ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ, ರೈಲು ಚಾಲಕರಿಗೆ ಹೊಸ ನಿಯಮ

By Kannadaprabha News  |  First Published Oct 14, 2023, 10:03 AM IST

ಒಡಿಶಾ ಭೀಕರ ರೈಲು ದುರಂತದ ಬೆನ್ನಲ್ಲೇ ರೈಲು ಚಾಲಕರ ಗರಿಷ್ಠ ಕೆಲಸದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದು ಗುರುವಾರ ರೈಲ್ವೆ ಮಂಡಳಿಯು ಎಲ್ಲಾ ವಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.


ನವದೆಹಲಿ (ಅ.14): ಒಡಿಶಾ ಭೀಕರ ರೈಲು ದುರಂತದ ಬೆನ್ನಲ್ಲೇ ರೈಲು ಚಾಲಕರ ಗರಿಷ್ಠ ಕೆಲಸದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದು ಗುರುವಾರ ರೈಲ್ವೆ ಮಂಡಳಿಯು ಎಲ್ಲಾ ವಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ರೈಲು ಅವಘಡಗಳು ಹೆಚ್ಚಿರುವ ನಡುವೆ ಈ ಸೂಚನೆ ನೀಡಲಾಗಿದೆ.

ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸಿಬ್ಬಂದಿಗಳ ಕರ್ತವ್ಯದ ಅವಧಿಗೆ ಸಂಬಂಧಿಸಿದ ಈ ಮಾರ್ಗಸೂಚಿಯಲ್ಲಿ ಚಾಲಕರ ಮತ್ತು ಸಿಬ್ಬಂದಿಗಳ ಒಂದು ಟ್ರಿಪ್‌ನ ಕರ್ತವ್ಯದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದಿದೆ. ಆದರೆ ಸತತ 12 ಗಂಟೆಗಳ ನಿರಂತರ ಕೆಲಸದ ಅವಧಿಯಲ್ಲಿ ಚಾಲಕರಿಗೆ ಊಟ ಸೇರಿದಂತೆ ಇತರ ವಿಶ್ರಾಂತಿಗೆ ಸಮಯವೇ ದೊರಕುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ.

Tap to resize

Latest Videos

ಜೈಲಿನಲ್ಲಿರುವ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ದೇಹಸ್ಥಿತಿ ವಿಷಮ

ಅತಿಯಾದ ಕೆಲಸದ ಅವಧಿಯಿಂದ ನಿದ್ದೆಗಣ್ಣಿನಲ್ಲಿ ಅಥವಾ ಆಯಾಸದ ವೇಳೆ ಚಾಲನೆ ಮಾಡುವುದು ಭೀಕರ ಅಪಘಾತಗಳಿಗೆ ಕಾರಣವಾಗಬಹುದು ಎಂದು ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾಗಿದೆ.

ಗಾಜಾಪಟ್ಟಿ ಒಳಗೆ ಇಸ್ರೇಲ್‌ ಸೇನೆ, ಯುದ್ಧ ಟ್ಯಾಂಕರ್‌ ಲಗ್ಗೆ: ಗುಳೆ

ಒಡಿಶಾ ರೈಲು ದುರಂತ: ಗುರುತು ಸಿಗದ 28 ಶವ 4 ತಿಂಗ್ಳ ಬಳಿಕ ಅಂತ್ಯಸಂಸ್ಕಾರ
296 ಜನರನ್ನು ಬಲಿ ಪಡೆದ ಜೂ.2ರ ಒಡಿಶಾ ರೈಲು ದುರಂತದಲ್ಲಿ ಗುರುತು ಪತ್ತೆಯಾಗದ 28 ಜನರ ಮತದೇಹಗಳಿಗೆ ಮಂಗಳವಾರ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಶವಗಳಿಗೆ ಇಲ್ಲಿನ ಪಾಲಿಕೆಯ ಮಹಿಳಾ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಅಗ್ನಿಸ್ಪರ್ಶ ಮಾಡಿದರು. ಅಪಘಾತ ನಡೆದು ನಾಲ್ಕು ತಿಂಗಳ ಕಾಲ ಈ ದೇಹಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಲೆಂದು ಇಲ್ಲಿನ ಏಮ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಸಂಗ್ರಹಿಡಲಾಗಿತ್ತು. ಆದರೆ ಈ 28 ದೇಹಗಳನ್ನು ಯಾರೂ ಸ್ವೀಕರಿಸಿದ ಕಾರಣ ಅದರ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಿ ಸಿಬಿಐ ಆದೇಶದ ಮೇರೆಗೆ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

click me!