Indian Independence: ಕಾಂಗ್ರೆಸ್ ಹೇಳಿ ಕೊಟ್ಟಿದ್ದು ತಪ್ಪು ಇತಿಹಾಸವೆಂದ ಎಂಪಿ ಸಿಎಂ

Suvarna News   | Asianet News
Published : Nov 28, 2021, 12:57 PM IST
Indian Independence: ಕಾಂಗ್ರೆಸ್ ಹೇಳಿ ಕೊಟ್ಟಿದ್ದು ತಪ್ಪು ಇತಿಹಾಸವೆಂದ ಎಂಪಿ ಸಿಎಂ

ಸಾರಾಂಶ

ಭೋಪಾಲ್‌: ಮಹಾತ್ಮಗಾಂಧಿ, ಜವಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ(Indira Gandhi) ಮುಂತಾದ ಕಾಂಗ್ರೆಸ್‌ ನಾಯಕರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಾಂಗ್ರೆಸ್‌ ತಪ್ಪಾದ ಇತಿಹಾಸವನ್ನು ಕಲಿಸಿದೆ ಎಂದು ಮಧ್ಯಪ್ರದೇಶ ಸಿಎಂ(Madhya Pradesh CM) ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ.  

ಭೋಪಾಲ್‌: ಮಹಾತ್ಮಗಾಂಧಿ, ಜವಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ(Indira Gandhi) ಮುಂತಾದ ಕಾಂಗ್ರೆಸ್‌ ನಾಯಕರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಾಂಗ್ರೆಸ್‌ ತಪ್ಪಾದ ಇತಿಹಾಸವನ್ನು ಕಲಿಸಿದೆ ಎಂದು ಮಧ್ಯಪ್ರದೇಶ ಸಿಎಂ(Madhya Pradesh CM) ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ.  ಅವರು, ಆದಿವಾಸಿಗಳ ಕ್ರಾಂತಿಕಾರಿ ನಾಯಕ ತಂತ್ಯಾ ಭಿಲ್‌ ಅಕ ತಂತ್ಯಾ ಮಾಮಾ(Tantya Bhil aka Tantya mama) ಅವರ ಜನ್ಮಸ್ಥಳ ಬರೋಡಾ ಅಹೀರ್‌(Baroda Aheer)ನಲ್ಲಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಗೌರವ್‌ ಕಳಸ್‌ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮಗೆ ಸರಿಯಾದ ಇತಿಹಾಸವನ್ನು ಕಲಿಸಿಲ್ಲ. ಕೇವಲ ಮಹಾತ್ಮ ಗಾಂಧಿಜೀ(Mahatma Gandhi ji), ಜವಹರ್‌ ಲಾಲ್‌ ನೆಹರೂ ಹಾಗೂ ಇಂದಿರಾ ಗಾಂಧಿ ಇವರು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ನಮಗೆ ಶಾಲೆಗಳಲ್ಲಿ ಹೇಳಿ ಕೊಟ್ಟರು. ನಾನು ಮಹಾತ್ಮ ಗಾಂಧಿ ಅವರಿಗೆ  ನಮಿಸುತ್ತೇನೆ ಅವರು ವಿಶ್ವಗುರು ಆದರೆ ಕಾಂಗ್ರೆಸ್‌ ಮಾತ್ರ ನಮಗೆ ತಪ್ಪಾದ ಇತಿಹಾಸವನ್ನು ಹೇಳಿ ಕೊಟ್ಟಿದೆ ಎಂದು ಅವರು ಆರೋಪಿಸಿದರು.  

ತಂತ್ಯಾ ಮಾಮ, ರಾಣಿ ಲಕ್ಷ್ಮಿಬಾಯಿ(Rani Laxmibai), ನಾನಾ ಸಾಹೇಬ್‌ ಪೇಶ್ವೆ, ಭೀಮ ನಾಯಕ್‌, ರಘುನಾಥ್‌ ಶಾ( Raghunath Shah), ಶಂಕರ್‌ ಶಾ, ಬಿರ್ಸಾ ಮುಂಡಾ( Birsa Munda) ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ  ದೇಶಕ್ಕಾಗಿ ಪ್ರಾಣತೆತ್ತ ಅನೇಕ ನಾಯಕರ ಜೀವನ ಹಾಗೂ ಸಾಧನೆ  ಬಗ್ಗೆ ನಮಗೆ ಗೊತ್ತೇ ಇಲ್ಲ. ಇವರ ಬಗ್ಗೆ ಜನರಿಗೆ ತಿಳಿಸಿ ಕೊಟ್ಟಿಲ್ಲ ಎಂದು ಸಿಎಂ ಚೌಹಾಣ್‌ ಹೇಳಿದರು. ಇದೆ ವೇಳೆ ಆದಿವಾಸಿ ನಾಯಕ ಬಿರ್ಸಾ ಮುಂಡಾ (Birsa Munda)ಸ್ಮರಣಾರ್ಥ ಅವರ ಜನ್ಮ ವಾರ್ಷಿಕೋತ್ಸವದ ದಿನವನ್ನು ಜನತಾ ಗೌರವ್‌ ದಿವಸ್‌ ಎಂದು ಘೋಷಣೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ  ಚೌಹಾಣ್‌ ಧನ್ಯವಾದ ತಿಳಿಸಿದರು. 

India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ತಂತ್ಯಾ ಮಾಮಾ ಹಣ ಕಸಿಯುವ ಲೇವದೇವಿದಾರರ ಶೋಷಣೆಯ ವಿರುದ್ಧ ಹಾಗೂ ಬ್ರಿಟಿಷರ ವಿರುದ್ಧ ಸಶ್ತ್ರಾಸ್ತ್ರದೊಂದಿಗೆ ಹೋರಾಟ ನಡೆಸಿದ್ದರು. ಬ್ರಿಟಿಷ್‌ ಸರ್ಕಾರದ ಖಜಾನೆಯನ್ನು ದೋಚುತ್ತಿದ್ದ ತಂತ್ಯಾ ಮಾಮಾ ಅದನ್ನು ಬಡವರಿಗೆ ಹಂಚುತ್ತಿದ್ದರು. ನಂತರದಲ್ಲಿ ಬ್ರಿಟಿಷರಿಗೆ ಸೆರೆ ಸಿಕ್ಕ ತಾಂತ್ಯಾ ಮಾಮಾ ಅವರನ್ನು ಬ್ರಿಟಿಷರು ಜಬಲ್‌ಪುರದ ಜೈಲಿ(Jabalpur jail)ನಲ್ಲಿ ನೇಣುಗಂಬಕ್ಕೇರಿಸಿದರು. ತಾಂತ್ಯಾ ಮಾಮಾ ಅವರ ಬಗೆಗಿನ  ನಿಜವಾದ ಇತಿಹಾಸವನ್ನು ಬಿಜೆಪಿ ಸರ್ಕಾರ(BJP government) ತಿಳಿಸಲಿದೆ ಎಂದು ಚೌಹಾಣ್‌ ಹೇಳಿದರು. 

ಆದಿವಾಸಿ ವಿಶ್ವವಿದ್ಯಾನಿಲಯಕ್ಕೆ ಆದಿವಾಸಿ ಸಮುದಾಯದ ಮಹಾನ್‌ ನಾಯಕರ ಹೆಸರನ್ನು ಇಡುವುದನ್ನು ಬಿಟ್ಟು ಕಾಂಗ್ರೆಸ್‌ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನಿಟ್ಟಿರುವುದು ದುಃಖದ ವಿಚಾರ. ಕಾಂಗ್ರೆಸ್‌ ಕೇವಲ ಒಂದು ಕುಟುಂಬವನ್ನು ಮಾತ್ರ ವೈಭವೀಕರಿಸುತ್ತಿದ್ದು, ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಉಳಿದ ಹುತಾತ್ಮರ ಬಗ್ಗೆ ಮರೆತು ಬಿಟ್ಟಿದೆ. ಆದರೆ ಬಿಜೆಪಿ ಈ ಐತಿಹಾಸಿಕವಾದ ತಪ್ಪನ್ನು ಸರಿಪಡಿಸಲಿದೆ ಎಂದರು. 

ಹಸುಗಳು, ಸಗಣಿ, ಗೋಮೂತ್ರವು ಆರ್ಥಿಕತೆಗೆ ವೇಗ ನೀಡುತ್ತವೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್!

ಇದೇ ಸಂದರ್ಭದಲ್ಲಿ ತಂತ್ಯಾ ಭಿಲ್‌ ವಂಶದವರನ್ನು ಸನ್ಮಾನಿಸಿದ ಸಿಎಂ, ತಂತ್ಯಾ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದರು. ತಂತ್ಯಾ ಸ್ಮರಣಾರ್ಥ ಚಾಲನೆ ನೀಡಲ್ಪಟ್ಟ 'ಗೌರವ ಕಳಸ ಯಾತ್ರಾ' ವೂ ಮಧ್ಯಪ್ರದೇಶ ರಾಜ್ಯದ ಹಲವೆಡೆ ಸಂಚರಿಸಿ, ತಂತ್ಯಾ ಅವರು ಹುತಾತ್ಮರಾದ ದಿನವಾದ  ಡಿಸೆಂಬರ್‌ 4ರಂದು ಪತ್ಲಾಪಾನಿಯಲ್ಲಿ ಸಮಾರೋಪಗೊಳ್ಳಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!