ಹಿಟ್ ಅಂಡ್ ರನ್ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಕೈಬಿಟ್ಟ ಟ್ರಕ್ ಚಾಲಕರ ಸಂಘ!

By Suvarna News  |  First Published Jan 2, 2024, 10:28 PM IST

ಕೇಂದ್ರ ಸರ್ಕಾರ ತಂದಿರುವ ಹೊಸ ನ್ಯಾಯ ಸಂಹಿತೆಯಲ್ಲಿನ ಹಿಡ್ ಅಂಡ್ ರನ್ ಕಾಯ್ದೆ ವಿರೋಧಿಸಿ ಟ್ರಕ್ ಚಾಲಕರು ಆರಂಭಿಸಿದ ಮುಷ್ಕರ ದೇಶದಲ್ಲಿ ಕೋಲಾಹಲ ಎಬ್ಬಿಸಿತ್ತು. ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ಬೃಹತ್ ಮಷ್ಕರ ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿತ್ತು. ಆದರೆ ಇದೀಗ ಟ್ರಕ್ ಚಾಲಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.


ನವದೆಹಲಿ(ಜ.02) ಕೇಂದ್ರ ಸರ್ಕಾರ ತಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿನ ಹಿಡ್ ಅಂಡ್ ರನ್ ಕಾಯ್ದೆ ವಿರೋಧಿಸಿ ಲಾರಿ ಚಾಲಕರು ಆರಂಭಿಸಿದ ಬೃಹತ್ ಮುಷ್ಕರ ಅಂತ್ಯಗೊಂಡಿದೆ. 3 ದಿನಗಳ ಮುಷ್ಕರ ಜನವರಿ 1 ರಿಂದ ಆರಂಭಗೊಂಡಿತ್ತು. ಇದರ ಪರಿಣಾಮ ದೇಶಾದ್ಯಂತ ಕೋಲಾಹಲ ಸೃಷ್ಟಿಯಾಗಿತ್ತು. ಪೆಟ್ರೋಲ್ ಬಂಕ್‌ಗಳಲ್ಲಿ ಭಾರಿ ಜನದಟ್ಟಣೆಯಾಗಿತ್ತು. ಪೆಟ್ರೋಲ್ ಡೀಸೆಲ್ ಅಭಾವ, ದಿನ ನಿತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಆತಂಕ ಜನಸಾಮಾನ್ಯರಲ್ಲಿ ಕಾಡಿತ್ತು. ಆದರೆ ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಲಾರಿ ಚಾಲಕರು ಪ್ರತಿಭಟನೆ ಕೈಬಿಟ್ಟಿದ್ದಾರೆ.

ಹಿಡ್ ಅಂಡ್ ರನ್ ಕಾಯ್ದೆಯಲ್ಲಿನ ನಿಯಮ ಹಾಗೂ ಶಿಕ್ಷೆ ಕುರಿತು ತಕರಾರು ಎತ್ತಿದ್ದ ಲಾರಿ ಚಾಲಕರು ಪ್ರತಿಭಟನೆ ಆರಂಭಿಸಿದ್ದರು. ಪರಿಸ್ಥಿತಿ ಕೈಮೀರುವುದಕ್ಕಿಂತ ಮೊದಲೇ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪ್ರತಿಭಟನಾ ನಿರತ ಲಾರಿ ಚಾಲಕರಿಗೆ ಭರವಸೆ ನೀಡಿದ್ದಾರೆ. ಲಾರಿ ಚಾಲಕರ ಬೇಡಿಕೆಯನ್ನು ನಿಯಮ ಜಾರಿಗೊಳಿಸುವ ಮೊದಲು ಪರಿಗಣಿಸುವುದಾಗಿ ಹೇಳಿದ್ದಾರೆ. ಈ ಭರವಸೆ ಬೆನ್ನಲ್ಲೇ ಮಷ್ಕರ ಅಂತ್ಯಗೊಳಿಸಲಾಗಿದೆ.

Tap to resize

Latest Videos

ಪೆಟ್ರೋಲ್‌, ಡೀಸೆಲ್ ಖಾಲಿಯಾಗುತ್ತೆಂದು ಬಂಕ್‌ಗಳ ಮುಂದೆ ಎಣ್ಣೆಗೆ ಮುಗಿಬಿದ್ದ ವಾಹನ ಸವಾರರು!

ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಹರ್ಯಾಣ, ಹಿಮಾಚಲಪ್ರದೇಶ. ಜಮ್ಮು-ಕಾಶ್ಮೀರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಾಲಕರು ಲಾರಿ ಸಂಚಾರ ಸ್ಥಗಿತಗೊಳಿಸಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.  

ಹಿಂದಿನ ಐಪಿಸಿ ಅನ್ವಯ ಹಿಟ್‌ ಆ್ಯಂಡ್‌ ರನ್‌ ಕೇಸಿನ ದೋಷಿಗಳಿಗೆ ಗರಿಷ್ಠ 2 ವರ್ಷ ಜೈಲು ಮತ್ತು 1000 ರೂಪಾಯಿ ದಂಡ ವಿಧಿಸಬಹುದಾಗಿತ್ತು. ಆದರೆ ನೂತನ ಭಾರತೀಯ ನ್ಯಾಯ ಸಂಹಿತೆ ಅನ್ವಯ, ಚಾಲಕನ ಅಜಾಗರೂಕತೆಯಿಂದ ಸಂಭವಿಸುವ ಅಪಘಾತದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೆ ಅಥವಾ ಗಂಭೀರವಾಗಿ ಗಾಯಗೊಂಡರೆ ಆ ಕುರಿತು ಚಾಲಕ ಆ ಕುರಿತು ಪೊಲೀಸರಿಗೆ ಅಥವಾ ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ. ಮಾಹಿತಿ ನೀಡದೇ ಪರಾರಿಯಾದಲ್ಲಿ ಚಾಲಕನಿಗೆ 10 ವರ್ಷ ಜೈಲು ಮತ್ತು 7 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಇದನ್ನು ಕರಾಳ ಕಾಯ್ದೆ ಎಂದು ಟೀಕಿಸಿರುವ ಚಾಲಕರು ಸರ್ಕಾರ ಕೂಡಲೇ ಕಾಯ್ದೆ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಸೋಮವಾರದಿಂದ 3 ದಿನಗಳ ಮುಷ್ಕರ ಆರಂಭಿಸಿದ್ದರು.

ಹಿಟ್‌ & ರನ್ ಕೇಸ್‌ನಲ್ಲಿ ಶಿಕ್ಷೆ ಪ್ರಮಾಣ ಏರಿಕೆ, ದೇಶಾದ್ಯಂತ ಮುಷ್ಕರ ಘೋಷಿಸಿದ ಟ್ರಕ್‌ ಡ್ರೈವರ್ಸ್‌!
 

click me!