ಮಹಾರಾಷ್ಟ್ರ(ನ.25): ಮೋಟಾರು ನಿಯಮ(motor vehicle) ಉಲ್ಲಂಘಿಸಿದ AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ(Asaduddin Owaisi) ಮಹಾರಾಷ್ಟ್ರ ಪೊಲೀಸರು ದಂಡ ಹಾಕಿದ್ದಾರೆ. ಕಾರ್ಯಕ್ರಮ ನಿಮಿತ್ತ ಸೋಲಾಪುರ ನಗರದಲ್ಲಿ ತೆರಳುತ್ತಿದ್ದ ಓವೈಸಿ ಕಾರಿನ ಮುಂಭಾಗದಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಇದನ್ನು ಗಮನಿಸಿದ ಪೋಲೀಸ್(Police) ಇನ್ಸ್‌ಪೆಕ್ಟರ್ ರಮೇಶ್ ಚಿಂತನ್‌ಕಿಡಿ , ಮೋಟಾರ್ ನಿಯಮ ಉಲ್ಲಂಘನೆ ಕಾರಣಕ್ಕೆ 2,00 ರೂಪಾಯಿ ದಂಡ ಹಾಕಿದ್ದಾರೆ. ದಂಡ ಹಾಕಿದ ಪೊಲೀಸ್ ರಮೇಶ್‌ಗೆ 5,000 ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಹೈದರಾಬಾದ್(Hyderabad) ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ಕಾರ್ಯಕ್ರಮ ನಿಮಿತ್ತ ಮಹಾರಾಷ್ಟ್ರದ ಸೋಲಾಪುರ ನಗರಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಅಲ್ಲಿಂದ ಸಾದರ್ ಬಜಾರ್‌ನಲ್ಲಿರುವ ಸರ್ಕಾರಿ ವಿಶ್ರಾಂತಿ ಗೃಹಕ್ಕೆ ಓವೈಸಿ ತೆರಳಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ರಮೇಶ್ ಚಿಂತನ್‌ಕಿಡಿ, ನಂಬರ್ ಪ್ಲೇಟ್ ಇಲ್ಲದ(Can Number plate) ಕಾರೊಂದು ಬರುತ್ತಿರುವುದನ್ನು ಗಮನಿಸಿದ್ದಾರೆ. ಕಾರು ತಡೆದ ಅಧಿಕಾರಿ, ನಿಯಮ ಉಲ್ಲಂಘಿಸಿದ ಕಾರಣ 2,00 ರೂಪಾಯಿ ದಂಡ ಕಟ್ಟಲು ಸೂಚಿಸಿದ್ದಾರೆ.
undefined
ಸಂಸದ ಕಾರಿನ ಸ್ಟಿಕ್ಕರ್ ಹಾಗೂ ಕಾರಿನೊಳಗೆ ಸಂಸದ(member of parliament) ಓವೈಸಿ ಇರುವುದನ್ನು ಗಮನಿಸಿದ ಪೊಲೀಸ್ ರಮೇಶ್ ಚಿಂತನ್‌ಕಿಡಿ, ನಿಯಮದ ಪ್ರಕಾರ ದಂಡ ಕಟ್ಟಲು ಸೂಚಿಸಿದ್ದಾರೆ. ಓವೈಸಿ ಕಾರು ಚಾಲಕ 2,00 ರೂಪಾಯಿ ದಂಡ ಕಟ್ಟಿದ ಬಳಿಕ ಕಾರನ್ನು ಪೊಲೀಸರು ಬಿಟ್ಟಿದ್ದಾರೆ.
ಸಾದರ್ ಬಜಾರ್ ವಿಶ್ರಾಂತಿ ಗೃಹ ತಲುಪಿದ ಅಸಾದುದ್ದೀನ್ ಓವೈಸಿಯನ್ನು ಪಕ್ಷದ ಕೆಲ ಕಾರ್ಯಕರ್ತರು, ಹಿಂಬಾಲಕರು ಸ್ವಾಗತಿಸಿದ್ದಾರೆ. ಇದೇ ವೇಳೆ ಓವೈಸಿಗೆ ದಂಡ ಹಾಕಿರುವ ತಿಳಿದ ಕೆಲ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ನಿಯಮದಲ್ಲಿ ರಾಜಿಯಾಗದೆ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಇನ್ಸ್‌ಪೆಕ್ಟರ್ ರಮೇಶ್ ಚಿಂತನ್‌ಕಿಡಿಗೆ ಸೋಲಾಪುರ ಪೊಲೀಸ್ ಕಮಿಷನರ್ ಹರೀಶ್ ಬೈಜಲ್ 5,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ರಮೇಶ್ ಮಾದರಿ ನಡೆ ಎಲ್ಲಾ ಪೊಲೀಸ್‌ಗೆ ಸ್ಪೂರ್ತಿಯಾಗಿದೆ ಎಂದರು.
ಅಸಾದುದ್ದೀನ್ ಓವೈಸಿ:
ಓವೈಸಿ ಭಾರತದಲ್ಲಿ ಚಿರಪರಿಚಿತ ಹೆಸರು. ತಮ್ಮ ಪ್ರಖರ ಭಾಷಣ ಮೂಲಕ ಇಸ್ಲಾಂವಾದಿಯಾಗಿ ಗುರುತಿಸಿಕೊಂಡಿರುವ ಓವೈಸಿ, ಬಿಜೆಪಿ, ಪ್ರಧಾನಿ, ಆರ್‌ಎಸ್‌ಎಸ್ ಸೇರಿದಂತ ಹಿಂದುತ್ವ ವಿರುದ್ಧ ಸದಾ ತಮ್ಮ ಭಾಷಣ ಹಾಗೂ ಹೇಳಿಕೆ ಮೂಲಕ ಸದ್ದು ಮಾಡುತ್ತಿದೆ. ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಟೀಕಾಕಾರು ಅಸಾದುದ್ದೀನ್ ಓವೈಸಿಯನ್ನು ಭಾರತ ಇಬ್ಬಾಗ ಮಾಡಿದ ಪೈಕಿ ಪ್ರಮುಖ ಪಾಲು ಹೊಂದಿದ ಹಾಗೂ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾಗೆ ಹೋಲಿಸುತ್ತಾರೆ.
ಅಸಾಸುದ್ದೀನ್ ಓವೈಸಿ AIMIM ಪಕ್ಷ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾತ್ರವಲ್ಲ, ಮುಂದಿನ ಉತ್ತರ ಪ್ರದೇಶ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದೆ. 1994ರಲ್ಲಿ ರಾಜಕೀಯ ಅಖಾಡಕ್ಕೆ ಧುಮಿಕಿದ ಓವೈಸಿ ಭಾರತದಲ್ಲಿ AIMIM ಪಕ್ಷವನ್ನು ವಿಸ್ತರಿಸುತ್ತಲೇ ಬಂದಿದ್ದಾರೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಾರ್‌ಮಿನಾರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಓವೈಸಿ, 1999ರಲ್ಲಿ ತೆಲುಗುದೇಶ ಪಕ್ಷದ ಅಭ್ಯರ್ಥಿ ಸೈಯದ್ ಶಾ ನೂರುಲ್ ಹಕ್ ವಿರುದ್ಧ 93,000 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಓವೈಸಿ, ವಿಶ್ವದ 500 ಪ್ರಭಾವಿ ಮುಸ್ಲಿಂ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಮುಸ್ಲಿಂ ಹಾಗೂ ದಲಿತರು ಸೇರಿದಂತೆ ಅಲ್ಪ ಸಂಖ್ಯಾರನ್ನು ಕೇಂದ್ರಿಕರಿಸಿದ ಓವೈಸಿ ರಾಜಕೀಯಕ್ಕೆ ತೀವ್ರ ಟೀಕೆಗಳು, ವಿರೋಧಗಳಿವೆ.