ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ!

By Suvarna News  |  First Published Jul 24, 2020, 4:04 PM IST

ಚೀನಾ ಗಡಿ ಖ್ಯಾತೆ ತೆಗೆದ ಬೆನ್ನಲ್ಲೇ ಕೇಂದ್ರ ಸರ್ಕಾರ 59 ಚೀನಾ ಮೂಲದ ಆ್ಯಪ್ ನಿಷೇಧಿಸಿ ಆರ್ಥಿಕ ಹೊಡೆತ ನೀಡಿತ್ತು. ಇದೀಗ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಚೀನಾ ಮೂಲಕ ಬಹುತೇಕ ಎಲ್ಲಾ ಆ್ಯಪ್ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ನವದೆಹಲಿ(ಜು.24): ಚೀನಾ ಗಡಿ ಖ್ಯಾತೆ ತೆಗೆದ ಬಳಿಕ ಭಾರತ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿತ್ತು. ಇದುರ ನಡುವೆ ಚೀನಾ ಸೇನೆ ಆಕ್ರಮಣ ನಡೆಸಿತ್ತು. ರೊಚ್ಚಿಗೆದ್ದ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿತ್ತು. ಇತ್ತ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್ ನಿಷೇಧಿಸಿ, ಆರ್ಥಿಕ ಹೊಡೆತ ನೀಡಿತು. ಈ ಬೆಳವಣಿಗೆ ಬಳಿಕ ಚೀನಾ ಆ್ಯಪ್ ಮೇಲೆ ಹದ್ದಿನ ಕಣ್ಣಿಟ್ಟಿದ ಕೇಂದ್ರ ಸರ್ಕಾರ ಇದೀಗ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್ ಮಾಡಲು ನಿರ್ಧರಿಸಿದೆ.

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

Tap to resize

Latest Videos

undefined

ಕಳೆದ ತಿಂಗಳು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಭಾರತದ ಸುರಕ್ಷತೆಯ ದೃಷ್ಟಿಯಿಂದ 59 ಚೀನಾ ಮೂಲದ ಆ್ಯಪ್ ನಿಷೇಧಿಸಿತ್ತು. Lite(ಲೈಟ್) ವರ್ಶನ್ ಆ್ಯಪ್ ಇನ್ನೂ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಗೂಗಲ್ ಪ್ಲೇ ಸ್ಟೂರ್‌ನಿಂದ ಎಲ್ಲಾ ಆ್ಯಪ್‌ಗಳು ಡಿಲೀಟ್ ಆಗಿವೆ. ಆದರೆ ಚೀನಾ ಮೊಬೈಲ್‌ಗಳಲ್ಲಿ ಲೈಟ್ ವರ್ಶನ್ ಕೆಲ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿದೆ

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!.

ಹೀಗಾಗಿ ಲೈಟ್ ವರ್ಶನ್ ಹಾಗೂ ಮತ್ತಷ್ಟು ಚೀನಾ ಮೂಲದ ಆ್ಯಪ್ ನಿಷೇಧಿಸಲು ಮಾಹಿತಿ ಮತ್ತು ತಂತ್ರಜ್ಞಾನ್ ಸಚಿವಾಲಯ ಮುಂದಾಗಿದೆ. ಈ ಮೂಲಕ ಚೀನಾದ ಬಹುತೇಕ ಎಲ್ಲಾ ಆ್ಯಪ್‌ಗಳು ಭಾರತದಲ್ಲಿ ನಿಷೇಧಕ್ಕೆ ಒಳಗಾಗಲಿದೆ. 

ಕಳೆದ ತಿಂಗಳು ಟಿಕ್‌ಟಾಕ್, ಶೇರ್‌ಇಟ್, ಹೆಲೋ ಆ್ಯಪ್, ಯುಸಿ ಬ್ರೌಸರ್, ಎಂಐ ವಿಡಿಯೋ ಕಾಲ್, ಕ್ಯಾಮ್ ಸ್ಕಾನರ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ 59 ಪ್ರಮುಖ ವಿಡಿಯೋ ಆ್ಯಪ್ ಬ್ಯಾನ್ ಆಗಿದೆ. 

click me!