ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ತಗಲಾಕೊಂಡ ಹುಡುಗೀರು, ಬೇಕಿತ್ತಾ ಇದೆಲ್ಲಾ!

Published : Jul 24, 2020, 04:10 PM ISTUpdated : Jul 24, 2020, 04:11 PM IST
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ತಗಲಾಕೊಂಡ ಹುಡುಗೀರು, ಬೇಕಿತ್ತಾ ಇದೆಲ್ಲಾ!

ಸಾರಾಂಶ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನದಿ ಮಧ್ಯಭಾಗಕ್ಕೆ ಹೋದ ಹುಡುಗಿಯರ ಕತೆ/ ಹರಿವ ನೀರಿನಲ್ಲಿ ಸಿಕ್ಕಾಕಿಕೊಂಡು ಒದ್ದಾಟ/ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಉಳಿದ ಗೆಳತಿಯರು/ ಸ್ಥಳೀಯರ ನೆರವಿನಿಂದ ಯುವತಿಯರ ರಕ್ಷಣೆ

ಭೋಪಾಲ್(ಜು. 24)   ಸೆಲ್ಫಿ ತೆಗೆದುಕೊಳ್ಳಬಬೇಕು ಎಂದು ಇಬ್ಬರು ಹುಡುಗಿಯರು ನದಿಯ ಮಧ್ಯಭಾಗದ ಬಂಡೆಯ ಮೇಲೆ ಹೋಗಿ ಪೋಸ್ ನೀಡುವ ತಯಾರಿ ಮಾಡಿದ್ದಾರೆ. ನದಿಯ ನೀರಿನ ಹರಿವು ಹೆಚ್ಚಾಗಿದ್ದು ಸಿಕ್ಕಿಹಾಕಿಕೊಂಡಿದ್ದಾರೆ.

ಮಧ್ಯಪ್ರದೇಶ ಚಿಂದ್ವಾರಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಗಿಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಜುನಾರ್ಡೋ ಪಟ್ಟಣದ ಆರು ಜನ ಹುಡುಗಿಯರು ಚಿಂದ್ವಾರಾದಿಂದ ಐವತ್ತು ಕಿಮೀ ದೂರದ ಪ್ರದೇಶಕ್ಕೆ ತೆರಳಿದ್ದರು.  ಪಿಕ್ ನಿಕ್ ಗೆಂದು ಪೆಂಚ್ ನದಿಯ ಬಳಿ ಹೋಗಿದ್ದರು.

ನಟಿ ತ್ರಿಷಾ ಸೆಲ್ಫಿಗೆ ಬಂದ ಕಮೆಂಟ್ ಅಯ್ಯಪ್ಪಾ!

12  ನೇ ತರಗತಿ ಓದುತ್ತಿರುವ ಮೇಘಾ ಜ್ವಾರೆ ಮತ್ತು ವಂದನಾ ತ್ರಿಪಾಠಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹರಿಯುವ ನದಿಯ ಮಧ್ಯಭಾಗಕ್ಕೆ ತೆರಳಿದ್ದಾರೆ.  ಇದ್ದಕ್ಕಿದಂತೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.  ಇದನ್ನು ಕಂಡು ಹೌಹಾರಿದ ಉಳಿದ ಗೆಳತಿಯರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಡಿವೈಎಸ್‌ಪಿ ಅಜಯ್ ವಾಗ್ಮೋರೆ ನೇತೃತ್ವದ ಹನ್ನೆರಡು ಜನ ಪೊಲೀಸರ ತಂಡ ರಕ್ಷಣಾ ಕಾರ್ಯಕ್ಕೆ ಬಂದಿದೆ.  ಸ್ಥಳೀಯರ ಸಹಕಾರದೊಂದಿಗೆ ಯುವತಿಯರ ರಕ್ಷಣೆ ಮಾಡಲಾಗಿದ್ದು ಸೋಶೀಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ