Maha Vikas Aghadi ಸರ್ಕಾರಕ್ಕೆ 2 ವರ್ಷ : ಜನರಿಗೆ ಧನ್ಯವಾದ ಅರ್ಪಿಸಿದ ಉದ್ಧವ್ ಠಾಕ್ರೆ!

By Suvarna NewsFirst Published Nov 28, 2021, 2:23 PM IST
Highlights

*ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ MVA ಯಶಸ್ವಿ 
*ಎಲ್ಲಾ ಪ್ರಯತ್ನಗಳಲ್ಲಿ ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ : ಠಾಕ್ರೆ
*ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಸರ್ಕಾರಕ್ಕೆ 2 ವರ್ಷ
 

ಮುಂಬೈ(ನ.28): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra CM Uddhav Thackeray) ಅವರು ತಮ್ಮ ಸರ್ಕಾರದ ಎರಡು ವರ್ಷಗಳ ಅಧಿಕಾರಾವಧಿಯ ಬಹುಪಾಲು ಭಾಗವನ್ನು ಕೋವಿಡ್‌ 19 (Covid 19) ನಿರ್ವಹಣೆಗೆ ವ್ಯಯ ಮಾಡಲಾಗಿದೆ ಮತ್ತು ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ಮಹಾ ವಿಕಾಸ್ ಅಘಾಡಿ (Maha Vikas Aghadi) ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.  ತಮ್ಮ ಎರಡು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಹೇಳಿಕೆ ನೀಡಿರುವ ಉದ್ದವ್, ತಮ್ಮ ಸರ್ಕಾರವನ್ನು ಅದರ ಎಲ್ಲಾ ಪ್ರಯತ್ನಗಳಲ್ಲಿ ಬೆಂಬಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ ಮತ್ತು ಇದು "ಜನರ ಸರ್ಕಾರ" ಎಂದು ಹೇಳಿದ್ದಾರೆ.  ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ  ಉದ್ಧವ  ಠಾಕ್ರೆ ಚೇತರಿಸಿಕೊಳ್ಳುತ್ತಿದ್ದಾರೆ.

ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ MVA ಯಶಸ್ವಿ!

"ಮಾನವ ನಿರ್ಮಿತ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನಾವು ಗಾಬರಿಯಾಗಲಿಲ್ಲ.  ನಮ್ಮ ಗಮನವು ಶ್ರೀಸಾಮಾನ್ಯನ (Comman Man) ಕಲ್ಯಾಣದತ್ತ ಉಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಭಾಗವು COVID-19 ನಿರ್ವಹಣೆಯಲ್ಲಿಯೇ ವ್ಯಯಿಸಿದ್ದೇವೆ. ನಾವು ಬಿಕ್ಕಟ್ಟನ್ನು (Crisis)  ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದೇವೆ,"  ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಯೋಗಿಗೆ ಚಪ್ಪಲಿಯಲ್ಲಿ ಹೊಡೀಬೇಕು ಎಂದಿ​ದ್ದ ಠಾಕ್ರೆ ಹಳೇ ವಿಡಿಯೋ ಈಗ ವೈರ​ಲ್‌!

"ಎರಡು ವರ್ಷಗಳ ಹಿಂದೆ ಇದ್ದ ಆರೋಗ್ಯ, ವೈದ್ಯಕೀಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಮತ್ತು ಇವತ್ತಿನ ಮೂಲಸೌಕರ್ಯಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಾಗ ಸರ್ಕಾರ ಮತ್ತು ಆಡಳಿತದಲ್ಲಿ ಯಾವುದೇ ನಕಾರಾತ್ಮಕತೆ ಇರಲಿಲ್ಲ.ಕೈಗಾರಿಕಾ ಹೂಡಿಕೆ, ಕೃಷಿ ಮೂಲಸೌಕರ್ಯ, ವಸತಿ, ಉದ್ಯೋಗ, ನೀರು ಪೂರೈಕೆ, ಸೌರಶಕ್ತಿ, ಪರಿಸರ, ಪ್ರವಾಸೋದ್ಯಮ, ಅರಣ್ಯವನ್ನು ಸುಧಾರಿಸುವಲ್ಲಿ ನಾವು ಶ್ರಮಿಸಿದ್ದೇವೆ ಮತ್ತು ಸರ್ಕಾರದ ಪ್ರಯತ್ನಗಳು ಸಾಮಾನ್ಯ ಜನರ ಕಲ್ಯಾಣವನ್ನು ಹೇಗೆ ಖಾತ್ರಿಪಡಿಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಲಾಗಿದೆ" ಎಂದು ಠಾಕ್ರೆ ಹೇಳಿದ್ದಾರೆ.

₹20,000 ಕೋಟಿಗಳಷ್ಟು ರೈತರ ಸಾಲ ಮನ್ನಾ!

ಅಲ್ಲದೇ  ಮಹಾತ್ಮ ಜ್ಯೋತಿರಾವ್ ಫುಲೆ ಕೃಷಿ ಸಾಲ ಮನ್ನಾ (Mahatma Jyotirao Phule farm loan waiver) ಯೋಜನೆಯಡಿ ₹ 20,000 ಕೋಟಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದೆ.ರಾಜ್ಯ ಸರ್ಕಾರವು ಆಸ್ಪತ್ರೆಗಳಿಗೆ ₹ 2,600 ಕೋಟಿ ನೀಡಿದ್ದು, ಮಹಾತ್ಮಾ ಜ್ಯೋತಿರಾವ್ ಫುಲೆ ಜನ್ ಆರೋಗ್ಯ ಯೋಜನೆಯಡಿ 14.4 ಲಕ್ಷ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ  ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!

2019 ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ, ಠಾಕ್ರೆ ನೇತೃತ್ವದ ಶಿವಸೇನೆಯು (Shiva Sena) ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ವಿಷಯದ ಬಗ್ಗೆ ದೀರ್ಘಕಾಲದ ಮಿತ್ರ ಬಿಜೆಪಿಯಿಂದ (BJP) ಬೇರ್ಪಟ್ಟಿತು. ನಂತರ ಅದು ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ರಚಿಸಲು ಎನ್‌ಸಿಪಿ (NCP) ಮತ್ತು ಕಾಂಗ್ರೆಸ್ (Congress) ಜೊತೆ ಮೈತ್ರಿ ಮಾಡಿಕೊಂಡಿತ್ತು.

Omicron Variant: ಕೋವಿಡ್‌ ನಿಯಮ ಮೀರಿದರೆ ದಂಡ ಗ್ಯಾರಂಟಿ!

ಲಸಿಕೆಗೂ ಬಗ್ಗದ ಮತ್ತು ತೀವ್ರವಾಗಿ ಹಬ್ಬುವ ಸಾಮರ್ಥ್ಯದ ‘ಒಮಿಕ್ರೋನ್‌’ (Omicron) ರೂಪಾಂತರಿ ತಳಿಯ ಆತಂಕಗಳ ಬೆನ್ನಲ್ಲೇ, ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುವುದಾಗಿ ಮಹಾರಾಷ್ಟ್ರ ಸರ್ಕಾರ (Maharashtra Governemet) ಘೋಷಿಸಿದೆ. ಈ ಕುರಿತಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray) ನೇತೃತ್ವದ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವ ವ್ಯಕ್ತಿಗೆ 500 ರು. ದಂಡ ವಿಧಿಸಲಾಗುತ್ತದೆ ಎಂದು ಘೋಷಿಸಿದೆ. ಅಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಸೇವೆ (Public Transport) ಬಳಸಲು ಎರಡೂ ಡೋಸ್‌ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯ. ಮಾಲ್‌ಗಳ ಸಿಬ್ಬಂದಿ, ಖರೀದಿಗೆ ಬರುವ ಗ್ರಾಹಕರು ಸೇರಿದಂತೆ ಇನ್ನಿತರರು ಲಸಿಕೆ ಪ್ರಮಾಣಪತ್ರ ಪಡೆದಿರಲೇಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

click me!