ಮತ್ತೆರಡು ಸಿಂಹದಲ್ಲಿ ಸೋಂಕು ಪತ್ತೆ

Published : Jun 10, 2021, 03:29 PM IST
ಮೃಗಾಲಯದಲ್ಲಿ ಹರಡುತ್ತಿದೆ ಕೊರೋನಾ; ಮತ್ತೆರಡು ಸಿಂಹದಲ್ಲಿ ಸೋಂಕು ಪತ್ತೆ

ಸಾರಾಂಶ

ಕೊರೋನಾ 2ನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ಮತ್ತೊಂದು ಆಘಾತ ಮೃಗಾಲಯದಲ್ಲಿ ತೀವ್ರವಾಗಿ ಹರಡುತ್ತಿದೆ ಕೊರೋನಾ ಮತ್ತೆರಡು ಸಿಂಹಕ್ಕೆ ದೃಢಪಟ್ಟ ಕೊರೋನಾ ಸೋಂಕು

ತಮಿಳುನಾಡು(ಜೂ.10): ಕೊರೋನಾ ವೈರಸ್ 2ನೇ ಅಲೆ ಕ್ಷೀಣಿಸುತ್ತಿದೆ. ಎಪ್ರಿಲ್ ತಿಂಗಳಿನಿಂದ ಉಲ್ಭಣಗೊಂಡ ಸೋಂಕು ಜೂನ್ ತಿಂಗಳ ಆರಂಭದಲ್ಲಿ ಕೊಂಚ ತಗ್ಗಿದೆ. ಆದರೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇದೀಗ ಮೃಗಾಲಯದ ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೆ ತಮಿಳುನಾಡಿನ ಅರಿನಗರ ಅಣ್ಣಾ ಮೃಗಾಲಯದಲ್ಲಿನ ಸಿಂಹವೊಂದು ಕೊರೋನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಇದೀಗ ಮತ್ತೆರಡು ಸಿಂಹಕ್ಕೆ ಕೊರೋನಾ ದೃಢಪಟ್ಟಿದೆ.

ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

ಅರಿಗನಗರ ಅಣ್ಣಾ ಮೃಗಾಲಯದಲ್ಲಿನ 2 ಸಿಂಹಗಳು ಆಸ್ವಸ್ಥಗೊಂಡಿದೆ. ಹೀಗಾಗಿ ತಕ್ಷಣವೇ ಮೃಗಾಲಯದ ಅಧಿಕಾರಿಗಳು ನಾಲ್ಕು ಹುಲಿ ಹಾಗೂ ಮೂರು ಸಿಂಹಗಳ ಮಾದರಿ ಸಂಗ್ರಹಿಸಿ ಐವಿಆರ್‌ಐ ಸಂಸ್ಥೆಗೆ ಕಳುಹಿಸಿದೆ. ಇದೀಗ ವರದಿ ಬಂದಿದ್ದು, 7 ಮಾದರಿಗಳ ಪೈಕಿ 2 ಸಿಂಹಗಳಿಗೆ ಕೊರೋನಾ ದೃಢಪಟ್ಟಿದೆ.

ನಾಲ್ಕು ಹುಲಿ ಹಾಗೂ ಮತ್ತೊಂದು ಸಿಂಹ ವರದಿ ನೆಗಟೀವ್ ಆಗಿದೆ. ಇದೀಗ ಸೋಂಕು ಕಾಣಿಸಿಕೊಂಡ ಸಿಂಹಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಮೃಗಾಲಯದಲ್ಲಿ ಸೋಂಕು ಹರಡದಂತೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ಅರಿನಗರ ಅಣ್ಣಾ ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮಧುರಮೈಲೆ ರಕ್ಷಿತಾರಣ್ಯದ 28 ಆನೆಗೆ ಕೋವಿಡ್ ಪರೀಕ್ಷೆ!...

ಜೂನ್ 5 ರಂದು ಇದೇ ಅರಿನಗರ ಮೃಗಾಲಯದ ಸಿಂಹವೊಂದು ಕೊರೋನಾಗೆ ಬಲಿಯಾಗಿತ್ತು. ಈ ಮೂಲಕ ಭಾರತದಲ್ಲಿ  ಕೊರೋನಾಗೆ ಬಲಿಯಾದ ಮೊದಲ ಪ್ರಾಣಿ ಎನಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆರೆಡು ಸಿಂಹಗಳು ಆಸ್ವಸ್ಥಗೊಂಡಿದೆ. ಇಷ್ಟೇ ಅಲ್ಲ ಕೊರೋನಾ ದೃಡಪಟ್ಟಿರುವುದು ಆತಂಕ ಹೆಚ್ಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌