ದೇಶದಲ್ಲಿ ವಿಚ್ಛೇದನ ಪಡೆದ ಮಹಿಳೆಯರ ಅಧಿಕಾರದ ಕುರಿತು ಈ ಕಾನೂನು ರೂಪಿಸಲಾಗಿದೆ. ಕಾನೂನಿಗೆ ಯಾವುದೇ ಧರ್ಮ ಇಲ್ಲ ಮತ್ತು ಎಲ್ಲರಿಗೂ ಸಮಾನವಾಗಿರುತ್ತದೆ
ನವದೆಹಲಿ: ಸುಪ್ರೀಂಕೋರ್ಟ್ ತಲಾಖ್ (Talaq) ಪಡೆದ ಮುಸ್ಲಿಂ ಮಹಿಳೆಯರ (Muslim Women) ಪರವಾದ ಮಹತ್ವದ ತೀರ್ಪನ್ನು ನೀಡಿದೆ. ಪತಿಯಿಂದ ತಲಾಖ್ ಪಡೆದ ಮಹಿಳೆ ಜೀವನಾಂಶ (Alimony) ಪಡೆಯಲು ಅರ್ಹಳು. ವಿಚ್ಛೇದನ ಕೊಡುವ ಗಂಡನಿಂದ ಮಹಿಳೆ ಪರಿಹಾರ ಕೇಳಬಹುದು. ಎಲ್ಲಾ ಧರ್ಮಕ್ಕೂ ಕಾನೂನು ಒಂದೇ ಆಗಿದೆ. ಕಾನೂನು ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚ್ಛೇದನಕ್ಕೊಳಗಾಗುವ ಮುಸ್ಲಿಂ ಮಹಿಳೆಯರು ಎಲ್ಲರಂತೆ ಮುಂದಿನ ಜೀವನ ನಿರ್ವಹಣೆಗಾಗಿ ಪರಿಹಾರ ಕೇಳಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸುವಾಗ ಮುಸ್ಲಿಂ ಮಹಿಳೆಯರು ಸಿಆರ್‌ಪಿಸಿ ಸೆಕ್ಷನ್ 125ರ ಪ್ರಕಾರ, ಗಂಡನಿಂದ ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ. ಅಗಸ್ಟಿನ್ ಜಾರ್ಜ್ ಮಸೀಹ ಅವರ ಪೀಠ ತೀರ್ಪು ಪ್ರಕಟಿಸಿದೆ. ಜೀವನಾಂಶ ಪಡೆದುಕೊಳ್ಳಲು ಮುಸ್ಲಿಂ ಮಹಿಳೆ ನ್ಯಾಯಾಲಯದ ಮೊರೆ ಹೋಗಬಹುದು. ಅದು ಆಕೆಯ ಕಾನೂನುಬದ್ಧವಾದ ಹಕ್ಕು. ಪತ್ನಿಗೆ ವಿಚ್ಛೇದನ ನೀಡುವ ಗಂಡ, ಜೀವನಾಂಶ ಒದಗಿಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ.
ಶೋಯೆಬ್ ಮಲೀಕ್‌ಗೆ 'ಖುಲಾ' ನೀಡಿದ ಸಾನಿಯಾ, ಮುಸ್ಲಿಂ ಹೆಣ್ಣುಮಕ್ಕಳಿಗಿದೆ ಇಂಥದ್ದೊಂದು ಅಧಿಕಾರ!
ಮುಸ್ಲಿಂ ಮಹಿಳಾ ಕಾಯ್ದೆ 1986ರ ಉಲ್ಲೇಖ
ಹೈದರಾಬಾದ್ ಮೂಲದ ಯುವಕ, ತೆಲಂಗಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ವಿಚ್ಛೇದನ ಪಡೆಯುವ ಮುಸ್ಲಿಂ ಮಹಿಳೆ, ಗಂಡನಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮುಸ್ಲಿಂ ಮಹಿಳಾ ಕಾಯ್ದೆ 1986ರ ಪ್ರಕಾರ, ತಲಾಖ್ ಪಡೆದ ಮಹಿಳೆ ಜೀವನಾಂಶ ಪಡೆಯಲು ಅರ್ಹಳು. ಈ ನಿಯಮವನ್ನು ಪಾಲನೆ ಮಾಡಬೇಕು. ದೇಶದಲ್ಲಿ ವಿಚ್ಛೇದನ ಪಡೆದ ಮಹಿಳೆಯರ ಅಧಿಕಾರದ ಕುರಿತು ಈ ಕಾನೂನು ರೂಪಿಸಲಾಗಿದೆ. ಕಾನೂನಿಗೆ ಯಾವುದೇ ಧರ್ಮ ಇಲ್ಲ ಮತ್ತು ಎಲ್ಲರಿಗೂ ಸಮಾನವಾಗಿರುತ್ತದೆ. ಸಿಆರ್‌ಪಿಸಿ ಸೆಕ್ಷನ್ 125ರ ಪ್ರಕಾರ ಜೀವನಾಂಶ ಪಡೆಯಲು ಆಕೆ ಹಕ್ಕುದಾರಳು ಎಂದು ನ್ಯಾಯಾಲಯ ಹೇಳಿದೆ.
ಸೆಕ್ಷನ್ 125 ಏನು ಹೇಳುತ್ತದೆ?
ಸೆಕ್ಷನ್ 125 ರ ಅಡಿಯಲ್ಲಿ, ಆರ್ಥಿಕವಾಗಿ ನಿಮ್ಮ ಅವಲಂಬಿತರಾಗಿರುವವರಿಗೆ ಜೀವನ ನಿರ್ವಹಣೆಯನ್ನು ಒದಗಿಸಬೇಕು. ಈ ಕಾನೂನುಗಳು ಎಲ್ಲಾ ಧರ್ಮಗಳ ಮೇಲೆ ಸಮಾನ ಹಕ್ಕುಗಳನ್ನು ಹೊಂದಿರುವ ಎಲ್ಲಾ ಭಾರತೀಯರಿಗೆ ಅನ್ವಯಿಸುತ್ತವೆ.
ತ್ರಿವಳಿ ತಲಾಖ್‌ನಿಂದ ಬೇಸತ್ತ ಮುಸ್ಲಿಂ ಮಹಿಳೆ: ಹಿಂದೂ ಯುವಕನೊಂದಿಗೆ ದೇಗುಲದಲ್ಲಿ ಮದುವೆ