ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಜನ ಮೃತಪಟ್ಟಿದ್ದು, ಈ ಬಗ್ಗೆ ಮಹಾರಾಷ್ಟ್ರ ಸರ್ಕಾರವು, ಲಾಂಗ್ ವೀಕೆಂಡ್‌ನಲ್ಲಿ ಮುಚ್ಚಿದ ಖಾಸಗಿ ಆರೋಗ್ಯ ಘಟಕಗಳ ಮೇಲೆ ಆರೋಪ ಹೊರಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ (ಅಕ್ಟೋಬರ್ 5, 2023): ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 72 ಗಂಟೆಗಳಲ್ಲಿ 31 ಸಾವುಗಳಾಗಿದ್ದು, ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜನರು ಹಾಗೂ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಕಿಡಿ ಕಾರಲಾಗ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ತನ್ನ ತಪ್ಪನ್ನು ಹೇಗೆ ಸಮರ್ಥನೆ ಮಾಡಿಕೊಂಡಿದೆ ನೋಡಿ..
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 31 ಜನ ಮೃತಪಟ್ಟಿದ್ದು, ಈ ಬಗ್ಗೆ ಭಾರಿ ಹಿನ್ನಡೆಯನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಸರ್ಕಾರವು, ಲಾಂಗ್ ವೀಕೆಂಡ್‌ನಲ್ಲಿ ಮುಚ್ಚಿದ ಖಾಸಗಿ ಆರೋಗ್ಯ ಘಟಕಗಳ ಮೇಲೆ ಆರೋಪ ಹೊರಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದ ಬಾಂಬೆ ಹೈಕೋರ್ಟ್ ಏಕನಾಥ್ ಶಿಂಧೆ ಸರ್ಕಾರದಿಂದ ವಿವರವಾದ ಪ್ರತಿಕ್ರಿಯೆಯನ್ನು ಕೇಳಿದೆ. ಹಾಗೂ, ಆರೋಗ್ಯ ರಕ್ಷಣಾ ಘಟಕಗಳಲ್ಲಿ ಔಷಧಿಗಳು, ಹಾಸಿಗೆಗಳು ಮತ್ತು ಸಿಬ್ಬಂದಿ ಕೊರತೆ ಸ್ವೀಕಾರಾರ್ಹವಲ್ಲ ಎಂದೂ ಅದು ಹೇಳಿದೆ.
undefined
ಇದನ್ನು ಓದಿ: ಡೀನ್ ಕೈಯಲ್ಲಿ ಆಸ್ಪತ್ರೆ ಶೌಚಾಲಯ ಕ್ಲೀನ್ ಮಾಡಿಸಿದ್ದ ಮಹಾ ಸಂಸದನ ವಿರುದ್ಧ SCST ಕಾಯ್ದೆಯಡಿ ಕೇಸ್
ಇದಕ್ಕೆ ಮಹಾರಾಷ್ಟ್ರ ಸರ್ಕಾರವು ಡಾ.ಶಂಕರರಾವ್ ಚವ್ಹಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಖಾಸಗಿ ಆಸ್ಪತ್ರೆಗಳು ಮತ್ತು ನಾಂದೇಡ್‌ನಲ್ಲಿರುವ ಆಸ್ಪತ್ರೆಗಳು ಬ್ಯಾಕ್ ಟು ಬ್ಯಾಕ್ ರಜೆಯ ಕಾರಣದಿಂದ ಕಡಿಮೆ ಸಿಬ್ಬಂದಿಯನ್ನು ಹೊಂದಿದ್ದವು ಎಂದು ನ್ಯಾಯಾಲಯಕ್ಕೆ ತಿಳಿಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಗಳು ಗಂಭೀರ ಪ್ರಕರಣಗಳನ್ನು, ಅದರಲ್ಲಿ ಹೆಚ್ಚಿನ ಪ್ರಕರಣಗಳಾದ ನವಜಾತ ಶಿಶುಗಳನ್ನು ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಿ ಕಳಿಸಿದ್ದಾರೆ. ಮತ್ತು ಇದು ನಾಂದೇಡ್ ಸೌಲಭ್ಯದಲ್ಲಿ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಲು ಸಜ್ಜಾಗಿದೆ. ನಾಂದೇಡ್ ಆಸ್ಪತ್ರೆಯಲ್ಲಿ ವರದಿಯಾದ ಕನಿಷ್ಠ 10 ನವಜಾತ ಶಿಶುಗಳ ಸಾವಿಗೆ ಖಾಸಗಿ ಆರೋಗ್ಯ ಘಟಕಗಳು ಕಾರಣವಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 2 ದಿನದಲ್ಲಿ 31 ಸಾವು, ನಾಂದೇಡ್ ಆಸ್ಪತ್ರೆಯ ಡೀನ್‌ನಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಶಿವಸೇನಾ ಸಂಸದ!
ಇನ್ನೊಂದೆಡೆ, ಮಹಾರಾಷ್ಟ್ರ ಸರ್ಕಾರವು ನ್ಯಾಯಾಲಯದಲ್ಲಿ ಹೇಗೆ ಪ್ರತಿಕ್ರಿಯಿಸಲು ಯೋಜಿಸುತ್ತಿದೆ ಎಂಬುದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮಶ್ರಿಫ್, ಮರಣ ಹೊಂದಿದ 10 ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಂದ ಬಂದಿವೆ ಹಾಗೂ ಶಿಶುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಗಂಭೀರ ಸ್ಥಿತಿಯಲ್ಲಿದ್ದವು’’ ಎಂದಿದ್ದಾರೆ. ಹಾಗೂ, ರಾಜ್ಯ ಸರ್ಕಾರ ಸಮಿತಿ ರಚಿಸಿ ಪ್ರತಿ ಸಾವಿನ ಲೆಕ್ಕಪರಿಶೋಧನೆ ನಡೆಸಿದೆ ಎಂದು ಸಚಿವರು ತಿಳಿಸಿದರು. ಈ ಎಲ್ಲಾ ವಿಷಯಗಳನ್ನು ನಾವು ನ್ಯಾಯಾಲಯದ ಮುಂದೆ ಇಡುತ್ತೇವೆ ಎಂದೂ ಅವರು ಹೇಳಿದರು.
ಈ ಮಧ್ಯೆ, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ನಾಂದೇಡ್ ಆಸ್ಪತ್ರೆಯಲ್ಲಿ ಔಷಧಿಗಳ ಅಥವಾ ವೈದ್ಯರ ಕೊರತೆ ಇಲ್ಲ ಎಂದು ಸಮರ್ಥಿಸಿಕೊಂಡಿದೆ. ಇನ್ನು, ನವಜಾತ ಶಿಶುವಿನ ಸಂಬಂಧಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ನಂತರ ಆಸ್ಪತ್ರೆಯ ಡೀನ್ ಮತ್ತು ಇನ್ನೊಬ್ಬ ವೈದ್ಯರ ಮೇಲೆ ತಪ್ಪಿತಸ್ಥ ನರಹತ್ಯೆ ಪ್ರಕರಣದಲ್ಲಿ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ: 24 ಗಂಟೆಯ ಒಳಗೆ ಸರ್ಕಾರಿ ಆಸ್ಪತ್ರೆಯಲ್ಲಿ 12 ಮಕ್ಕಳು ಸೇರಿದಂತೆ 24 ಮಂದಿ ಸಾವು!