
ಮುಂಬೈ(ಅ.06): ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ರೈಲು ಹಳಿ ಮಾರ್ಗದಲ್ಲಿ ಮೊದಲ ಸುರಂಗ ನಿರ್ಮಾಣವು ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ನ್ಯಾಷನಲ್ ಹೈಸ್ಪೀಡ್ ರೈಲು ಕಾರ್ಪೋರೇಶನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ತಿಳಿಸಿದೆ.
ಗುಜರಾತ್‌ನ ವಲ್ಸದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಇರುವ ಈ ಸುರಂಗವನ್ನು ಹೊಸ ಆಸ್ಟ್ರಿಯನ್ ಸುರಂಗ ವಿಧಾನ (ಎನ್‌ಎಟಿಎಂ) ಬಳಸಿಕೊಂಡು ಪರ್ವತ ಕೊರೆದು 10 ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುರಂಗವು 350 ಮೀಟರ್ ಉದ್ದ, 12.6 ಮೀ. ವ್ಯಾಸ ಹಾಗೂ 10.25 ಮೀ. ಎತ್ತರ ಹೊಂದಿದೆ.
Bullet Train : ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ನಡುವೆ ಹೈಸ್ಪೀಡ್ ರೈಲು!
ಈ ಬುಲೆಟ್ ರೈಲು ಮಾರ್ಗದಲ್ಲಿ ಒಟ್ಟು 7 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಎಚ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ. ಒಟ್ಟು 1.08 ಲಕ್ಷ ಕೋಟಿ ರು. ವೆಚ್ಚದಲ್ಲಿ ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಯೋಜನೆ ನಿರ್ಮಾಣವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ