ಪ್ರವಾಸಿಗರ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ!

Published : Apr 18, 2025, 08:00 PM ISTUpdated : Apr 18, 2025, 08:09 PM IST
ಪ್ರವಾಸಿಗರ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ; ಐವರು ಯುವತಿಯರ ರಕ್ಷಣೆ!

ಸಾರಾಂಶ

ಉದಯಪುರದ ಆಕ್ಸೊ ಇನ್ ಹೋಟೆಲ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನೇಪಾಳ ಮತ್ತು ಜಾರ್ಖಂಡ್ ಮೂಲದ ಐದು ಯುವತಿಯರನ್ನು ರಕ್ಷಿಸಲಾಗಿದೆ. ಯುವತಿಯರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಇದೇ ರೀತಿಯ ಪ್ರಕರಣಗಳು ರಾಜಸ್ಥಾನದ ಇತರೆಡೆಗಳಲ್ಲೂ ವರದಿಯಾಗಿವೆ.

ಭಾರತದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ತಂಗಲು ಹಾಗೂ ಅವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಹೋಟೆಲ್ ಹಾಗೂ ವಸತಿ ಗೃಹಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇಂತಹ ಪ್ರವಾಸಿಗರ ವಸತಿಯ ಉದ್ದೇಶಕ್ಕೆಂದು ನಿರ್ಮಿಸಲಾಗಿದ್ದ ಹೋಟೆಲ್‌ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಪೊಲೀಸರು ದಾಳಿ ಮಾಡಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ 5 ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಈ ಘಟನೆ ರಾಜಸ್ಥಾನದ ಪ್ರವಾಸಿ ತಾಣ ಉದಯಪುರದಲ್ಲಿ ನಡೆದಿದೆ. ಉದಯಪುರ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿರುವ ಹೋಟೆಲ್ ಮೇಲೆ ದಾಳಿ ಮಾಡಿ ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಸವೀನಾ ಪೊಲೀಸರು ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ, ವೇಶ್ಯಾವಾಟಿಕೆ ನಡೆಸುತ್ತಿದ್ದ 7 ಯುವಕರನ್ನು ಬಂಧಿಸಿದ್ದು, 5 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಲ್ಪಟ್ಟ ಎಲ್ಲ ಯುವತಿಯರು ನೇಪಾಳ ದೇಶ ಹಾಗೂ ಜಾರ್ಖಂಡ್‌ ರಾಜ್ಯದವರು ಎಂದು ಗುರುತಿಸಲಾಗಿದೆ.

ಆಕ್ಸೊ ಇನ್ ಹೋಟೆಲ್‌ನಲ್ಲಿ ನಡೆಯುತ್ತಿತ್ತು ಗೋಲ್ಮಾಲ್: 

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಸೆಕ್ಟರ್ 13ರ ಆಕ್ಸೊ ಇನ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ 7 ಯುವಕರು ಮತ್ತು ನೇಪಾಳ, ದೆಹಲಿ, ರಾಯ್ಪುರ ಮತ್ತು ಜಾರ್ಖಂಡ್ ಮೂಲದ 5 ಯುವತಿಯರನ್ನು ಬಂಧಿಸಲಾಗಿದೆ. ಉನ್ನು ರಕ್ಷಣೆ ಮಾಡಲಾದ ಯುವತಿಯನ್ನು ಸದ್ಯಕ್ಕೆ ಮಹಿಳಾ ಸಾಂತ್ವನ ಕೇಂದ್ರಗಳಿಗೆ ರವಾನಿಸಲಾಗುತ್ತಿದ್ದು, ನಂತರ ಅವರನ್ನು ತವರಿಗೆ ಸೇರಿಸುವುದಾಗಿ ಅಥವಾ ಸರ್ಕಾರ ನಿಯಮಾವಳಿ ಅನ್ವಯ ಪರಿಹಾರ ಉಪಕ್ರಮಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಕೆಗೆ 13 ವರ್ಷ, ಆತ ಡ್ರೈವರ್; ಇಬ್ಬರ ಪ್ರೀತಿಗೆ ಕೊಳ್ಳಿ ಇಟ್ಟವರಾರು?

ಉದಯಪುರ ಪೊಲೀಸರಿಂದ ಕಾರ್ಯಾಚರಣೆ:

ಉದಯಪುರ ನಗರದ ಸವೀನಾ ಠಾಣೆಯ ಪೊಲೀಸ್ ಅಧಿಕಾರಿಗಳು, ವೇಶ್ಯಾವಾಟಿಕೆ ನಡೆಸುತ್ತಿದ್ದ ಯುವಕರಾದ ಮುಖೇಶ್ ಮೀಣಾ, ಭಾವೇಶ್ ಜೋಶಿ, ರಾಜೇಶ್ ಕುಮಾರ್, ನಾಥೂರಾಮ್ ಪಟೇಲ್, ಯಶಪಾಲ್ ವೈಷ್ಣವ್, ಬಾಪೂಲಾಲ್ ಪಟೇಲ್, ಜಯೇಶ್ ಭಾಟಿಯಾ ಎಂಬ ಯುವಕರನ್ನು ಬಂಧಿಸಿದ್ದಾರೆ. ಆದರೆ, ಯುವತಿಯರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಈ ಹಿಂದೆಯೂ ಇದೇ ರೀತಿಯ ವೇಶ್ಯಾವಾಟಿಕೆ ಜಾಲಗಳನ್ನು ಪತ್ತೆ ಹಚ್ಚಲಾಗಿತ್ತು. ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರನ್ನು ವೇಶ್ಯಾವಾಟಿಕೆಗೆ ಆಕರ್ಷಣೆ ಮಾಡಲಾಗುತ್ತಿತ್ತು. ಈ ಮೂಲಕ ಪ್ರವಾಸಿ ತಾಣದ ಹೆಸರನ್ನು ಕೆಡಿಸಲಾಗುತ್ತಿದ್ದು, ಪೊಲೀಸರು ಈ ಅಡ್ಡಯನ್ನು ನಾಶ ಮಾಡಿದ್ದಾರೆ.

ಜೈಪುರದಲ್ಲೂ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ: ಇನ್ನು ರಾಜಸ್ಥಾನದ ರಾಜಧಾನಿ ಜೈಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ವೇಶ್ಯಾವಾಟಿಕೆ ಜಾಲಗಳನ್ನು ಪತ್ತೆ ಹಚ್ಚಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ, ಆರೋಪಿಗಳನ್ನು ಶಾಂತಿಭಂಗದ ಆರೋಪದಲ್ಲಿ ಬಂಧಿಸಿ ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಅವರು ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ನಿಯಮಗಳ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಪಿಟಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಆದರೆ, ಪೊಲೀಸರು ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳದಿರುವುದೇ ಅಕ್ರಮ ವೇಶ್ಯಾವಾಟಿಕೆ ಅಡ್ಡೆಗಳು ಪುನಃ ರಚನೆಗೊಳ್ಳಲು ಕಾರಣವಾಗುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: ಸ್ವೀಟ್ 60ಯಲ್ಲಿ ಘೋಷ್‌‌ಗೆ ಜೋಶ್, ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಬಿಜಿಪಿ ಹಿರಿಯ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್