ನನಗೆ ಕೊರೋನಾ ನೆಗೆಟಿವ್‌ ಬಂದಿಲ್ಲ, ವರದಿ ಸುಳ್ಳು: ಅಮಿತಾಭ್‌ ಸ್ಪಷ್ಟನೆ

Published : Jul 24, 2020, 03:44 PM ISTUpdated : Jul 24, 2020, 04:13 PM IST
ನನಗೆ ಕೊರೋನಾ ನೆಗೆಟಿವ್‌  ಬಂದಿಲ್ಲ, ವರದಿ ಸುಳ್ಳು:  ಅಮಿತಾಭ್‌ ಸ್ಪಷ್ಟನೆ

ಸಾರಾಂಶ

ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂಬ ವರದಿಗಳು ಭಾರೀ ಸದ್ದು ಮಾಡುತ್ತಿದೆ. ಆದರೆ, ತಾವಿನ್ನೂ ಕೋವಿಡ್‌-19ನಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಮುಂಬೈ (ಜು. 24):  ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂಬ ವರದಿಗಳು ಭಾರೀ ಸದ್ದು ಮಾಡುತ್ತಿದೆ. ಆದರೆ, ತಾವಿನ್ನೂ ಕೋವಿಡ್‌-19ನಿಂದ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿ ಮಾಧ್ಯಮದ ವಿಡಿಯೋವೊಂದರ ತುಣುಕನ್ನು ಟ್ವೀಟ್‌ ಮಾಡಿದ ಅಮಿತಾಭ್‌, ‘ನಾನಿನ್ನೂ ಕೊರೋನಾದಿಂದ ಸಂಪೂರ್ಣ ಗುಣಮುಖನಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಕೊರೋನಾ ಗೆದ್ದಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ ಎಂದು ಹರಿದಾಡುತ್ತಿದೆ.

 

'ಸಮಯ ಸಿಕ್ಕಿದೆ' ಆಸ್ಪತ್ರೆಯಲ್ಲಿರುವ ಅಮಿತಾಬ್‌ ಹಂಚಿಕೊಂಡ ಜೀವನ ಪಾಠ

ಆದರೆ, ಇದು ಸಂಪೂರ್ಣ ಸುಳ್ಳು, ಬೇಜವಾಬ್ದಾರಿ, ಸರಿಪಡಿಸಲಾಗದ ಸುಳ್ಳು ಹಾಗೂ ತಪ್ಪು ಮಾಹಿತಿ’ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಕೊರೋನಾದಿಂದ ಬಳಲುತ್ತಿರುವ ಅಮಿತಾಭ್‌ ಬಚ್ಚನ್‌, ಪುತ್ರ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯ ಬಚ್ಚನ್‌ ಹಾಗೂ ಮೊಮ್ಮಗಳು ಆರಾಧ್ಯಾ ಇಲ್ಲಿನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!