
ಲೋಡೆಡ್ ಗನ್ ಜೊತೆ ಆಟವಾಡುತ್ತಿದ್ದ ಬಾಲಕ ಸಾವು
ಪೋಷಕರ ಅಜಾಗರೂಕತೆಯಿಂದ 5 ವರ್ಷದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಾಮಾನ್ಯವಾಗಿ ಚಾಕು ಚೂರಿಗಳನ್ನೇ ಮಕ್ಕಳ ಕೈಗೆ ಸಿಗದಂತೆ ಪೋಷಕರು ಮೇಲೆತ್ತಿಡುತ್ತಾರೆ. ಆದರೆ ಇಲ್ಲಿ 5 ವರ್ಷದ ಪುಟ್ಟ ಬಾಲಕನ ಕೈಗೆ ಲೋಡೆಡ್ ಗನ್ ಸಿಕ್ಕಿದ್ದು, ಇದರಲ್ಲಿ ಆಟವಾಡುತ್ತಿದ್ದ ಬಾಲಕ ಅಚಾನಕ್ ಆಗಿ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ರಾಜಸ್ಥಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಯಲ್ಲಿ ಗುಂಡು ತುಂಬಿದ್ದ ಪಿಸ್ತೂಲ್‌ನಲ್ಲಿ ಈ ಪುಟ್ಟ ಬಾಲಕ ಆಟವಾಡುತ್ತಿದ್ದಾಗ ದುರಂತ ನಡೆದಿದೆ. ಈ ಬಾಲಕ ಆಕಸ್ಮಿಕವಾಗಿ ಪಿಸ್ತೂಲ್‌ನ ಟ್ರಿಗರ್ ಒತ್ತಿದ್ದು, ಗುಂಡು ಬಂದು ಬಾಲಕನ ತಲೆಗೆ ಬಡಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಕಸ್ಮಿಕವಾಗಿ ಟ್ರಿಗರ್ ಎಳೆದ ಬಾಲಕ: ಮನೆಯಲ್ಲಿ ಪೋಷಕರು ಇಲ್ಲದ ವೇಳೆ ದುರಂತ
ಪ್ರಾಥಮಿಕ ವರದಿಗಳ ಪ್ರಕಾರ 5 ವರ್ಷದ ದೇವಾಂಶು ಮೃತ ಬಾಲಕ. ಈತ ತನ್ನ ಪೋಷಕರ ಜೊತೆ ವಿರಾಟ್‌ನಗರ ಪ್ರದೇಶದ ಚಿತೌಲಿ ಕಾ ಬರ್ದಾ ಎಂಬ ಗ್ರಾಮದಲ್ಲಿ ವಾಸ ಮಾಡ್ತಿದ್ದ. ಘಟನೆ ನಡೆದ ವೇಳೆ ಬಾಲಕ ಒಬ್ಬನೇ ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ. ಆಟವಾಡುತ್ತಿದ್ದ ಈತನ ಕೈಗೆ ಅಲ್ಲಿ ಬಾಕ್ಸ್‌ನಲ್ಲಿ ಇರಿಸಿದ್ದ ಕಂಟ್ರಿ ಪಿಸ್ತೂಲ್ ಸಿಕ್ಕಿದೆ. ಈತ ತಿಳಿಯದೇ ಪಿಸ್ತೂಲ್‌ನ ಟ್ರಿಗರ್ ಎಳೆದಿದ್ದು, ಗುಂಡು ಸೀದಾ ಬಂದು ಈತನ ತಲೆಗೆ ಬಡಿದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ದುರಂತ ಸಂಭವಿಸಿದಾಗ ಈತನ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಮನೆಯಲ್ಲಿ ಪಿಸ್ತೂಲ್ ಸಿಕ್ಕಿದ್ದು ಹೇಗೆ?
ಇತ್ತ ನೆರೆಮನೆಯವರಿಗೆ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿ ಬಂದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರು ಬಾಲಕನ ಪೋಷಕರು ಹಾಗೂ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಕರೆತರುತ್ತಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಮೃತ ಬಾಲಕ ದೇವಾಂಶುವಿನ ತಂದೆ ಮುಕೇಶ್ ಡಿಫೆನ್ಸ್ ಅಕಾಡೆಮಿಯನ್ನು ನಡೆಸುತ್ತಿದ್ದರು. ಆದರೆ ವರ್ಷದ ಹಿಂದೆ ಅವರು ಈ ಅಕಾಡೆಮಿಯನ್ನು ಮುಚ್ಚಿದ್ದು, ತಮ್ಮ ಪತ್ನಿಯ ಜೊತೆ ಸೇರಿ ಹಾಡುಗಾರಿಕೆ ನಡೆಸುತ್ತಿದ್ದರು. ಅವರೊಬ್ಬ ಜಾನಪದ ಕಲಾವಿದರಾಗಿದ್ದು, ದೇವಾಂಶು ಅವರ ಏಕೈಕ ಮಗನಾಗಿದ್ದ. ಆದರೆ ಈಗ ಇರುವ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ರುಚಿರುಚಿಯಾಗಿ ತಿಂದ್ರು 61ರಲ್ಲೂ ಫಿಟ್ & ಫೈನ್ ಆಗಿರುವುದು ಹೇಗೆ? : ಸೀಕ್ರೆಟ್ ಬಿಟ್ಟುಕೊಟ್ಟ ಖ್ಯಾತ ಬಾಣಸಿಗ
ಇದನ್ನೂ ಓದಿ: ಬಿದಿರಿನ ಟ್ರೈಪಾಡ್ ಬಳಸಿ ಗ್ರಾಮೀಣ ಕ್ರೀಡೆಗಳ ಟೆಲಿಕಾಸ್ಟ್ ಮಾಡ್ತಿದ್ದವನಿಗೆ ಬಂತು ಅಂತಾರಾಷ್ಟ್ರೀಯ ಆಹ್ವಾನ
ಇದನ್ನೂ ಓದಿ:: ಬೀಚ್ ಸ್ವಚ್ಛತೆ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವೀಸ್ ಧರಿಸಿದ ಬಟ್ಟೆಗೆ ತೀವ್ರ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ