ಬಸ್‌ ಚಕ್ರ ಹಿಡಿದು ಬದು​ಕು​ಳಿದ ತಂದೆ-ಮಗ!

By Suvarna NewsFirst Published Oct 19, 2021, 11:51 AM IST
Highlights

* ಚಕ್ರ ಹಿಡಿ​ದಿದ್ದ ಇಬ್ಬ​ರ​ನ್ನೂ ರಕ್ಷಿ​ಸಿದ ಬಸ್‌ ಕಂಡ​ಕ್ಟ​ರ್‌

* ಕೇರ​ಳದ ರಣ​ಮ​ಳೆ​ಯಲ್ಲಿ ಇವರು ಬದು​ಕಿದ್ದೇ ಪವಾ​ಡ

* ಬಸ್‌ ಚಕ್ರ ಹಿಡಿದು ಬದು​ಕು​ಳಿದ ತಂದೆ-ಮಗ!

ಇಡುಕ್ಕಿ(ಅ.19): ಕೇರಳದಲ್ಲಿ(Kerala) ಸುರಿಯುತ್ತಿರುವ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಬೆಟ್ಟಗಳು ಕುಸಿದು ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಇದೇ ರೀತಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುವುದನ್ನು ತಪ್ಪಿಸಿಕೊಳ್ಳಲು ಬಸ್‌ ಚಕ್ರವನ್ನು ಹಿಡಿದುಕೊಂಡಿದ್ದ ತಂದೆ-ಮಗನನ್ನು ಬಸ್‌ ನಿರ್ವಾ​ಹ​ಕ(Bus Codector) ರಕ್ಷಿಸಿದ್ದಾರೆ.

ಕೇರಳ ರಾಜ್ಯ ಸಾರಿಗೆ ನಿಗಮದ ಬಸ್‌(KSRTC) ನಿರ್ವಾ​ಹ​ಕ ಜೇಸನ್‌ ಜೋಸೆಫ್‌(Jason Joseph) ಮಳೆಯಿಂದ ಉಂಟಾದ ಪ್ರವಾಹದ ಭೀಕರತೆಯನ್ನು ವಿಡಿಯೋ ಮಾಡುತ್ತಿದ್ದರು. ಈ ಸಮಯದಲ್ಲಿ ಕೆಸರಿನಲ್ಲಿ ಮುಚ್ಚಿಹೋಗಿದ್ದ ಇಬ್ಬರು, ಬಸ್‌ನ ಹಿಂದಿನ ಚಕ್ರವನ್ನು ಹಿಡಿದುಕೊಂಡು ಬದು​ಕು​ಳಿ​ಯಲು ಹೋರಾಟ ನಡೆ​ಸು​ತ್ತಿ​ದ್ದರು. ಇದ​ನ್ನು ಗಮನಿಸಿದ ಜೋಸೆಫ್‌, ತಂದೆ-ಮಗ​ನ​ನ್ನು ರಕ್ಷಿಸಿದ್ದಾರೆ.

ಇವರಿಬ್ಬರು ಗುಜರಾತ್‌ನಿಂದ ಬಂದಿದ್ದ ಪ್ರವಾಸಿಗರಾಗಿದ್ದು, ‘ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾರನ್ನು ಬಿಡಿಸುತ್ತಿದ್ದ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಬಂದೆವು’ ಎಂದು ಹೇಳಿ​ದ್ದಾ​ರೆ.

ಈ ಕುರಿತ ಅಸ್ಪ​ಷ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ತಮ್ಮ ಜೀವವನ್ನು ಪಣಕ್ಕಿಟ್ಟು ಇಬ್ಬರನ್ನು ರಕ್ಷಿಸಿದ ನಿರ್ವಾಹಕನನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

ಕೇರಳದಲ್ಲಿ(Kerala) ಸುರಿದ ಭಾರೀ ಮಳೆ(Rain), ಪ್ರವಾಹ(Flood), ಭೂಕುಸಿತದಿಂದ(Landslide) ಭಾರೀ ಸಾವು ನೋವು ಉಂಟಾಗಿದೆ. ಕೇರಳ ರಣಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ತಂಡಗಳು(Rescue Teams) ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ವೇಳೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.

ಭಾನುವಾರ ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ(Mother) ಹಾಗೂ ಮಗು​ವಿನ ಶವವು ತಪ್ಪಿ​ಕೊಂಡ ಸ್ಥಿತಿ​ಯಲ್ಲೇ ಪತ್ತೆ​ಯಾ​ಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡ​ಗಳೇ ಕಣ್ಣೀರು ಹಾಕಿ​ವೆ.

ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ(Idukki) ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆ​ಯು​ವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿ​ಯ​ಲ್ಲಿ​ದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡು​ಬಂತು.

ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್‌(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿ​ಸಿ​ದ್ದ​ರು. ಆದರೆ ಕೆಲವು ಹೊತ್ತಿ​ನಲ್ಲೇ ಜಲ​ಪ್ರ​ಳ​ಯವು ಇವ​ರನ್ನು ಆಪೋ​ಶನ ತೆಗೆ​ದು​ಕೊಂಡಿ​ದೆ.

 

click me!