ಟುಕ್ಡೆ ಟುಕ್ಡೆ ಗ್ಯಾಂಗ್ ಇರೋದು ಸತ್ಯ ಎಂದ ತರೂರ್: ಆದರೆ....!

By Suvarna NewsFirst Published Jan 22, 2020, 2:20 PM IST
Highlights

'ಟುಕ್ಡೆ ಟುಕ್ಡೆ ಗ್ಯಾಂಗ್ ಅಸ್ತಿತ್ವದಲ್ಲಿ ಇರುವುದು ಸತ್ಯ'| ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯ| ಟುಕ್ಡೆ ಟುಕ್ಡೆ ಗ್ಯಾಂಗ್ ಸರ್ಕಾರ ರಚಿಸಿ ದೇಶವನ್ನಾಳುತ್ತಿದೆ ಎಂದ ತರೂರ್| ದೇಶ ಒಡೆಯುವವರೇ ಸರ್ಕಾರದಲ್ಲಿದ್ದಾರೆ ಎಂದ ಕಾಂಗ್ರೆಸ್ ಸಂಸದ| ಟುಕ್ಡೆ ಟುಕ್ಡೆ ಗ್ಯಾಂಗ್ ಅಸ್ತಿತ್ವ ಪ್ರಶ್ನಿಸಿ ಗೃಹ ಇಲಾಖೆಗೆ ಆರ್‌ಟಿಐ| ಇಂತಹ ಸಮೂಹ ಅಸ್ತಿತ್ವದಲ್ಲಿ ಇಲ್ಲ ಎಂದಿದ್ದ ಗೃಹ ಇಲಾಖೆ|

ನವದೆಹಲಿ(ಜ.22): ದೇಶದಲ್ಲಿ ಟುಕ್ಡೆ ಟುಕ್ಡೆ (ದೇಶವನ್ನು ಒಡೆಯುವ ಸಮೂಹ) ಗ್ಯಾಂಗ್ ಇರುವುದು ಸತ್ಯ ಎಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಗ್ಯಾಂಗ್ ಈಗ ಸರ್ಕಾರ ರಚಿಸಿ ದೇಶವನ್ನು ಆಳುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಹಾಗೂ ಕೇಂದ್ರ ಸರ್ಕಾರ ದೇಶದಲ್ಲಿ ಟುಕ್ಡೆ ಟುಕ್ಡೆ ಗ್ಯಾಂಗ್ ಅಸ್ತಿತ್ವದಲ್ಲಿದೆ ಎಂದು ಹೇಳುತ್ತಿದೆ. ಇದು ನಿಜವಾಗಿದ್ದು, ಈ ಗ್ಯಾಂಗ್ ಸರ್ಕಾರವನ್ನು ಆಳುತ್ತಿದೆ ಎಂದು ತರೂರ್ ವಾಗ್ದಾಳಿ ನಡೆಸಿದ್ದಾರೆ.

ಶಾ ಇತಿಹಾಸ ಪಾಠ ಗಮನವಿಟ್ಟು ಕೇಳಿಲ್ಲ: ಕಾಲೆಳೆದ ತರೂರ್!

ಜೆಎನ್‌ಯು ಹೋರಾಟಗಾರರನ್ನು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುವ ವಿರೋಧಿಗಳನ್ನು ದೇಶದ್ರೋಹಿಗಳೆಂದು ಬಿಜೆಪಿ ಕರೆಯುತ್ತಿದೆ. ಆದರೆ ಅಸಲಿಗೆ ಅವರೇ ಈ ಗ್ಯಾಂಗ್‌ನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಆರೋಪಿಸಿದರು.

The tukde-tukde gang does exist. They are running the Government and dividing the nation. pic.twitter.com/s4AaZKJLzH

— Shashi Tharoor (@ShashiTharoor)

ದೇಶದಲ್ಲಿ ಟುಕ್ಡೆ ಟುಕ್ಡೆ ಗ್ಯಾಂಗ್ ಅಸ್ತಿತದಲ್ಲಿ ಇದೆಯೇ ಎಂದು ಮಾಹಿತಿ ಬಯಸಿ ಕೇಂದ್ರ ಗೃಹ ಇಲಾಖೆಗೆ ಆರ್‌ಟಿಐ ಸಲ್ಲಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೃಹ ಇಲಾಖೆ, ಇಂತಹ ಯಾವುದೇ ಸಮೂಹ ಅಸ್ತಿತ್ವದಲ್ಲಿ ಇರುವುದು ಅನುಮಾನ ಎಂದು ಹೇಳಿತ್ತು.

ಮೋದಿ ಬಿಜೆಪಿಯ ಉತ್ಪನ್ನ, ಮಾರುಕಟ್ಟೆ ಚೆನ್ನಾಗಿ ಮಾಡಿದರು: ತರೂರ್!

ಇದಕ್ಕೆ ತಿರುಗೇಟು ನೀಡಿರುವ ಶಶಿ ತರೂರ್, ಟುಕ್ಡೆ ಟುಕ್ಡೆ ಗ್ಯಾಂಗ್ ಅಸ್ತಿತ್ವದಲ್ಲಿದ್ದು, ಆ ಗ್ಯಾಂಗ್ ಸರ್ಕಾರ ರಚಿಸಿ ದೇಶವನ್ನು ಆಳುತ್ತಿರುವುದು ಗೃಹ ಇಲಾಖೆಗೆ ಗೊತ್ತಿಲ್ಲವೇ ಎಂದು ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

click me!