ಕಾಲ್‌ಗರ್ಲ್ ಬೇಕೆಂದು ಫೋನ್ ಮಾಡಿದ: ಪತ್ನಿಯೇ ಎದುರಿಗೆ ಬಂದಾಗ ಏನ್ಮಾಡಿದ?

Suvarna News   | Asianet News
Published : Jan 22, 2020, 01:19 PM ISTUpdated : Jan 23, 2020, 01:15 PM IST
ಕಾಲ್‌ಗರ್ಲ್ ಬೇಕೆಂದು ಫೋನ್ ಮಾಡಿದ: ಪತ್ನಿಯೇ ಎದುರಿಗೆ  ಬಂದಾಗ ಏನ್ಮಾಡಿದ?

ಸಾರಾಂಶ

ಕಾಲ್‌ಗರ್ಲ್ ರೂಪದಲ್ಲಿ ಪತ್ನಿ ಎದುರಿಗೆ ಬಂದಾಗ..| ಕಾಲ್‌ಗರ್ಲ್ ಬಯಸಿ ಫೋನ್ ಮಾಡಿದವನಿಗೆ  ಸಿಕ್ಕಿದ್ದು ಪತ್ನಿ| ಉತ್ತರಾಖಂಡ್‌ನ ಕಾಶಿಪುರ್‌ದಲ್ಲಿ ನಡೆದ ವಿಚಿತ್ರ ಘಟನೆ| ಹೊಟೇಲ್‌ನಲ್ಲಿ ಬಡಿದಾಡಿಕೊಂಡ ಪತಿ ಪತ್ನಿ| ಪತ್ನಿ ವೈಶ್ಯಾವಾಟಿಕೆ ಮಾಡುತ್ತಿರುವ ಆರೋಪ ಮಾಡಿದ ಪತಿ| ಪತಿಯ ಅಸಲಿಯತ್ತು ತಿಳಿಯಲು ಹೋಟೆಲ್‌ಗೆ ಬಂದಿದ್ದಾಗಿ ತಿಳಿಸಿದ ಪತ್ನಿ| ಪತಿ-ಪತ್ನಿ ಜಗಳ ಕಂಡು ಸುಸ್ತಾದ ಪೊಲೀಸರು|

ಕಾಶಿಪುರ್(ಜ.22): ಪತಿ-ಪತ್ನಿ ಸಂಬಂಧ ಅದೊಂದು ಅನೋನ್ಯ ಅನುಬಂಧ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪವಿತ್ರ ಸಂಬಂಧಕ್ಕೆ ಮಸಿ ಬಳಿಯವುದು ದೇವರಿಗೆ ಅನ್ಯಾಯ ಮಾಡಿದಂತೆಯೇ ಸರಿ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಉತ್ತರಾಖಂಡ್‌ನ ಕಾಶಿಪುರ್‌ದಲ್ಲಿ ನಡೆದ ವಿಚಿತ್ರ ಘಟನೆ. ಈ ಗಟನೆಯಲ್ಲಿ ನೈಜ ಆರೋಪಿ ಯಾರೂ ಎಂಬುದು ತಿಳಿಯದೇ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪತ್ನಿಯ ನಡೆ ಬಗ್ಗೆ ಅನುಮಾನಗೊಂಡಿದ್ದ ಪತಿಯೋರ್ವ ದಲ್ಲಾಳಿ ಮೂಲಕ ಕಾಲ್‌ಗರ್ಲ್ ಕರೆಸಿಕೊಂಡಿದ್ದ.  ಆದರೆ ಕಾಲ್‌ಗರ್ಲ್ ಆಗಿ ಆತನ ಪತ್ನಿಯೇ ಬಂದಿದ್ದು, ಇದನ್ನು ಕಂಡ ಪತಿ ದಿಗ್ಭ್ರಾಂತಗೊಂಡಿದ್ದಾನೆ.

ವರನ ಅಪ್ಪ, ವಧುವಿನ ಅಮ್ಮ ಪರಾರಿ: ನವಜೋಡಿ ಕುಳಿತಿದೆ ಹೌಹಾರಿ!

ಹೌದು, ಇಲ್ಲಿನ ಕಾಶಿಪುರ್‌ದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದ್ದು, ಪತ್ನಿ  ವೈಶ್ಯಾವಾಟಿಕೆಯಲ್ಲಿ ತೊಡಗಿರುವ ಕುರಿತು ಅನುಮಾನಪಟ್ಟಿದ್ದ ಪತಿ, ಉದ್ದೇಶಪೂರ್ವಕವಾಗಿ ಕಾಲ್‌ಗರ್ಲ್‌ಗಾಗಿ ದಲ್ಲಾಳಿಯನ್ನು ಸಂಪರ್ಕಿಸಿದ್ದ.

ಅದರಂತೆ ದಲ್ಲಾಳಿ ಆತ ತಂಗಿದ್ದ ಹೋಟೆಲ್‌ಗೆ ಕಾಲ್‌ಗರ್ಲ್‌ ಬಂದಾಗ, ಆಕೆ ಆತ ಪತ್ನಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ಭಾರೀ ರಂಪಾಟವೇ ನಡೆದಿದ್ದು, ಕೈ ಕೈ ಮೀಲಾಯಿಸಿ ಕಿತ್ತಾಡಿಕೊಂಡಿದ್ದಾರೆ.

ಮದುವೆಯಾದ ಮೇಲೆ ಗಂಡನ ಜೊತೆಗೆ ಇರುವುದನ್ನು ನಿಲ್ಲಿಸಿದ್ದ ಪತ್ನಿ, ಹೆಚ್ಚಾಗಿ ತವರು ಮನೆಯಲ್ಲೇ ಇರುತ್ತಿದ್ದಳು. ಅಲ್ಲದೇ ಹಣಕ್ಕಾಗಿ ವೈಶ್ಯಾವಾಟಿಕೆ ನಡೆಸುತ್ತಿದ್ದಳು ಎನ್ನಲಾಗಿದೆ. ಈ ಕುರಿತು ಆಕೆಯ ಗೆಳತಿಯೇ ಗಂಡನಿಗೆ ಮಾಹಿತಿ  ನೀಡಿದ್ದಳು.

ಪತ್ನಿಯ ಗೆಳತಿ ಹೇಳಿದ್ದನ್ನು ಕೇಳಿ ದಂಗಾದ ಪತಿ, ತನ್ನ ಪತ್ನಿಯ ಅಸಲಿಯತ್ತು ಅರಿಯಲು ತಾನೇ ಖುದ್ದಾಗಿ ಮಹಿಳಾ ದಲ್ಲಾಳಿಯನ್ನು ಸಂಪರ್ಕಿಸಿ ಕಾಲ್‌ಗರ್ಲ್‌ಗಾಗಿ ಬೇಡಿಕೆ ಇಟ್ಟಿದ್ದ. ಅದರಂತೆ ಹೋಟೆಲ್‌ಗೆ ತನ್ನ ಪತ್ನಿಯೇ ಬಂದ ಮೇಲೆ ಆಕೆಯೊಂದಿಗೆ ಕಿತ್ತಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಬ್ಬಳ ಮೇಲೆ ಇಬ್ಬರಿಗೆ ಲವ್ : ಕೊಲೆಯಲ್ಲಿ ಅಂತ್ಯವಾಯ್ತು ಪ್ರೇಮ ಪ್ರಕರಣ

ಬಳಿಕ ಪೊಲೀಸ್ ಠಾಣೆಗೆ ಇಬ್ಬರೂ ಪರಸ್ಪರರ ವಿರುದ್ಧ ದೂರು ನೀಡಿದ್ದು, ಪತ್ನಿ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಎಂದು ಗಂಡ ಆರೋಪಿಸಿದರೆ, ಪತಿ ವಿವಾಹೇತರ ಸಂಬಂದ ಹೊಂದಿರುವುದನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹೊಟೇಲ್‌ಗೆ ಹೋಗಿದ್ದಾಗಿ ಪತ್ನಿ ವಾದಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ