ಮಗಳ ಮದುವೆ ಮಾಡಿಸಲು ಸಾಧ್ಯವಾಗದೇ ತಂದೆ ಸಾವು, ಅಪ್ಪನ ಕಳ್ಕೊಂಡ ನೋವಿನಲ್ಲಿ ಪುತ್ರಿ ದುರಂತ ಅಂತ್ಯ

Published : Mar 10, 2026, 12:45 PM IST
TN Police

ಸಾರಾಂಶ

ಮಗಳ ಮದುವೆ ಮಾಡಿಸಲು ಸಾಧ್ಯವಾಗದೇ ತಂದೆ ಸಾವು, ಅಪ್ಪನ ಕಳ್ಕೊಂಡ ನೋವಿನಲ್ಲಿ ಪುತ್ರಿ ದುರಂತ ಅಂತ್ಯ, ಒಂದೆಡೆ ಆರ್ಥಿಕ ಸಂಕಷ್ಟ, ಮತ್ತೊಂದೆಡ ಉತ್ತಮ ಸಂಬಂಧಗಳು ಬರುತ್ತಿಲ್ಲ ಅನ್ನೋ ಕೊರಗಿನಲ್ಲಿ ಇಡೀ ಕುಟುಂಬವೇ ಇದೀಗ ಕಣ್ಣೀರ ಕೋಡಿಯಲ್ಲಿ ಮುಳುಗಿದೆ. 

ಚೆನ್ನೈ (ಮಾ.10) ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದಾಳೆ, ಆಕೆಯ ಮದುವೆ ಮಾಡಿಸಲು ತನಗೆ ಸಾಧ್ಯವಾಗುತ್ತಿಲ್ಲ. ಒಂದೆಡೆ ಆರ್ಥಿಕ ಸಂಕಷ್ಟ ಮತ್ತೊಂದೆಡೆ ಬಡತನ ಕಾರಣದಿಂದ ಉತ್ತಮ ಸಂಬಂಧಗಳು ಬರುತ್ತಿಲ್ಲ. ಮಗಳ ವಯಸ್ಸು 30 ದಾಟುತ್ತಿದ್ದಂತೆ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದೇ ಕೊರಗಿನಲ್ಲಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ. ತಂದೆ ಸಾವಿನ ಶಾಕ್‌ನಲ್ಲಿ ಮರುದಿನ ಮಗಳು ಕೂಡ ದುರಂತ ಅಂತ್ಯಕಂಡ ಘಟನೆ ಚೆನ್ನೈನ ಹೊರವಲಯದಲ್ಲಿರುವ ವಡಪಳನಿಯಲ್ಲಿ ನಡೆದಿದೆ.

ಏನಿದು ದುರಂತ ಘಟನೆ?

57 ವರ್ಷದ ಆಟೋ ಚಾಲಕ ಕೃಷ್ಣಕುಮಾರ್ ಪತ್ನಿ ಹಾಗೂ ಕಿರಿಯ ಮಗಳೊಂದಿಗೆ ವಡಪಳನಿಯಲ್ಲಿ ವಾಸವಾಗಿದ್ದರು. ಹಿರಿಯ ಮಗಳನ್ನು ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಇದರ ಸಾಲದಲ್ಲೇ ಕೃಷ್ಣಕುಮಾರ್ ಕುಟುಂಬ ಪರದಾಡುತ್ತಿತ್ತು. ಕಿರಿಯ ಮಗಳಿಗೆ ಮದುವೆ ಮಾಡಿಸಲು ಸಾಲ ತೀವ್ರಗೊಂಡ ಕಾರಣ ಸಂಬಂಧಗಳು ಬಂದರೂ ಸಾಧ್ಯವಾಗಿರಲಿಲ್ಲ. ಸಾಲದ ಹೊರೆ ಕಡಿಮೆಯಾದ ತಕ್ಷಣವೇ ಕಿರಿಯ ಮಗಳು 30 ವರ್ಷದ ಪಾಕಿಯಂ ಮದುವೆ ಮಾಡಿಸಲು ಮುಂದಾಗಿದ್ದರು. ಆದರೆ ಸಾಲ ಹೊರೆ ಕಡಿಮೆಯಾಗುವಷ್ಟರಲ್ಲಿ ಮಗಳಿಗೆ ಸಂಬಂಧಗಳೇ ಬರದಾಯಿತು.

ತನ್ನ ಸಾಲದಿಂದ ಕಿರಿಯ ಮಗಳ ಬಾಳು ನರಕವಾಯಿತು ಎಂದು ಕೃಷ್ಣಕುಮಾರ್ ಪದೇ ಪದೇ ನೊಂದುಕೊಂಡಿದ್ದರು. ಈ ವೇಳೆ ಪತ್ನಿ ಸಮಾಧಾನಪಡಿಸಿದ ಘಟನೆಗಳು ನಡೆದಿತ್ತು. ಕಳೆದ ಒಂದು ತಿಂಗಳಿನಿಂದ ಕೃಷ್ಣಕುಮಾರ್ ಮಾನಸಿಕವಾಗ ಕುಗ್ಗಿ ಹೋಗಿದ್ದರು. ಇದರ ಪರಿಣಾಮ ಬದುಕು ಅಂತ್ಯಗೊಳಿಸಿದ್ದಾರೆ. ತಂದೆ ಮನೆಗೆ ಬಾರದ ಕಾರಣ ಪುತ್ರಿ ಎಲ್ಲೆಡೆ ವಿಚಾರಿಸಲು ಆರಂಭಿಸಿದ್ದಾಳೆ. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಇತ್ತ ತಂದೆಯ ಫೋನ್ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದೆ. ಆತಂಕಗಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹುಡುಕಾಡಿದಾಗ ಕೃಷ್ಣಕುಮಾರ್ ಮೃತದೇಹ ಪತ್ತೆಯಾಗಿದೆ. ತಂದೆ ಹಲವು ಬಾರಿ ತನ್ನು ನೋವು ಮಗಳಲ್ಲಿ ಹೇಳಿಕೊಂಡಿದ್ದರು. ಈ ವೇಳೆ ತಂದೆಯನ್ನೇ ಸಮಾಧಾನ ಪಡಿಸಿದ್ದ ಮಗಳಿಗೆ ತಂದೆ ಸಾವು ತೀವ್ರ ಆಘಾತ ನೀಡಿದೆ. ಅಂತ್ಯಸಂಸ್ಕಾರ ಮುಗಿಸಿ ಬಂದ ಮಗಳು ಕೋಣೆಗೆ ತೆರಳಿ ಬಾಗಿಲು ಹಾಕಿ ದುರಂತ ಅಂತ್ಯಕಂಡಿದ್ದಾಳೆ.

ಮಗಳು ಬಾಗಿಲು ತೆರೆಯದ ಕಾರಣ ಆತಂಕಗೊಂಡ ತಾಯಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ತೆರೆದುನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗಳು ಬಿದ್ದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಲಿಲ್ಲ. ಒಂದೇ ದಿನ ಅಂತರದಲ್ಲಿ ಗಂಡ ಹಾಗೂ ಮಗಳನ್ನು ಕಳೆದುಕೊಂಡ ತಾಯಿ ಇದೀಗ ಕಣ್ಣೀರಿಡುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Iran-Israel conflict: ಪೆಟ್ರೋಲ್, ಡೀಸೆಲ್ ಅಭಾವ ನೀಗಿಸಲೇನು ಮಾಡಬಹುದು?
LPG Gas ಕೊರತೆ ಅಂತ ಗಾಬರಿಯಾದ್ರಾ? ಅಸಲಿ ಸತ್ಯ ಬೇರೆ ಇದೆ! ಕರಾಳ ದಂಧೆಗೆ ಮೋಸ ಹೋಗ್ಬೇಡಿ!