ಮೋದಿ ಟರ್ಮಿನೇಟರ್‌, 2024ರಲ್ಲಿಯೂ ನಮಗೇ ಜಯ: ಪೋಸ್ಟರ್‌ ಬಿಡುಗಡೆ ಮಾಡಿದ ಬಿಜೆಪಿ

Published : Aug 31, 2023, 07:08 AM IST
ಮೋದಿ ಟರ್ಮಿನೇಟರ್‌, 2024ರಲ್ಲಿಯೂ ನಮಗೇ ಜಯ: ಪೋಸ್ಟರ್‌ ಬಿಡುಗಡೆ ಮಾಡಿದ ಬಿಜೆಪಿ

ಸಾರಾಂಶ

ಹಾಲಿವುಡ್‌ ಚಿತ್ರ ‘ಟರ್ಮಿನೇಟರ್‌’ ಪೋಸ್ಟರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಇರಿಸಿ ಎಡಿಟ್‌ ಮಾಡಿರುವ ಬಿಜೆಪಿ, 2024ಕ್ಕೆ ನಾನು ಮತ್ತೆ ಹಿಂದಿರುಗುತ್ತೇನೆ ಎಂಬ ಬರಹದೊಂದಿಗೆ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ.

ನವದೆಹಲಿ: ಹಾಲಿವುಡ್‌ ಚಿತ್ರ ‘ಟರ್ಮಿನೇಟರ್‌’ ಪೋಸ್ಟರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಇರಿಸಿ ಎಡಿಟ್‌ ಮಾಡಿರುವ ಬಿಜೆಪಿ, 2024ಕ್ಕೆ ನಾನು ಮತ್ತೆ ಹಿಂದಿರುಗುತ್ತೇನೆ ಎಂಬ ಬರಹದೊಂದಿಗೆ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ. ವಿಪಕ್ಷ ಇಂಡಿಯಾ ಕೂಟದ ಸಭೆಗೂ 1 ದಿನ ಮುನ್ನ ಪೋಸ್ಟರ್‌ ಬಿಡುಗಡೆ ಮಾಡಿದ್ದು, ‘ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದು ವಿಪಕ್ಷಗಳು ಯೋಚಿಸುತ್ತವೆ. ಅದು ಕನಸಾಗೇ ಉಳಿಯುತ್ತೆ. ಟರ್ಮಿನೇಟರ್‌ ಯಾವಾಗಲೂ ಗೆಲ್ಲುತ್ತಾರೆ’ ಎಂದು ಬರೆದುಕೊಂಡಿದೆ.

ಟರ್ಮಿನೇಟರ್‌ ಚಿತ್ರದ ನಟ ಅರ್ನಾಲ್ಡ್‌ ಶ್ವಾಜ್‌ರ್‍ನೆಗರ್‌ (Arnold Schwarzenegger) ಭಾವಚಿತ್ರಕ್ಕೆ ಮೋದಿ ಅವರ ಮುಖವನ್ನಿರಿಸಿ ಮತ್ತು ಅವರ ಕೈಯಲ್ಲಿ ಕಮದ ಹೂವಿರುವಂತೆ ಎಡಿಟ್‌ ಮಾಡಲಾಗಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯನ್ನು (NDA Alliance) ಸೋಲಿಸಲು ಒಗ್ಗೂಡಿಕೊಂಡಿರುವ ವಿಪಕ್ಷಗಳ ‘ಇಂಡಿಯಾ’ ಕೂಟಕ್ಕೆ (INDIA Group) ಬಿಜೆಪಿ ಟಾಂಗ್‌ ನೀಡಿದೆ. ಆ.31 ಮತ್ತು ಸೆ.1 ರಂದು ಮುಂಬೈಯಲ್ಲಿ ವಿಪಕ್ಷಗಳ ಸಭೆ ನಡೆಯಲಿದೆ.

ಡಿಸೆಂಬರ್‌ನಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಗೆಲವು, ಶಸ್ತ್ರತ್ಯಾಗ ಮಾಡಿತಾ ಇಂಡಿಯಾ ಒಕ್ಕೂಟ?

ಮೋದಿ 73ನೇ ಜನ್ಮದಿನ ನಿಮಿತ್ತ ಬಿಜೆಪಿ 16 ದಿನ ಸೇವಾ ಪಾಕ್ಷಿಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸೆ.17ರಂದು 73ನೇ ಜನ್ಮದಿನದ (Modi Birthday) ಆಚರಿಸಿಕೊಳ್ಳುತ್ತಿದ್ದು, ಈ ಅಂಗವಾಗಿ ಬಿಜೆಪಿಯು 16 ದಿನಗಳ ಕಾಲ ರಾಷ್ಟ್ರವ್ಯಾಪಿ ‘ಸೇವಾ ಪಾಕ್ಷಿಕ’ ಆಂದೋಲನ ಆಯೋಜಿಸಿದೆ. ಆಂದೋಲನದ ಭಾಗವಾಗಿ ಸೆ.17ರಿಂದ ‘ಸೇವಾ ಹಿ ಸಂಘಟನ್‌’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಹಾಗೂ ಅ.2ರ ಮಹಾತ್ಮಾ ಗಾಂಧಿ ಜಯಂತಿಯವರೆಗೆ ಇದು ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಈ ಆಂದೋಲನದ ಭಾಗವಾಗಿ ರಾಷ್ಟ್ರದ ಜನತೆಗೆ ಸರ್ಕಾರದ ಸಾಧನೆಗಳನ್ನು ಪ್ರಚುರಪಡಿಸಲಾಗುವುದು. ರೋಗಿಗಳನ್ನು ಭೇಟಿಯಾಗಿ ಹಣ್ಣುಹಂಪಲುಗಳನ್ನು ವಿತರಿಸಲಾಗುವುದು. ಬಡವರಿಗೆ ವಿವಿಧ ರೀತಿಯ ಸಹಾಯ ಮಾಡಲಾಗುವುದು. ಈ ರೀತಿಯ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವು ಹೇಳಿವೆ.  ಕಳೆದ ವರ್ಷ ಕೂಡ ಇದೇ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿತ್ತು. ಈ ನಡುವೆ ತಮ್ಮ ಹುಟ್ಟುಹಬ್ಬದಂದೇ ಮೋದಿ ಅವರು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

ರಾಹುಲ್‌ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್‌ ಘೋಷಣೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು