3 ಬಾರಿ ವಿಷ ಹಾಕಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ, 4ನೇ ಬಾರಿ ಪ್ಲಾನ್ ಬದಲಿಸಿದಾಗ ಏನಾಯ್ತು?

Published : Mar 10, 2026, 03:05 PM IST
Mumbai News Husband kills wife

ಸಾರಾಂಶ

3 ಬಾರಿ ವಿಷ ಹಾಕಿ ಪತ್ನಿ ಕೊಲ್ಲಲು ಯತ್ನಿಸಿದ ಗಂಡ, 4ನೇ ಬಾರಿ ಪ್ಲಾನ್ ಬದಲಿಸಿದಾಗ ಏನಾಯ್ತು?, ಮೂರು ವಿಫಲ ಪ್ರಯತ್ನಗಳ ಬಳಿಕ 4ನೇ ಪ್ರಯತ್ನ ಯಾವುದೇ ಕಾರಣಕ್ಕೂ ವಿಫಲವಾಗಬಾರದು ಎಂದು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದ. 

ಮುಂಬೈ (ಮಾ.10) ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿ ಹಲವು ದುರಂತಗಳು ನಡೆದಿದೆ. ಆದರೆ ಇಲ್ಲೊಬ್ಬ ಕಿರಾತಕ, ಒಳಗಿಂದ ಒಳಗೆ ಪತ್ನಿ ಎಂದರೆ ಕೊತ ಕೊತ ಕುದಿಯುತ್ತಿದ್ದ. ಆದರೆ ಹೊರಗಡೆ ಅಷ್ಟೇ ಪ್ರೀತಿ ಇರುವಂತೆ ನಟಿಸುತ್ತಿದ್ದರೆ. ಕೆಲವು ಬಾರಿ ಸಿಟ್ಟಾಗಿ ಕೋಪಗೊಂಡು ಹಲ್ಲೆಗೆ ಮುಂದಾಗಿದ್ದು ಇದೆ. ಬಳಿಕ ಅಯ್ಯೋ ನನ್ನಿಂದ ತಪ್ಪಾಯ್ತು ಎಂದು ಸಾರಿ ಕೇಳಿದ್ದೂ ಇದೆ. ಹೀಗಾಗಿ ಪತ್ನಿಗೆ ತನ್ನ ಗಂಡನ ಮೇಲೆ ಯಾವುದೇ ಅನುಮಾನ ಇರಲಿಲ್ಲ. ಇದರ ನಡುವೆ ಪತ್ನಿಯನ್ನು ಮುಗಿಸಲು ಮೂರು ಬಾರಿ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದ. ಮೂರು ಬಾರಿಯೂ ಪತ್ನಿ ಬಚಾವ್ ಆಗಿದ್ದಳು. ಆದರೆ ನಾಲ್ಕನೇ ಬಾರಿ ಪ್ಲಾನ್ ಬದಲಿಸಿದ ಈ ಗಂಡ, ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಬುಲ್ಧಾನದಲ್ಲಿ ನಡೆದಿದೆ.

ಬುಲ್ಧಾನಾ ನಿವಾಸಿ ಪ್ರಕಾಶ್ ಗವಂಡೆಗೆ ತನ್ನ ಪತ್ನಿ ವೃಶಾಲಿ ಮೇಲೆ ಅನುಮಾನ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ವೃಶಾಲಿ ತನಗಿಂತ ಚೆನ್ನಾಗಿದ್ದಾಳೆ, ಹಲವರು ಆಕೆಯ ಜೊತೆ ಮಾತನಾಡುತ್ತಿದ್ದಾರೆ ಎಂಬದೆ ದೊಡ್ಡ ಸಮಸ್ಯೆಯಾಗಿತ್ತು. ಈ ಮಾತುಕತೆಯನ್ನೇ ಅಕ್ರಮ ಸಂಬಂಧ ಎಂದುಕೊಂಡ ಪ್ರಕಕಾಶ್ ಗವಂಡೆಗೆ ಸಂದೇಹಗಳು ಹೆಚ್ಚಾಗುತ್ತಲೇ ಹೋಗಿತ್ತು. ಪತ್ನಿ ಜೊತೆ ಕಿರಿಕ್, ಜಗಳ ಸೇರಿದಂತೆ ಹಲವು ಜಟಾಪಟಿಗಳು ನಡೆದಿದೆ. ಆದರೂ ತನಗೆ ಪತ್ನಿ ಮೇಲೆ ಪ್ರೀತಿ ಇರುವಂತೆ ನಡೆದುಕೊಂಡಿದ್ದಾನೆ.

ಮೂರು ಬಾರಿ ವಿಷ ಹಾಕಿ ಹತ್ಯೆಗೆ ಯತ್ನ

ಪತ್ನಿ ಮೇಲೆ ಅನುಮಾನ ಹೆಚ್ಚಾಗುತ್ತಿದ್ದಂತೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಪ್ರಕಾಶ್ ಗವಂಡೆ ಬಲವಾಗಿ ನಂಬಿದ್ದ. ಹೀಗಾಗಿ ಪತ್ನಿಯ ಊಟಕ್ಕೆ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದ. ಆದರೆ ಮೂರು ಬಾರಿ ಪತ್ನಿ ಬಚಾವ್ ಆಗಿದ್ದಳು. ಒಂದು ಬಾರಿ ಆಸ್ಪತ್ರೆ ದಾಖಲಾಗಿದ್ದಳು. ವಾಂತಿ ಮಾಡಿದ ಕಾರಣ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಸರಿಸುಮಾರು 6 ತಿಂಗಳಲ್ಲಿ ಮೂರು ಬಾರಿ ಈ ಹತ್ಯೆ ಯತ್ನ ನಡೆದಿತ್ತು. ಮೂರು ಬಾರಿ ಪ್ರಕಾಶ್ ವಿಫಲನಾಗಿದ್ದ. ಹೀಗಾಗಿ ತಾನು ಈ ಕೆಲಸಕ್ಕೆ ಯೋಗ್ಯನಲ್ಲ. ಯೋಗ್ಯರ ಕೈಯಲ್ಲಿ ಹತ್ಯೆ ಮಾಡಿಸಬೇಕು ಎಂದು ಪ್ಲಾನ್ ಮಾಡಿದ್ದ.

ಸುಪಾರಿ ಕಿಲ್ಲರ್‌ಗೆ 1 ಲಕ್ಷ ರೂಪಾಯಿ

ಸಣ್ಣ ಪುಡಿ ರೌಡಿಗಳ ಭೇಟಿಯಾಗಿ ಸುಪಾರಿ ಕಿಲ್ಲರ್ ನಂಬರ್ ಪಡೆದು ಕರೆ ಮಾಡಿದ್ದಾನೆ. ಬಳಿಕ 1 ಲಕ್ಷ ರೂಪಾಯಿಗೆ ಹತ್ಯೆ ಪ್ಲಾನ್ ರೆಡಿಯಾಗಿದೆ. ಇದರಂತೆ 1 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ನೀಡಿದ್ದಾನೆ. ಸುಪಾರಿ ಪಡೆದ ಕಿಲ್ಲರ್ ಗ್ಯಾಂಗ್ ವೃಶಾಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಸೂಟರ್ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಕಾರಿನನ ಮೂಲಕ ವೇಗವಾಗಿ ಅಪಘಾತ ಮಾಡಿಸಿದ್ದಾರೆ. ಈ ಅಪಘಾತದಲ್ಲಿ ವೃಶಾಲಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಅಪಘಾತ ಪ್ರಕರಣ ದಾಖಲಿಸಿದ ಪೊಲೀಸರು ಅಪಘಾತದ ಮಾಡಿದ ವಾಹನ ಸೇರದಿದಂತೆ ಇತರ ಮಾಹಿತಿ ಕಲೆ ಹಾಕಿದ್ದರು. ಸಹಜ ಅಪಘಾತ ಪ್ರಕರಣ ಎಂದೇ ಪೊಲೀಸರು ಭಾವಿಸಿದ್ದರು. ಕೆಲ ಸಿಸಿಟಿವಿ ದೃಶ್ಯಗಳನ್ನು ಗಮನಿಸುವಾಗ ಈ ಕಾರು ಹಿಂಬಾಲಿಸಿರುವುದು ಪತ್ತೆಯಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಕಾರಿನ ಮಾಲೀಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. 1 ಲಕ್ಷ ರೂಪಾಯಿಗೆ ವೃಶಾಲಿ ಪತಿಯೇ ಕೊಲೆಗೆ ಸುಪಾರಿ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಇತ್ತ ಗಂಡ ಪ್ರಕಾಶ್‌ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಒಂದೊಂದೆ ಘಟನೆಗಳು ಹೊರಬಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

LPG ಗ್ಯಾಸ್ ಸಿಲಿಂಡರ್ ಬುಕಿಂಗ್​ಗೆ ಬಂತು ಹೊಸ ನಿಯಮ- ಕೂಡಲೇ ಜಾರಿ: ಏನಿದು ರೂಲ್ಸ್​?
ಮದುವೆಗೆ ಸಂಬಳ, ಆಸ್ತಿ, ಅಂದ-ಚೆಂದ ಬೇಡ; ಆ ರೀತಿ ಇದ್ರೆ ಕಾಂಟ್ಯಾಕ್ಟ್‌ ಮಾಡಿ; ಹುಡುಗಿ ಡಿಮ್ಯಾಂಡ್‌ಗೆ ದಂಗಾದ ಜನರು