
41 ವರ್ಷದ ಸತ್ಯಂ ಉಪಾಧ್ಯಾಯ(Satyam Upadhyay) ಇವರ ಪತ್ನಿ 38 ವರ್ಷದ ಮನಿಕಾ(Manika) ಹಾಗೂ ಈ ದಂಪತಿಯ ಇಬ್ಬರು ಮಕ್ಕಳಾದ 10 ವರ್ಷದ ಇಶಾನಿ( Ishani) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈ ದಂಪತಿಯ 8 ವರ್ಷದ ಪುತ್ರ ಸ್ನೇಹ್(Sneh) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಬುಧವಾರ ಮಧ್ಯರಾತ್ರಿ ಸತ್ನಾ ಜಿಲ್ಲೆಯ ಜೀತ್ ನಗರ(Jeet Nagar)ದಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರಗಾಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೈಹಾರ್(Maihar) ಉಪ ವಿಭಾಗೀಯ ಪೊಲೀಸ್ ಅಧಿಕಾರಿ(SDOP) ಹಿಮಾಲಿ ಸೋನಿ( Himali Soni) ಹೇಳಿದ್ದಾರೆ.
Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್ ಡಿಕ್ಕಿ: ಇಬ್ಬರ ಸಾವು
ಅಪಘಾತದ ಬಳಿಕ ಕಾರು ಟ್ರಕ್‌ನಡಿ ಸಿಲುಕಿಕೊಂಡಿದ್ದು, ಕಾರನ್ನು ಕೆಲ ದೂರದವರೆಗೆ ಟ್ರಕ್ ಎಳೆದೊಯ್ದಿದೆ ಎಂದು ಹಿಮಾಲಿ ಸೋನಿ ಹೇಳಿದರು. ಅಪಘಾತದಲ್ಲಿ ಸಾವಿಗೀಡಾದವರು ಮೈಹಾರ್‌ನಲ್ಲಿರುವ ತಮ್ಮ ನಿವಾಸಕ್ಕೆ ವಾಪಾಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತ ಸತ್ಯಂ ಉಪಾಧ್ಯಾಯ ಮೊಬೈಲ್ ಶಾಪೊಂದನ್ನು ನಡೆಸುತ್ತಿದ್ದರು. ಅಲ್ಲಿಂದ ಸತ್ನಾ ನಗರ(Satna city)ಕ್ಕೆ ಹೋಗಿ ಶಾಪಿಂಗ್ ಮುಗಿಸಿ ವಾಪಾಸಾಗುತ್ತಿದ್ದಾಗ ಜಿಲ್ಲಾ ಕೇಂದ್ರದಿಂದ ೪೦ ಕಿ.ಲೋ ಮೀಟರ್ ದೂರದಲ್ಲಿ ಈ ಅನಾಹುತ ನಡೆದಿದೆ. ಘಟನೆಯ ಬಳಿಕ ಟ್ರಕ್ ಚಾಲಕ( truck driver)ಸ್ಥಳದಿಂದ ಪರಾರಿಯಾಗಿದ್ದ. ಆದರೆ ನಂತರದಲ್ಲಿ ಘಟನೆ ನಡೆದ ಸ್ಥಳದ ಸಮೀಪದ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ