ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿ| ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೂ ಉಚಿತ ಲಡ್ಡು| ಜನವರಿ 6ರ ವೈಕುಂಠ ಏಕಾದಶಿ ಬಳಿಕ ಹೊಸ ನಿಯಮ ಜಾರಿ| ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಪ್ರತ್ಯೇಕ ಕೌಂಟರ್| ಪ್ರತಿ ಲಡ್ಡುವಿಗೆ 50 ರೂ. ನಿಗದಿಪಡಿಸುವ ಉದ್ದೇಶ| ಅಕ್ರಮ ಲಡ್ಡು ವಿತರಣೆಗೆ ತಡೆಯೊಡ್ಡಲು ಕಠಿಣ ನಿಯಮ|
ತಿರುಪತಿ(ಜ.03): ತಿರುಪತಿ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿ ನೀಡಿದ್ದು, ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೂ ಉಚಿತ ಲಡ್ಡು ನೀಡಲು ನಿರ್ಧರಿಸಿದೆ.
ತಿರುಮಲದಲ್ಲಿರುವ ತಿಮ್ಮಪ್ಪನ ದೇಗುಲದಲ್ಲಿ ನಿತ್ಯ ಸುಮಾರು 3 ಲಕ್ಷ ಲಡ್ಡುಗಳನ್ನು ವಿತರಿಸಲಾಗುತ್ತಿದ್ದು, ಈ ಪೈಕಿ ಸುಮಾರು 1 ಲಕ್ಷ ಲಡ್ಡುಗಳನ್ನು ಉಚಿತವಾಗಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
ತಿರುಪತಿ ವೆಬ್‌ಸೈಟ್‌ನಲ್ಲಿ ಕ್ರಿಶ್ಚಿಯನ್ ಪದ: ಸ್ಪಷ್ಟನೆ ಕೊಟ್ಟ ಟಿಟಿಡಿ!
ಇದುವೆಗೂ ಕಾಲ್ನಡಿಗೆಯಲ್ಲಿ ದೇಗುಲಕ್ಕೆ ಬಂದು ಧರ್ಮ ದರ್ಶನ ಮಾಡುವ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ದೇಗುಲಕ್ಕೆ ಬರುವ ಪ್ರತೀ ಭಕ್ತರಿಗೂ ಒಂದೊಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.
ಇದೇ ಜನವರಿ 6ರ ವೈಕುಂಠ ಏಕಾದಶಿ ಬಳಿಕ ಈ ನಿಯಮ ಜಾರಿಗೆ ತರಲು ಟಿಟಿಡಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಿದ್ದು, ಪ್ರತಿ ಲಡ್ಡುವಿಗೆ 50 ರೂ. ನಿಗದಿಪಡಿಸುವ ಉದ್ದೇಶವಿದೆ ಎನ್ನಲಾಗಿದೆ.
ತಿಮ್ಮಪ್ಪಂಗೆ ಬೇಕಂತೆ ನಂದಿನಿ ತುಪ್ಪ: ಟಿಟಿಡಿ ಅಂತು ಬೇಗ ಕಳಸ್ರಪ್ಪ!
ಅದರಂತೆ ಕಾಳಸಂತೆಯಲ್ಲಿ ಅಕ್ರಮವಾಗಿ ಲಡ್ಡು ವಿತರಣೆಗೆ ತಡೆಯೊಡ್ಡಲು ಕಠಿಣ ನಿಯಮಗಳನ್ನು ರೂಪಿಸಲು ಟಿಟಿಡಿ ಮುಂದಾಗಿದೆ.