ಹಾಲು ಕೊಡುವ ಹಸುವಿಗಾಗಿ ಆಲ್ಕೋಹಾಲ್‌ ಮೇಲೆ ಸೆಸ್‌, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ತೀರ್ಮಾನ!

By Santosh NaikFirst Published Mar 18, 2023, 6:44 PM IST
Highlights

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಿದೆ. 53, 413 ಕೋಟಿ ರೂಪಾಯಿ ಮೊತ್ತದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸಕ್ಕು ಸರ್ಕಾರ, ಆಲ್ಕೋಹಾಲ್‌ ಮಾರಾಟದಿಂದ 'ಗೋವಿನ ತೆರಿಗೆ' ಸಂಗ್ರಹಿಸುವ ಯೋಜನೆ ರೂಪಿಸಿದೆ.

ಶಿಮ್ಲಾ (ಮಾ.18): ಹಿಮಾಚಲ ಪ್ರದೇಶದದಲ್ಲಿ ಇನ್ನು ಮುಂದೆ ಯಾರೇ ಮದ್ಯ ಖರೀದಿ ಮಾಡಿದರೂ, ಗೋವಿನ ತೆರಿಗೆ ಕಟ್ಟಬೇಕಾಗುತ್ತದೆ. ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸಕ್ಕು 53,413 ಕೋಟಿ ರೂಪಾಯಿಯ ರಾಜ್ಯ ಬಜೆಟ್‌ ಮಂಡನೆ ಮಾಡಿದರು. ಈ ವೇಳೆ ಆಲ್ಕೋಹಾಲ್‌ ಖರೀದಿ ಮಾಡುವವರ ಮೇಲೆ ಕೌ ಸೆಸ್‌ ವಿಧಿಸುವ ಘೋಷಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಸಕ್ಕು ಸರ್ಕಾರದ  ಈ ನಿರ್ಧಾರ ಅಚ್ಚರಿ ಮೂಡಿಸಿದ್ದು ಈ ಸೆಸ್‌ನ ಮೂಲಕ ಪ್ರತಿ ವರ್ಷ 100 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸೃಷ್ಟಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಹಿಮಾಚಲ ಪ್ರದೇಶ ಸರ್ಕಾರವು ಇದೇ ಮೊದಲ ಬಾರಿಗೆ ಮದ್ಯ ಮಾರಾಟವನ್ನು ಹಸುವಿನ ತೆರಿಗೆಗೆ ಜೋಡಿಸಿದೆ. ಇದಕ್ಕೂ ಮುನ್ನ ಕೆಲ ರಾಜ್ಯಗಳು ಕೂಡ ಬೀದಿಹಸುಗಳನ್ನು ನೋಡಿಕೊಳ್ಳಲು ಇಂಥದ್ದೇ ಮಾರ್ಗೋಪಾಯ ಕಂಡುಕೊಂಡಿತ್ತು. ಹಸುಗಳ ಅರೈಕೆ ಹಾಗೂ ರಕ್ಷಣೆಗೆಗೆ ಹಣ ವಿನಿಯೋಗಿಸಲು ಸೆಸ್‌ ಮೂಲಕ ಆದಾಯ ಸಂಗ್ರಹಣೆ ಮಾಡಿತ್ತು. ರಾಜಸ್ಥಾನ ಸರ್ಕಾರವು ಮೂರು ವರ್ಷಗಳಲ್ಲಿ ಮಾರ್ಚ್‌ 2022ರ ವೇಳೆಗೆ ಹಸುವಿನ ಸೆಸ್‌ನಿಂದ 2176 ಕೋಟಿ ರೂಪಾಯಿಗಳ ಆದಾಯ ಪಡೆದುಕೊಂಡಿದೆ.

ಮದ್ಯದ ಮೇಲೆ ಸೆಸ್‌ ವಿಧಿಸಿದ್ದ ಮೊದಲ ರಾಜ್ಯ ಪಂಜಾಬ್‌. ಪಂಜಾಬ್‌ ಸರ್ಕಾರ ಕಾರ್‌, ಬೈಕ್‌, ಇಂಧನ ಬಳಕೆ, ಕಲ್ಯಾಣ ಮಂಟಪದ ಬುಕ್ಕಿಂಗ್‌, ಸಿಕೆಂಟ್‌ ಚೀಲಗಳು ಹಾಗೂ ಇತರೆ ವಸ್ತುಗಳ ಮೇಲಿನ ಹೊರೆಯನ್ನು ತಗ್ಗಿಸುವ ಸಲುವಾಗಿ ಭಾರತದಲ್ಲಿ ತಯಾರಿಸಿದ ಸ್ಪಿರಿಟ್‌ಗಳ ಮೇಲೆ 10 ರೂಪಾಯಿ ಹಾಗೂ ಪಂಜಾಬ್‌ನಲ್ಲಿ ತಯಾರಿಸಿದ ಸ್ಪಿರಿಟ್‌ ಮೇಲೆ 5 ರೂಪಾಯಿ ಹೆಚ್ಚುವರಿ ಸೆಸ್‌ ವಿಧಿಸುವ ತೀರ್ಮಾನ ಮಾಡಿತ್ತು.

ಇನ್ನು ಮಹಿಳೆಯರಿಗೆ ಮಾಸಿಕ ನಿಗದಿತ ವೇತನ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಸಬ್ಸಿಡಿಗಳು ಮುಂತಾದ ಎಲ್ಲ ಚುನಾವಣಾ ಆಶ್ವಾಸನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವುದಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಘೋಷಣೆ ಮಾಡಿದೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರು ಸ್ಥಾಪಿಸುವ ಘೋಷಣೆಯನ್ನು ಮಾಡುವ ಮೂಲಕ 1.36 ಲಕ್ಷ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಮತ್ತೊಂದು ಚುನಾವಣಾ ಭರವಸೆಯನ್ನು ಈಡೇರಿಸುವುದಾಗಿ ಸರ್ಕಾರ ಹೇಳಿದೆ.

ಬಸ್‌ ಚಾಲಕನ ಪುತ್ರ ಈಗ ಹಿಮಾಚಲ ಸಿಎಂ : ಹಾಲಿನ ಬೂತ್‌ ನಡೆಸುತ್ತಿದ್ದ ಸುಖು..!

2023-24ರಲ್ಲಿ ಒಟ್ಟು 53,413 ಕೋಟಿ ರೂಪಾಯಿ ಬಜೆಟ್‌ಅನ್ನು ಹಿಮಾಚಲ ಸರ್ಕಾರ ಘೋಷಣೆ ಮಾಡಿದ್ದು, 2026ರ ವೇಳೆಗೆ ಹಿಮಾಚಲವನ್ನು ಹಸಿರು ರಾಜ್ಯವನ್ನಾಗಿ ಮಾಡಲು,  ಜಲವಿದ್ಯುತ್ ಮತ್ತು ಸೌರಶಕ್ತಿ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ತಮ್ಮ ಆಡಳಿತವು ಪ್ರಯತ್ನಿಸುತ್ತದೆ ಎಂದು ಸಿಎಂ ಸುಕ್ಕು ಹೇಳಿದ್ದಾರೆ. ಹಿಮಾಚಲ ರಸ್ತೆ ಸಾರಿಗೆ ನಿಗಮವು 1,500 ಡೀಸೆಲ್ ಬಸ್‌ಗಳನ್ನು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಹಂತಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಬದಲಾಯಿಸಲಿದೆ. ಯುವಕರು ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು 50% ಸಬ್ಸಿಡಿಯನ್ನು ಸಹ ಬಜೆಟ್ ಒಳಗೊಂಡಿದೆ.

ಹಿಮಾಚಲ ಪ್ರದೇಶದ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕಾರ

200 ಕೆವಿಯಿಂದ 2 ಮೆಗಾವ್ಯಾಟ್‌ ವರೆಗಿನ ಸಣ್ಣ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ರಾಜ್ಯವು ಯುವಜನರಿಗೆ 40% ಸಬ್ಸಿಡಿಯನ್ನು ನೀಡುತ್ತದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 20,000 ಬಾಲಕಿಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಗೆ 25,000 ಸಬ್ಸಿಡಿ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

click me!