
ತಿರುಪತಿ: ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ತಿರುಮಲದಲ್ಲಿ ಗೆಸ್ಟ್‌ಹೌಸ್ ನಿರ್ಮಿಸಲೆಂದು ನೀಡಲಾದ್ದ ಭೂಮಿಯನ್ನು ಹಿಂದಕ್ಕೆ ಪಡೆಯಲು ತಿರುಪತಿ ತಿರುಮಲ ದೇಗುಲ ಮಂಡಳಿ ನಿರ್ಧರಿಸಿದೆ. ಜೊತೆಗೆ ಈ ಭೂಮಿಯನ್ನು ಗೆಸ್ಟ್‌ಹೌಸ್ ದೇಣಿಗೆ ಯೋಜನೆಯಡಿ ಹೊಸದಾಗಿ ದೇಣಿಗೆ ನೀಡುವ ವ್ಯಕ್ತಿಗಳಿಗೆ ನೀಡಲು ಟಿಟಿಡಿ ಚಿಂತಿಸಿದೆ.
ತಿರುಮಲದ (tirumala) ಧರ್ಮಗಿರಿಯಲ್ಲಿ ಗೆಸ್ಟ್‌ಹೌಸ್ (Guest House) ನಿರ್ಮಿಸುವ ಸಂಬಂಧ ಮಲ್ಯ ಮತ್ತು ಟಿಟಿಡಿ ನಡುವೆ 1993ರಲ್ಲಿ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಬಳಿಕ 9 ಕೊಠಡಿಗಳಿರುವ ಗೆಸ್ಟ್‌ಹೌಸ್ ನಿರ್ಮಿಸಿ 1997ರಲ್ಲಿ ಅದನ್ನು ಉದ್ಘಾಟಿಸಲಾಗಿತ್ತು. ಅದಕ್ಕೆ ವೆಂಕಟ ವಿಜಯಂ ಎಂದು ಹೆಸರಿಡಲಾಗಿತ್ತು. ಆದರೆ ಪ್ರಾಥಮಿಕ ಒಪ್ಪಂದದ ಬಳಿಕ ಈ ಕುರಿತ ಅಂತಿಮ ಒಪ್ಪಂದ ನಡೆದಿರಲಿಲ್ಲ.
ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!
ಅದಾದ 24 ವರ್ಷಗಳ ಅಂದರೆ 2017ರಲ್ಲಿ ಅಂತಿಮ ಒಪ್ಪಂದ ಸಂಬಂಧ ಮಲ್ಯಗೆ (Vijay Malya) ಟಿಟಿಡಿ (TTD) ಪ್ರಸ್ತಾವನೆ ಸಲ್ಲಿಸಿತ್ತು. ಜೊತೆಗೆ ಇತ್ತೀಚೆಗೆ ಟಿಟಿಡಿ ಎಂಜಿನಿಯರ್‌ಗಳ ತಂಡ ಗೆಸ್ಟ್ ಹೌಸ್ ಪರಿಶೀಲನೆ ನಡೆಸಿದ ವೇಳೆ ಅದು ನಿರ್ವಹಣೆ ಇಲ್ಲದೇ ಪೂರ್ಣ ಹಾಳಾಗಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ 2023ರ ಮಾ.31 ರಂದು ಮಲ್ಯಗೆ ಟಿಟಿಡಿ ನೋಟಿಸ್ ನೀಡಿತ್ತು. ಆದರೆ ಮಲ್ಯ ನೀಡಿದ್ದ ಬೆಂಗಳೂರು ಮನೆಯಲ್ಲಿ ಯಾರೂ ಇಲ್ಲದ ಕಾರಣ ನೋಟಿಸ್ ವಾಪಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಗೆಸ್ಟ್‌ಹೌಸ್‌ಗೆ ಮಲ್ಯಗೆ ನೀಡಿದ್ದ ಭೂಮಿ ರದ್ದುಪಡಿಸಿ ಅದನ್ನು 5 ಕೋಟಿ ರು.ಗಿಂತ ಹೆಚ್ಚಿನ ದೇಣಿಗೆ ನೀಡುವ ಬೇರೆಯವರಿಗೆ ನೀಡಲು ಟಿಟಿಡಿ ಚಿಂತಿಸಿದೆ.
ವಿಜಯ್ ಮಲ್ಯ ಜೊತೆ ಫೋಟೋ ತೆಗೆಸಿಕೊಂಡ್ರಾ ವಿರಾಟ್ ಕೊಹ್ಲಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ