
ಮುಂಬೈ (ಮೇ.01) ಕಲ್ಲಂಗಡಿ ಹಣ್ಣು ತಿಂದು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಹಲವರು ಮನೆಯಲ್ಲಿ ತಂದಿದ್ದ ಕಲ್ಲಂಗಡಿ ಹಣ್ಣನ್ನೇ ಕಸದು ಬುಟ್ಟಿಗೆ ಎಸೆದಿದ್ದರು. ಬೇಸಿಗೆಯಲ್ಲಿ ಬಹುತೇಕರು ಸವಿಯುತ್ತಿದ್ದ ಕಲ್ಲಂಗಣಿ ಹಣ್ಣು ವಿಷಕಾರಿಯಾಗಿ ಕಂಡಿತ್ತು. ಮುಂಬೈನಲ್ಲಿ ಅಬ್ದುಲ್ಲಾ ದಕೋಡಿಯಾ ಕುಟುಂಬ ತಡ ರಾತ್ರಿ ಕಲ್ಲಂಗಡಿ ಹಣ್ಣು ತಿಂದು ಬೆಳಗ್ಗೆ ಮೃತಪಟ್ಟ ಘಟನೆ ಕೋಲಾಹಲಕ್ಕೆ ಕಾರಣಾಗಿತ್ತು. ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರವಲ್ಲ, ಈ ಸಾವಿನ ಹಿಂದೆ ವಿಷದ ಅಂಶ ಇದೆ ಅನ್ನೋ ಮಾಹಿತಿಗಳು ಬಯಲಾಗಿದೆ.
ಅಬ್ದುಲ್ಲಾ ದಕೋಡಿಯಾ ಕುಟುಂಬ ಕಲ್ಲಂಗಣಿ ಹಣ್ಣು ತಿಂದು ಸಾವನ್ನಪ್ಪಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣಾಗಿತ್ತು. ಸದ್ಯ ಫೊರೆನ್ಸಿಕ್ ಪರೀಕ್ಷೆ ಬೆರೆ ಕತೆ ಹೇಳುತ್ತಿದೆ. ಮೃತರ ದೇಹದ ಮೆದುಳು, ಹೃದಯ ಸೇರಿದಂತೆ ಕೆಲ ಭಾಗಗಳು ಹಸಿರು ಬಣ್ಣಕ್ಕೆ ತಿರುಗಿದೆ. ಈ ವರದಿಯನ್ನು ವೈದ್ಯರ ವಿಶ್ಲೇಶಿಸಿದ್ದಾರೆ. ಫುಡ್ ಪಾಯ್ಸನ್‌ನಿಂದ ಈ ರೀತಿ ಆಗಲು ಸಾಧ್ಯವಿಲ್ಲ. ಇದು ಪ್ರಮುಖ ವಿಷಕಾರಿ ವಸ್ತು ದೇಹದೊಳಕ್ಕೆ ಸೇರಿದೆ ಎಂಬ ಮಾಹಿತಿಗಳು ಬಯಲಾಗಿದೆ.
ಅಬ್ದುಲ್ಲಾ ದಕೋಡಿಯಾ ದೇಹದಲ್ಲಿನ ವಿಷಕಾರಿ ಅಂಶಗಳ ಕುರಿತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದೆ. ಈ ವೈದ್ಯಕೀಯ ವರದಿಯ ಪ್ರಾಥಮಿಕ ಮಾಹಿತಿ ಪ್ರಕಾರ ನೋವಿನ ಮಾತ್ರೆ(ಮೊರ್ಫೈನ್), ಪೊಟೆಂಟ್ ಪೈನ್‌ಕಿಲ್ಲರ್ಸ್ ಸೇರಿದಂತೆ ಕೆಲ ಅಪಯಕಾರಿ ಅಂಶಗಳು ಅಬ್ದುಲ್ಲಾ ದಕೋಡಿಯಾ ದೇಹದಲ್ಲಿ ಪತ್ತೆಯಾಗಿದೆ ಅನ್ನೋ ವರದಿ ಬಹಿರಂಗವಾಗಿದೆ. ಇದೇ ವೇಳೆ ರಾಜ್ಯ ಆಹಾರ ಸಚಿವಾಲಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತ ವರದಿ, ಪರೀಕ್ಷೆಗಳ ವರದಿ ತರಿಸಿಕೊಂಡಿದ್ದಾರೆ. ಇತ್ತ ಈ ಸಾವಿನ ಹಿಂದೆ ನೇರವಾಗಿ ಕಲ್ಲಂಗಡಿ ಹಣ್ಣ ಹಾಗೂ ಅದರಲ್ಲಿನ ವಿಷಕಾರಕ ಅಂಶಗಳು ಕಾಣುತ್ತಿಲ್ಲ ಎಂದಿದ್ದಾರೆ. ಅಧಿಕೃತ ವರದಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
45ರ ಹರೆಯದ ಅಬ್ದುಲ್ಲಾ ದಕೋಡಿಯಾ, ಪತ್ನಿ 35 ವರ್ಷದ ನಸ್ರೀನ್, ಮಕ್ಕಳಾದ 13 ವರ್ಷದ ಝೈನಬ್ ಹಾಗೂ 16 ವರ್ಷದ ಅವೆಶಾ ದುರಂತ ಅಂತ್ಯಕಂಡಿದ್ದರು. ಅಬ್ದುಲ್ಲಾ ದಕೋಡಿಯಾ ತಮ್ಮ ಮನೆಗೆ ಕುಟುಂಬದ ಆಪ್ತರನ್ನು ಊಟಕ್ಕೆ ಆಹ್ವಾನಿಸಿದ್ದರು. ಕುಟುಂಬಸ್ಥರಿಗಾಗಿ ಮಟನ್ ಬಿರಿಯಾನಿ ಮಾಡಲಾಗಿತ್ತು. ಅಬ್ದುಲ್ಲಾ ಹಾಗೂ ಆಹ್ವಾನಿತ ಕುಟುಂಬಸ್ಥರು ಜೊತೆಯಾಗಿ ಬಿರಿಯಾನಿ ಸವಿದಿದ್ದಾರೆ. ಕೆಲ ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದಾರೆ. ಬಳಿಕ ಆಹ್ವಾನಿತ ಕುಟುಂಬಸ್ಥರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಇದಾದ ಬಳಿಕ ತಡ ರಾತ್ರಿ 1 ಗಂಟೆ ಸುಮಾರಿಗೆ ಅಬ್ದುಲ್ಲಾ ದಕೋಡಿಯಾ ಕುಟುಂಬ ಕಲ್ಲಂಗಡಿ ಹಣ್ಣು ತಿಂದು ಮಲಗಿದೆ. ಮರು ದಿನ ಬೆಳಗ್ಗೆ 5 ರಿಂದ 6 ಗಂಟೆ ವೇಳೆ ಅಬ್ದುಲ್ಲಾ ದಕೋಡಿಯಾ ಇಡಿ ಕುಟುಂಬ ಅಸ್ವಸ್ಥಗೊಂಡಿದೆ. ನಾಲ್ವರನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ