ತನ್ನ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ ಐಎಎಸ್ ಅಧಿಕಾರಿಯ ವರ್ಗಾವಣೆ

By Anusha Kb  |  First Published Jul 10, 2024, 3:13 PM IST

ನಾಗರಿಕ ಸೇವಾ ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಪ್ರೊಬೆಷನರಿ ಅಥವಾ ಟ್ರೈನಿ ಐಎಎಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. 


ಮುಂಬೈ: ನಾಗರಿಕ ಸೇವಾ ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಪ್ರೊಬೆಷನರಿ ಅಥವಾ ಟ್ರೈನಿ ಐಎಎಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಸಾಮಾನ್ಯವಾಗಿ ತರಬೇತಿಯಲ್ಲಿರುವ ಅಧಿಕಾರಿಗಳಿಗೆ ಕೆಂಪು ಅಥವಾ ನೀಲಿ ಬಣ್ಣದ ಗೂಟದ ಕಾರುಗಳನ್ನು ನೀಡಲಾಗುವುದಿಲ್ಲ ( red-blue beacon) ಕೆಂಪು ನೀಲಿ ಬೀಕಾನ್‌ಗಳಿರುವ ಗಾಡಿಗಳನ್ನು ಅವರು ಬಳಸುವಂತಿಲ್ಲ, ಆದರೆ ಈ  ಐಎಎಸ್ ಅಧಿಕಾರಿ ತರಬೇತಿಯಲ್ಲಿರುವಾಗಲೇ ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು ಬೀಕಾನ್ ದೀಪವನ್ನು ಅಳವಡಿಸಿಕೊಂಡು ತಿರುಗಾಡುತ್ತಿದ್ದರು. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ. 

ಪೂಜಾ ಖೇಡ್ಕರ್ ಎಂಬುವವರೇ ಹೀಗೆ ತಮ್ಮ ಅಧಿಕಾರ ಬಳಸಿಕೊಂಡು ಗೂಟದ ಕಾರಲ್ಲಿ ತಿರುಗಾಡುತ್ತಿದ್ದ ಐಎಎಸ್ ಅಧಿಕಾರಿ, ಇವರು ಕೇಂದ್ರ ನಾಗರಿಕ ಸೇವಾ ಆಯೋಗವೂ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ 821ನೇ ರಾಂಕ್ ಗಳಿಸಿದ್ದು, ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಅವರನ್ನು ಮಹಾರಾಷ್ಟ್ರದ ಮತ್ತೊಂದು ಜಿಲ್ಲೆಯಾದ ವಾಶಿಂಗೆ ವರ್ಗಾವಣೆ ಮಾಡಲಾಗಿದೆ. ಇವರು ಕೇವಲ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಿದ್ದು ಮಾತ್ರವಲ್ಲದೇ, ಕಾರಿಗೆ ಮಹಾರಾಷ್ಟ್ರ ಸರ್ಕಾರ ಎಂಬ ಬೋರ್ಡನ್ನು ಕೂಡ ಅಂಟಿಸಿದ್ದರು. ಪ್ರೊಬೇಷನರಿ ಅವಧಿಯಲ್ಲಿ ಯಾವ ಅಧಿಕಾರಿಗೂ ಈ ಸೌಲಭ್ಯ ನೀಡುವುದಿಲ್ಲ, ಹೀಗಾಗಿ ಇದು ವಿವಾದಕ್ಕೆ ಕಾರಣವಾಯ್ತು.

Tap to resize

Latest Videos

ಹೆಣ್ಮಕ್ಳೇ ಸೂಪರ್ ಗುರೂ..; ಇನ್ಸ್ಟಾ ರೀಲಲ್ಲಿ ಕಂಡ ಅಕ್ಕ ತಂಗಿನ ನೋಡಿ ಹೆಮ್ಮೆ ಪಡ್ತಿದೆ ಇಂಟರ್ನೆಟ್!

ಈಕೆಯ ಕಿತಾಪತಿ ಬರೀ ಇಷ್ಟೇ ಅಲ್ಲ ಹೆಚ್ಚುವರಿ ಕಲೆಕ್ಟರ್ ಅಜಯ್ ಮೋರ್ ಅವರು ಇಲ್ಲದಿದ್ದಾಗ ಅವರಿಗೆ ಮೀಸಲಾಗಿದ್ದ ಕೊಠಡಿಯನ್ನು ಕೂಡ ಇವರು ಅಕ್ರಮಿಸಿಕೊಂಡಿದ್ದರು. ಅವರ ಅನುಮತಿ ಇಲ್ಲದೇ ಅವರ ಕಚೇರಿಯ ಪೀಠೋಪಕರಣಗಳನ್ನು ಕಚೇರಿಯಿಂದ ತೆಗೆದು ಹಾಕಿದ್ದರು. ಅಲ್ಲದೇ ತನಗೆ ಲೆಟರ್ ಹೆಡ್, ನಾಮಫಲಕ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಕಂದಾಯ ಸಹಾಯಕರಿಗೆ ಕೇಳಿದ್ದರು ಎಂದು ವರದಿ ಆಗಿದೆ.

ಯುವ ಐಎಎಸ್ ಅಧಿಕಾರಿಯ ಈ ಕಿತಾಪತಿ ಬೆಳಕಿಗೆ ಬಂದ ಮೇಲೆ ಪುಣೆಯ ಕೆಲೆಕ್ಟರ್ ಸುಹಾಸ್ ದಿವಾಸೆ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಅವಾಂತರ ಬಗ್ಗೆ ಪತ್ರ ಬರೆದಿದ್ದರು. ಇದಾದ ಬಳಿಕ ಈಗ ಆಕೆಯನ್ನು ಪುಣೆಯಿಂದ ವಾಶಿಂಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ 2023ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್ ಅವರು ತಮ್ಮ ಉಳಿದಿರುವ ಪ್ರೊಬೇಷನರಿ ಅಧಿಕಾರವಧಿಯನ್ನು ವಾಶಿಂನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಸೇವೆ ಸಲ್ಲಿಸಬೇಕಿದೆ. ಕೆಲ ಮೂಲಗಳ ಪ್ರಕಾರ, ಪೂಜಾ ಅವರ ತಂದೆಯೂ ಕೂಡ ನಿವೃತ್ತ ಅಧಿಕಾರಿಯಾಗಿದ್ದು, ಅವರು ತಮ್ಮ ಮಗಳ ಬೇಡಿಕೆಯನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎಂದು ವರದಿ ಆಗಿದೆ. 

ಒಟ್ಟಿನಲ್ಲಿ ಸಂಪೂರ್ಣ ಅಧಿಕಾರ ಕೈ ಸೇರುವ ಮೊದಲೇ ಈ ಯುವ ಐಎಎಸ್ ಅಧಿಕಾರಿ ಉದ್ಧಟತನದಿಂದ ವರ್ತಿಸುತ್ತಿದ್ದು, ಇನ್ನೂ ಸಂಪೂರ್ಣ ಅಧಿಕಾರ ಕೈಗೆ ಸಿಕ್ಕರೆ ಇನ್ನೇನ್ನೆಲ್ಲಾ ಕಿತಾಪತಿಗಳನ್ನು ಮಾಡ್ತಾಳೋ ದೇವರೇ ಬಲ್ಲ. 

ಮೊದಲ ಯತ್ನದಲ್ಲೇ UPSC ಪರೀಕ್ಷೆ ಪಾಸ್ ಮಾಡಿದ ಈ ಐಎಎಸ್ ಅಧಿಕಾರಿ ಲೋಕಸಭಾ ಸ್ಪೀಕರ್ ಪುತ್ರಿ

click me!