
ಲಖನೌ(ಅ.19): ಚೀನಾ-ಭಾರತ ಗಡಿಯಲ್ಲಿ(China-India Border) ಯೋಧರು ಕಾವಲು ಕಾಯುತ್ತಿದ್ದರೂ ಮಾರಣಾಂತಿಕವಲ್ಲದ ಶಸ್ತ್ರಗಳನ್ನು ಮಾತ್ರ ಮುಖಾಮುಖಿ ಸಂಘರ್ಷದ ಸಂದರ್ಭದಲ್ಲಿ ಬಳಸಬೇಕು ಎಂಬ ಒಪ್ಪಂದವಿದೆ. ಅದಕ್ಕೆಂದೇ ತ್ರಿಶೂಲ(Trishul) ಹಾಗೂ ವಜ್ರಾಯುಧಂತಹ ಮಾರಣಾಂತಿಕವಲ್ಲದ ಶಸ್ತ್ರಗಳನ್ನು ಸೇನೆಗೆ ಸಿದ್ಧಪಡಿಸಿರುವುದಾಗಿ ಉತ್ತರ ಪ್ರದೇಶದ ಕಂಪನಿಯೊಂದು ಹೇಳಿದೆ.
‘ಗಲ್ವಾನ್ ಕಣಿವೆಯ(Galwan Valley) ದಾಳಿಯ ನಂತರ ಭದ್ರತಾ ಪಡೆಗಳು ಇಂಥ ಆಯುಧಗಳಿಗೆ ಬೇಡಿಕೆ ಇಟ್ಟಿದ್ದವು. ಹೀಗಾಗಿ ವಜ್ರ ಆಯುಧ (ಕಬ್ಬಿಣದ ಸರಳಿನ ಆಯುಧ) ಹಾಗೂ ತ್ರಿಶೂಲದಂತಹ ಮಾರಣಾಂತಿಕವಲ್ಲದ ಆಯುಧಗಳನ್ನು ಸಿದ್ಧ ಪಡಿಸಲಾಗಿದೆ’ ಎಂದು ಆ್ಯಪ್‌ಸ್ಟ್ರಾನ್ ಪ್ರೈ.ಲಿ.ನ ಮುಖ್ಯ ತಾಂತ್ರಿಕ ಅಧಿಕಾರಿ ಮೋಹಿತ್ ಕುಮಾರ್ ಹೇಳಿಕೊಂಡಿದ್ದಾರೆ.
‘ಲೋಹದ ಕಂಬಿಯ ಮೇಲೆ ಮುಳ್ಳುಗಳಂತಹ ರಚನೆ ಇರುವ ವಜ್ರ ಆಯುಧದಿಂದ(Weapon) ಗುಂಡು ನಿರೋಧಕ ಟೈರ್‌ಗಳನ್ನು ಪಂಕ್ಚರ್ ಮಾಡಬಹುದು. ತ್ರಿಶೂಲ ಆಯುಧವನ್ನು ವೈರಿ ಪಡೆಗಳ ವಾಹನಗಳನ್ನು ತಡೆಯಲು ಬಳಸಬಹುದು. ಕೈಗವಸಿನಂತೆ ಬಳಸಲ್ಪಡುವ ಸಾವಪ್ ಪಂಚ್ ಎನ್ನುವ ಆಯುಧದ ಮೂಲಕವೂ ಶತ್ರುಗಳನ್ನು ತಡೆಯಬಹುದು. ಈ ಆಯುಧಗಳ ಮಾರಣಾಂತಿಕವಾಗಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಸೇನೆಯು ಯಾವಾಗ ಇಂಥ ವಸ್ತುಗಳಿಗೆ ಆರ್ಡರ್ ನೀಡಿತ್ತು ಎಂಬುದನ್ನು ಅವರು ಹೇಳಿಲ್ಲ.
ಆದರೆ ಸೇನೆ ಹಾಗೂ ಸರ್ಕಾರ ಮಾತ್ರ, ಆ್ಯಪ್‌ಸ್ಟ್ರಾನ್ ಕಂಪನಿಗೆ ಇಂಥ ಆಯುಧಗಳ ನಿರ್ಮಾಣಕ್ಕೆ ಬೇಡಿಕೆ ಇರಿಸಿದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಹಿಂದೆ ಗಲ್ವಾನ್ ಕಣಿವೆಯಲ್ಲಿ ವೈರ್ ಸುತ್ತಿದ ಕೋಲುಗಳಿಂದ ಚೀನಾ ನಡೆಸಿದ ದಾಳಿಯಲ್ಲಿ ಸೈನಿಕರು ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ