ಅಪ್ರಾಪ್ತ ಸಹೋದರನಿಂದ ಗರ್ಭಿಣಿಯಾದ 12 ವರ್ಷದ ಬಾಲಕಿ,ಗರ್ಭಪಾತ ನಿರಾಕರಿಸಿದ ಕೋರ್ಟ್!

By Suvarna News  |  First Published Jan 2, 2024, 9:49 PM IST

ಆಕೆಗೆ 12 ವರ್ಷ. ಏನೂ ಅರಿಯದ ಬಾಲಕಿಯನ್ನು ಅಪ್ರಾಪ್ತ ಸಹೋದರ ಕಾಮತೃಷೆ ತೀರಿಸಲು ಬಳಸಿಕೊಂಡಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಬಾಲಕಿ ವಯಸ್ಸು ಹನ್ನೆರೆಡೇ ಆಗಿದ್ದರೂ ಗರ್ಭಪಾತಕ್ಕೆ ಹೈ ಕೋರ್ಟ್ ನಿರಾಕರಿಸಿದೆ.
 


ತಿರುವನಂತಪುರಂ(ಜ.02) ಅಪ್ರಾಪ್ತ ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ದಿನ ದೌರ್ಜನ್ಯಗಳು ವರದಿಯಾಗುತ್ತಲೇ ಇದೆ, ಹಲವರ ಬದುಕು ನರಕವಾಗುತ್ತಿದೆ. ಇದೀಗ ಕೇರಳದಲ್ಲಿ ನಡೆದ ಘಟನೆ ಮನಸ್ಸುಗಳನ್ನು ಘಾಸಿಗೊಳಿಸುವಂತಿದೆ. 12 ವರ್ಷದ ಬಾಲಕಿ ತನ್ನ ಅಪ್ರಾಪ್ತ ಸಹೋದರನಿಂದಲೇ ಗರ್ಭಿಣಿಯಾಗಿದ್ದಾಳೆ. ಪುಟ್ಟ ಮಗಳು ಗರ್ಭಿಣಿಯಾಗಿದ್ದಾಳೆ ಅನ್ನೋ ಮಾಹಿತಿ ತಿಳಿದ ಪೋಷಕರು ಗರ್ಭಪಾತಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಹೈಕೋರ್ಟ್, ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಅನುಮತಿ ನಿರಾಕರಿಸಿದೆ. ಇಷ್ಟೇ ಅಲ್ಲ ಸೂಕ್ತ ಆರೈಕೆ ನೀಡಲು ಸೂಚನೆ ನೀಡಿದೆ.

ಜಸ್ಟೀಸ್ ದೇವನ್ ರಾಮಚಂದ್ರನ್ ಈ ಕ್ಲಿಷ್ಟ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ. 12 ವರ್ಷದ ಬಾಲಕಿಯನ್ನು ಅಪ್ರಾಪ್ತ ಸಹೋದರ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ನಿರಂತರವಾಗಿ ಆಕೆ ಮೇಲೆ ಅತ್ಯಾಚಾರ ನಡೆದಿದೆ. ಇದರ ನಡುವೆ ಈಕೆ ಗರ್ಭಿಣಿಯಾಗಿರುವುದು ಸ್ವತಃ ಬಾಲಕಿಗೆ ತಿಳಿದಿಲ್ಲ. ಇತ್ತ ಅಪ್ರಾಪ್ತ ಸಹೋದರನಿಗೂ ಗೊತ್ತಾಗಿಲ್ಲ. 

Tap to resize

Latest Videos

26 ವಾರಗಳ ಅವಧಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್‌

12 ವರ್ಷದ ಮಗಳಲ್ಲಾಗಿರುವ ಕೆಲ ಬದಲಾವಣೆ ಗಮನಿಸಿದ ಪೋಷಕರು ಆಸ್ಪತ್ರೆ ದೌಡಾಯಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ಗೊತ್ತಾಗಿದೆ. ಗರ್ಭಿಣಿಯಾಗಿ ಅದಾಗಲೇ 34 ವಾರಗಳು ಉರುಳಿದೆ. ಬಾಲಕಿಯ ವಯಸ್ಸು,ಆರೋಗ್ಯ ಹಾಗೂ ಮಾನಸಿಕವಾಗಿ ಬೀರಬಲ್ಲ ಪರಿಣಾಮವನ್ನು ಆಧರಿಸಿ ಆಸ್ಪತ್ರೆ ವೈದ್ಯರು ಗರ್ಭಪಾತ ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ. ಆದರೆ ಕಾನೂನು ಅನುಮತಿಸದ ಕಾರಣ ಕೋರ್ಟ್ ಮೊರೆ ಹೋಗಲು ಸೂಚನೆ ನೀಡಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಪೋಷಕರಿಗೆ ಮತ್ತೆ ಆಘಾತವಾಗಿದೆ. 34 ವಾರಗಳು ಆಗಿರುವ ಕಾರಣ ಗರ್ಭದಲ್ಲಿ ಮಗುವಿನ ಬೆಳವಣಿಗೆ ಆಗಿದೆ. ಹೀಗಾಗಿ ಗರ್ಭಪಾತ ಮಾಡಲು ಸಾಧ್ಯವಿಲ್ಲ. ಬಾಲಕಿಗೆ ಪೋಷಕರ ಸೂಕ್ತ ಆರೈಕೆ ನೀಡಲು ಎಲ್ಲಾ ವ್ಯವಸ್ಥೆ ಮಾಡಬೇಕು. ಇತರ ಗರ್ಭಿಣಿಯರಿಗೆ ಸಿಗುವಂತ ಎಲ್ಲಾ ಆರೋಗ್ಯ ತಪಾಸಣೆ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. 

ಸಾಕುವ ತಾಕತ್ತಿಲ್ಲ, ಗರ್ಭಪಾತಕ್ಕೆ ಅವಕಾಶ ನೀಡಿ ಎಂದು 27 ವರ್ಷದ ಮಹಿಳೆ ಮನವಿ: ಸುಪ್ರೀಂಕೋರ್ಟ್ ಹೇಳಿದ್ದೇನು?

ಬಾಲಕಿಗೆ ಎಲ್ಲಾ ನೆರವು ನೀಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಪೋಷಕರಿಗೂ ಕೆಲ ಸೂಚನೆ ನೀಡಲಾಗಿದೆ. ಇತ್ತ ಪೊಲೀಸ್ ಠಾಣೆ, ಕೋರ್ಟ್ , ಆಸ್ಪತ್ರೆ ಎಂದು ಈಗಾಗಲೇ ಬಾಲಕಿ ಹೈರಾಣಾಗಿದ್ದಾಳೆ. 
 

click me!