'ಇದು ಶಿವದೇಗುಲ' ಎಂದು ತಾಜ್‌ಮಹಲ್‌ನಲ್ಲಿ ಗಂಗಾಜಲ ಅರ್ಪಿಸಿದ ಇಬ್ಬರ ಬಂಧನ

By Kannadaprabha News  |  First Published Aug 4, 2024, 9:22 AM IST

ಆಗ್ರಾದ ಪ್ರಸಿದ್ಧ ಪ್ರವಾಸಿ ಸ್ಥಳ ತಾಜ್‌ಮಹಲ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತಂದಿದ್ದ 'ಗಂಗಾಜಲ' ಅರ್ಪಿಸಿದ ಬಲಪಂಥೀಯ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ.


ಆಗ್ರಾ: ಆಗ್ರಾದ ಪ್ರಸಿದ್ಧ ಪ್ರವಾಸಿ ಸ್ಥಳ ತಾಜ್‌ಮಹಲ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತಂದಿದ್ದ 'ಗಂಗಾಜಲ' ಅರ್ಪಿಸಿದ ಬಲಪಂಥೀಯ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ.  ಬಲಪಂಥೀಯ ಸಂಘಟನೆಯಾದ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರೆಂದು ಹೇಳಿಕೊಂಡ ಇಬ್ಬರು ಶ್ರಾವಣ ಶನಿವಾರ ಸಂದರ್ಭದಲ್ಲಿ ತಾಜ್‌ಮಹಲ್‌ ಒಳಗೆ ಟಿಕೆಟ್‌ ಪಡೆದು ಪ್ರವೇಶಿಸಿದ್ದಾರೆ. ಈ ವೇಳೆ ಸಮಾಧಿಯ ನೆಲಮಾಳಿಗೆಗೆ ಹೋಗುವ ಸಂದರ್ಭದಲ್ಲಿ ಮುಚ್ಚಿದ ಮೆಟ್ಟಿಲಿನ ಮೇಲೆ ನೀರಿನ ಬಾಟಲಿಯಲ್ಲಿದ್ದ ಗಂಗಾ ಜಲವನ್ನು ಅರ್ಪಿಸಿದ್ದಾರೆ. ಇವರು ನೀರು ಸುರಿಯುತ್ತಿದ್ದಂತೆ, ಭದ್ರತಾ ಸಿಬ್ಬಂದಿಯು ಇಬ್ಬರನ್ನೂ ಬಂಧಿಸಿದ್ದಾರೆ.

ತಾಜ್‌ಮಹಲ್‌ ಶಿವಮಂದಿರವಾಗಿದೆ. ಅದರ ಮೂಲ ಹೆಸರು 'ತೇಜೋಮಹಲ್‌' ಹೀಗಾಗಿ ಪವಿತ್ರ ಗಂಗಾಜಲ ಅರ್ಪಿಸಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ತಾಜ್‌ಮಹಲ್‌ ತೇಜೋಮಹಲ್‌ ಎಂದು ಬದಲಾಯಿಸಬೇಕು ಎಂಬ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಇಬ್ಬರು ಗಂಗಾಜಲ ಸುರಿಯುತ್ತಿರುವ ವಿಡಿಯೋ ವೈರಲ್‌ ಆಗಿದೆ. ಕೆಲ ದಿನಗಳ ಹಿಂದಷ್ಟೇ ಅಖಿಲ ಬಾರತ ಹಿಂದೂ ಮಹಾಸಭಾದ ಸದಸ್ಯೆಯೊಬ್ಬರು ಗಂಗಾಜಲ ಅರ್ಪಿಸುವುದಕ್ಕೆ ಯತ್ನಿಸಿದ್ದರು.

Tap to resize

Latest Videos

ಇದೆಂಥಾ ಪ್ರೀತಿ! ಎಲ್ಲಾ ಕಾನೂನು ಮೀರಿ ಕೈದಿಗೆ ತಾಜ್‌ ಮಹಲ್‌ ತೋರಿಸಲು ಕರೆದುಕೊಂಡು ಬಂದ ಪೊಲೀಸ್‌!

ಸೀಟು ಕೆಳದರ್ಜೆಗೆ ಇಳಿಕೆ: ಏರಿಂಡಿಯಾ ವಿರುದ್ಧ ರಿಕಿ ಕೇಜ್ ಕಿಡಿ

ನವದೆಹಲಿ: ಏರಿಂಡಿಯಾ ವಿಮಾನವು ಗುರುತರ ಬ್ರಾಂಡ್‌ ಆಗಲು ಯೋಗ್ಯವಲ್ಲ. ಏಕೆಂದರೆ ಹೇಳದೇ ಕೇಳದೇ ನನ್ನ ಬಿಸಿನೆಸ್‌ ಕ್ಲಾಸ್ ಸೀಟನ್ನು ಸೀಟ್‌ ಡೀಗ್ರೇಡ್‌ ಮಾಡಲಾಗಿದೆ ಎಂದು 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕ್ಕಿ ಕೇಜ್‌ ಅಸಮಧಾನ ಹೊರಹಾಕಿದ್ದಾರೆ.

ಶನಿವಾರ ಮುಂಬೈನಿಂದದ ಬೆಂಗಳೂರಿಗೆ ಕೇಜ್‌ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. ಆಗ ನಡೆದ ಘಟನೆ ಬಗ್ಗೆ ಎಕ್ಸ್‌ನಲ್ಲಿ ಅಸಮಾಧಾನ ತೋಡಿಕೊಂಡಿರುವ ಕೇಜ್‌,‘ ಏರ್‌ ಇಂಡಿಯಾ ಹೇಳದೆ ಕೇಳದೆ, ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ನಿಂದ ಕೆಳ ಸ್ತರದ ಸೀಟ್‌ ಕೊಟ್ಟಿದೆ. ನನ್ನ ಟಿಕೆಟ್‌ ಹಣವನ್ನೂ ಮರಳಿಸಲಿಲ್ಲ. ಇದನ್ನು ಕೇಳಿದ್ದಕ್ಕೆ ಸಿಬ್ಬಂದಿ ತುಂಬಾ ರೋಷವಾಗಿ ವರ್ತಿಸಿದ್ದಾರೆ. ಈ ಘಟನೆ ವರ್ಷದಲ್ಲಿ ಮೂರನೇಯದ್ದಾಗಿದ್ದು, ಏರ್‌ ಇಂಡಿಯಾ ಬ್ರಾಂಡ್‌ ಆಗಲು ಯೋಗ್ಯವಲ್ಲದ ಸಂಸ್ಥೆ ಎಂದು ಕಿಡಿಕಾರಿದ್ದಾರೆ.

ತಾಜ್ ಮಹಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಹಿಂದೂ ಮಹಾಸಭಾ, ಮಾ.4ಕ್ಕೆ ವಿಚಾರಣೆ!

ಇದಕ್ಕೆ ಪ್ರತಿಕ್ರಿಯಿಸಿದ ಏರ್‌ ಇಂಡಿಯಾ, ಖಾಸಗಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಎಂದು ಹೇಳಿದೆ. ಆದರೆ ಇದಕ್ಕೆ ಒಪ್ಪದ ರಿಕ್ಕಿ ಕೇಜ್‌ ‘ನನಗೆ ಶೇ.100ರಷ್ಟು ಹಣ ಮರುಪಾವತಿ ಆಗದಿದ್ದರೆ, ಕೋರ್ಟ್‌ ಮೊರೆ ಹೋಗುತ್ತೇನೆ’ ಎಂದು ಎಚ್ಚರಿಸಿದ್ದಾರೆ.

ವಿಶ್ವಪ್ರಸಿದ್ಧ ತಾಜ್‌ಮಹಲ್ ವಾಸ್ತುಶಿಲ್ಪಿಯ ಸಂಬಳ ಇವತ್ತಿನ ಬೃಹತ್ ಕಂಪೆನಿ ಸಿಇಒಗಳಿಗಿಂತಲೂ ಹೆಚ್ಚು!

click me!