ಕೇರಳದಲ್ಲಿ ಭುಗಿಲೆದ್ದ ಮತ್ತೊಂದು ವಿವಾದ, ದೇವಸ್ಥಾನ ಆವರಣದಲ್ಲಿ ಆರ್‌ಎಸ್ಎಸ್‌ಗೆ ನಿಷೇಧ!

By Suvarna NewsFirst Published May 23, 2023, 4:53 PM IST
Highlights

ಸಿಪಿಎಂ ನಾಯಕ ಅಧ್ಯಕ್ಷತೆ ವಹಿಸಿರುವ ದೇವಸ್ಥಾನ ಆಡಳಿತ ಮಂಡಳಿ ಇದೀಗ ವಿವಾದಾತ್ಮಕ ಸುತ್ತೋಲೆ ಹೊರಡಿಸಿದೆ. ದೇವಸ್ಥಾನದಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ, ಪಥಸಂಚಲನ ಸೇರಿದಂತ ಎಲ್ಲಾ ಚಟುವಟಿಕೆ ನಿಷೇಧಿಸಿದೆ.

ತಿರುವನಂತಪುರಂ(ಮೇ.23): ದೇಶದಲ್ಲಿ ಮತ್ತೆ ಕೇರಳ ವಿವಾದಾತ್ಮಕ ನಡೆಯಿಂದ ಸುದ್ದಿಯಾಗಿದೆ. ಕೇರಳ ಸ್ಟೋರಿ ಆರ್‌ಎಸ್‌ಎಸ್ ಪ್ರಚೋದಿತ ಚಿತ್ರ ಎಂದಿದ್ದ ಸಿಪಿಎಂ ನೇತೃತ್ವದ ಪಿಣರಾಯಿ ವಿಜಯನ್ ಸರ್ಕಾರ ಇದೀಗ ಟ್ರಿವಾಂಕೂರ್ ದೇವಸಂ ಬೋರ್ಡ್(TDB) ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ದೇವಸ್ಥಾನಗಳ ಆಡಳಿತ ಮಂಡಳಿ ಟಿಡಿಬಿ ಮುಖ್ಯಸ್ಥ, ಸಿಪಿಎಂ ನಾಯಕ ಕೆ ಆನಂತಗೋಪನ್, ದೇವಸ್ಥಾನದಲ್ಲಿ, ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ, ಆರ್‌ಎಸ್‌ಎಸ್ ಪಥಸಂಚಲನ ಹಾಗೂ ಇತರ ಆರ್‌ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದ್ದಾರೆ.

ದೇವಸಂ ಬೋರ್ಡ್ ಆದೇಶವನ್ನು ಮೀರಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ. ಯಾವುದೇ ದೇವಸ್ಥಾನದ ಆವರಣದಲ್ಲಿ ಆರ್‌ಎಸ್ಎಸ್ ಶಾಕೆ ಹಾಗೂ ಇತರ ಚಟುವಟಿಕೆಗೆ ಅವಕಾಶ ನೀಡಬಾರದು. ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ದೇವಸಂ ಬೋರ್ಡ್ ಹೇಳಿದೆ. ದೇವಸ್ಥಾನದಲ್ಲಿ ನಡಯುವ ಹಬ್ಬ ಹಾಗೂ ವಿಶೇಷ ಆಚರಣೆಗಳ ಕುರಿತು ಇದುವರೆಗೆ ತನಿಖೆ ನಡೆಸಿಲ್ಲ. ಆದರೆ ಹಬ್ಬಗಳ ಸಂದರ್ಭದಲ್ಲಿ ಕೆಲ ದೇವಸ್ಥಾನಗಳು ಆರ್‌ಎಸ್‌ಎಸ್ ಚಟುವಟಿಕೆಗೆ, ಪಥಸಂಚಲನಕ್ಕೆ ಅವಕಾಶ ನೀಡಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಇನ್ನು ಮುಂದೆ ಅವಕಾಶವಿಲ್ಲ ಎಂದು ದೇವಸಂ ಬೋರ್ಡ್ ಹೇಳಿದೆ.

Latest Videos

RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್‌: ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

2016ರಲ್ಲಿ ಕೆಲ ದೇವಸ್ಥಾನದ ಆವರಣದಲ್ಲಿ ಆರ್‌ಎಸ್ಎಸ್ ಚಟುವಟಿಕೆಗೆ ಅವಕಾಶ ನೀಡಿರುವುದು ಗಮನಕ್ಕೆ ಬಂದಿದೆ. ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ನೀಡಲಾಗಿತ್ತು ಎಂದು ದೇವಸಂ ಬೋರ್ಡ್ ಹೇಳಿದೆ. ಆದರೆ ದೇವಸಂ ಬೋರ್ಡ್ ನಿರ್ಧಾರವನ್ನು ಆರ್‌ಎಸ್‌ಎಸ್ ಸೇರಿ ಹಿಂದೂಪರ ಸಂಘಟನೆಗಳು ಖಂಡಿಸಿದೆ. ಆರ್‌ಎಸ್‌ಎಸ್ ಶಾಖೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುವುದಿಲ್ಲ. ಈ ರೀತಿಯ ಒಂದೇ ಒಂದು ಉದಾಹರಣೆ, ಘಟನೆ ನಡೆದಿಲ್ಲ. ದೇವಸ್ಥಾನ ಅವರಣದಲ್ಲಿ ಶಾಖೆ ನಡೆಸುತ್ತೇವೆ. ಅತ್ಯಂತ ಶಿಸ್ತುಬದ್ಧವಾಗಿ ಈ ಶಾಖೆ ನಡೆಯುತ್ತದೆ. ಶಾಖೆಯಲ್ಲಿನ ಏನು ನಡೆಯುತ್ತಿದೆ ಎಂದು ಅಧಿಕಾರಿಗಳು ಬಂದು ನೋಡಲಿ. ಆದರೆ ಹಿಂದೂ ದೇವಸ್ಥಾನದಲ್ಲಿ ಸನಾತನ ಧರ್ಮದ ಸಂಸ್ಕೃತಿ, ಪರಂಪರೆ ಉಳಿಸುವ ಆರ್‌ಎಸ್‌ಎಸ್‌ ಶಾಖೆ ನಿಷೇಧಿಸಿರುವುದು ಸಂವಿಧಾನದ ಕಗ್ಗೊಲೆ ಎಂದು ಆರ್‌ಎಸ್‌ಎಸ್ ಹೇಳಿದೆ.

ಕೇರಳದಲ್ಲಿ ಆರ್‌ಎಸ್‌ಎಸ್ ಗಟ್ಟಿಯಾಗಿ ಬೇರೂರುತ್ತಿದೆ. ಆರ್‌ಎಸ್‌ಎಸ್ ಇಲ್ಲಿನ ದೇವಸ್ಥಾನಗಳು, ಪರಂಪರೆ, ಸಂಪ್ರದಾಯ, ಹಿಂದೂ ಧರ್ಮದ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಶಾಖೆಯಲ್ಲಿ ಚರ್ಚೆ, ಮಂಥನ ನಡೆಸುತ್ತಿದೆ. ಇದು ಸಿಪಿಎಂ ಹಾಗೂ ಇತರ ಹಿಂದೂ ವಿರೋಧಿ ಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹಾಗೂ ದೇವರ ಸ್ವಂತ ನಾಡಿನ ಸಂಸ್ಕೃತಿಯನ್ನು ಮುಗಿಸಲು ಸಿಪಿಎಂ ಹಾಗೂ ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದೆ.ಕೇರಳದ ಹಲವು ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಯುತ್ತಿದೆ. ಕೇರಳದಲ್ಲಿ ಬಿಜೆಪಿ ಪ್ರಬಲಗೊಳ್ಳುತ್ತಿರುವುದನ್ನು ಅರಿತ ಸಿಪಿಎಂ ಇದೀಗ ಆರ್‌ಎಸ್‌ಎಸ್ ಮೇಲೆ ನಿರ್ಬಂಧ ಹೇರುತ್ತಿದೆ ಎಂದು ಸಂಘಟನೆಗಳು ಆರೋಪಿಸಿದೆ.

ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್‌ಎಸ್‌ಎಸ್‌ನವರು ದೇಶವನ್ನು ಹಾಳು ಮಾಡ್ತಾರೆ: ಕುಮಾರಸ್ವಾಮಿ

ದೇವಸಂ ಬೋರ್ಡ್ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸಿದೆ. ದೇವಸ್ಥಾನ ಅವರಣದಲ್ಲಿ ಆರ್‌ಎಸ್ಎಸ್ ಶಾಖೆ ಯಾಕೆ ಮಾಡಬೇಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 
 

click me!