ಅಚಾನಕ್ ಆಗಿ ಕುಸಿದ ಕಟ್ಟಡದ ಗೋಡೆ: ಓರ್ವ ಸಾವು

Published : Apr 13, 2025, 04:42 PM ISTUpdated : Apr 13, 2025, 05:10 PM IST
ಅಚಾನಕ್ ಆಗಿ ಕುಸಿದ ಕಟ್ಟಡದ ಗೋಡೆ: ಓರ್ವ ಸಾವು

ಸಾರಾಂಶ

ದೆಹಲಿಯ ಚಂದೇರ್ ವಿಹಾರ್‌ನಲ್ಲಿ 5 ಅಂತಸ್ತಿನ ಕಟ್ಟಡದ ಗೋಡೆ ಕುಸಿದು ಒಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಆಘಾತಕಾರಿ ದೃಶ್ಯ ವೈರಲ್ ಆಗಿದೆ.

ನವದೆಹಲಿ: 5 ಅಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಂತಹ ಆಘಾತಕಾರಿ ಘಟನೆ ದೆಹಲಿಯ ಚಂದೇರ್ ವಿಹಾರ್‌ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿ ಈಗ ಅಲ್ಲಿನ ಸಿಸಿ ಕ್ಯಾಮರಾವೊಂದರಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಳೆದ ಶುಕ್ರವಾರ  ದೆಹಲಿಯಲ್ಲಿ ಅತೀ ಅಪರೂಪದ ಧೂಳಿನ ಸುಂಟರಗಾಳಿ ಸಂಭವಿಸಿತ್ತು. ಇದೇ ಸಮಯದಲ್ಲಿ ನಡೆದ ಘಟನೆ ಇದಾಗಿದ್ದು, ಇದರ ವೀಡಿಯೋ ಈಗ ವೈರಲ್ ಆಗುತ್ತಿದೆ. ಜನಸಂದಣಿಯ ರಸ್ತೆಯ ಮೇಲೆ ಐದಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಬಿದ್ದಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರ ಪಾಲಿಗೆ ಯಮಸ್ವರೂಪಿಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂದರ್ ವಿಹಾರ್‌ನ ಬೀದಿಯಲ್ಲಿ ಜನ ಎಂದಿನಂತೆ ನಡೆದು ಹೋಗುತ್ತಿದ್ದಾಗ ಕಟ್ಟಡದ ಒಂದು ಭಾಗವು ಮೇಲಿನಿಂದ ಕುಸಿದು ಬಿದ್ದಿದೆ. 

ದೆಹಲಿ ವಿಮಾನ ಸಂಚಾರದಲ್ಲಿ ಅಲ್ಲೊಲ್ಲ ಕಲ್ಲೋಲ!

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ವೈರಲ್ ಆಗಿದ್ದು, ಅಚಾನಕ್ ಆಗಿ ನಡೆದ ಘಟನೆಯನ್ನು ಸೆರೆ ಹಿಡಿದಿದೆ. ಕೆಂಪು ಸೀರೆ ಧರಿಸಿದ್ದ ಮಹಿಳೆ ಹಾಗೂ ಆಕೆಯ ಜೊತೆ ಇದ್ದ ಇನ್ನಿಬ್ಬರು ಮಹಿಳೆಯು ಹಾಗೂ ಓರ್ವ ಪುರುಷ ಸಮೀಪದ ನ್ಯೂ ಶಿವ ಜ್ಯುವೆಲ್ಲರ್ಸ್‌ನತ್ತ ಬರುತ್ತಿದ್ದಂತೆ ದುರಾದೃಷ್ಟವಶಾತ್ ಘಟನೆ ಸಂಭವಿಸಿದೆ. ಇದೆ ಸಮಯಕ್ಕೆ ಇವರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಿಳಿ ಬಣ್ಣದ ಬಟ್ಟೆ ಧರಿಸಿದನ ಮೇಲೆಯೇ ಸರಿಯಾಗಿ ಗೋಡೆಯ ಅವಶೇಷಗಳು ಬಿದ್ದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಅವನ ಬಳಿ ಧಾವಿಸಿ ಬರುವ ವ್ಯಕ್ತಿಯೊಬ್ಬರು ಅವನನ್ನು ಪರೀಕ್ಷಿಸಿದ್ದು, ಅವರು ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಂದ ಹಿಂದೆ ಸರಿಯುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಈ ದುರಂತದಲ್ಲಿ ಮೃತರಾದವರನ್ನು 67 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಾನವ್ ಎಂಬ ವ್ಯಕ್ತಿ ಆರನೇ ಮಹಡಿಯನ್ನು ನಿರ್ಮಿಸುತ್ತಿದ್ದಾಗ ಐದು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯಿಂದ ನಿರ್ಮಾಣ ಸಾಮಗ್ರಿಗಳು ಪಕ್ಕದ ರಸ್ತೆಗೆ ಬಿದ್ದವು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಹನುಮಾನ್ ಜಯಂತಿ ಮೆರವಣಿಗೆ ಮಸೀದಿ ಮುಂದೆ ಸಾಗುತ್ತಿದ್ದಂತೆ ಕಲ್ಲು ತೂರಾಟ

ಗುಣ: ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ  ಗುಣದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ, 25 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕಿಶೋರ್ ಕನ್ಯಾಳ್ ಹಾಗೂ ಎಸ್‌ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದು, ಸ್ಥಳದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಎರಡು ಸಮುದಾಯಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಕೌನ್ಸಿಲರ್ ಗಬ್ಬರ್ ಎಂದೂ ಕರೆಯಲ್ಪಡುವ ಓಂಪ್ರಕಾಶ್ ಕುಶ್ವಾಹ್, ಶನಿವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಸುಮಾರು 25 ಜನರ ಮೇಲೆ ಕೊಲೆ ಯತ್ನ, ಹಲ್ಲೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊರಿಸಲಾಗಿದೆ. ಹನುಮಾನ್ ಜಯಂತಿಯ ಧಾರ್ಮಿಕ ಮೆರವಣಿಗೆ ಸಾಗುವ ವೇಳೆ ಕೆಲವರು ಗುಂಡನ್ನು ಕೂಡ ಹಾರಿಸಿದ್ದಾರೆ ಎಂದು ಅವರು ದೂರಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 12 ರಂದು ಅಂದರೆ ನಿನ್ನೆ ಸಂಜೆ 4 ಗಂಟೆಗೆ ಶಿವಾಜಿ ನಗರದ ಮಾತಾ ಮಂದಿರದಿಂದ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯನ್ನು ಡಿಜೆ ಮುನ್ನಡೆಸಿದರೆ, ಯುವಕರ ಗುಂಪು ಅದರ ಹಿಂದೆ ನೃತ್ಯ ಮಾಡುತ್ತಾ ಸಾಗುತ್ತಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?