ಕೇಜ್ರಿ ವಿರುದ್ಧ ‘ಚಕ್ ದೇ ಇಂಡಿಯಾ’ ಖ್ಯಾತಿಯ ನಟ ಕಣಕ್ಕೆ: ಒಟ್ಟು 92 ಅಭ್ಯರ್ಥಿಗಳು!

By Suvarna News  |  First Published Jan 23, 2020, 9:56 PM IST

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ 92 ಅಭ್ಯರ್ಥಿಗಳು ಕಣಕ್ಕೆ| ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ  ದೆಹಲಿ ವಿಧಾನಸಭೆ ಚುನಾವಣೆಯ ಕಾವು| ಕೇಜ್ರಿ ವಿರುದ್ಧ ಚಕ್ ದೇ ಇಂಡಿಯಾ ಖ್ಯಾತಿಯ ನಟ ಕಣದಲ್ಲಿ| ‘ಅಂಜಾನ್ ಆದ್ಮಿ ಪಾರ್ಟಿ’ ಯ ಸದಸ್ಯ ಶೈಲೇಂದ್ರ ಸಿಂಗ್ ಶಲ್ಲಿ| ನಾಳೆ(ಜ.24) ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ| 


ನವದೆಹಲಿ(ಜ.23): ಇದೇ ಫೆ.8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಒಟ್ಟು 92 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

Tap to resize

Latest Videos

ದೆಹಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್: ಒಂದೇ ಹಂತದಲ್ಲಿ ಎಲೆಕ್ಷನ್

ಕೇಜ್ರಿವಾಲ್ ವಿರುದ್ಧ ಚಕ್ ದೇ ಇಂಡಿಯಾ ಖ್ಯಾತಿಯ ನಟ  ಶೈಲೇಂದ್ರ ಸಿಂಗ್ ಶಲ್ಲಿ ಕೂಡ ಕಣಕ್ಕೆ ಇಳಿದಿದ್ದು, ಕೇಜ್ರಿವಾಲ್ ಸೇರಿದಂತೆ ನವದೆಹಲಿ ಕ್ಷೇತ್ರದಿಂದ ಒಟ್ಟು 93 ನಾಮಪತ್ರಗಳು ಸಲ್ಲಿಕೆಯಾಗುವೆ.

‘ಅಂಜಾನ್ ಆದ್ಮಿ ಪಾರ್ಟಿ’ ಯ ಸದಸ್ಯ ಎಂದು ಹೇಳಿಕೊಂಡಿರುವ ಶೈಲೇಂದ್ರ ಸಿಂಗ್, ಶಾರೂಖ್ ಖಾನ್ ಮುಖ್ಯ ಪಾತ್ರದಲ್ಲಿದ್ದ ಚಕ್ ದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಟೋಕನ್‌ ಹಿಡಿದು 6 ತಾಸು ಕಾದು ಕೇಜ್ರಿ ನಾಮಪತ್ರ

ಅಲ್ಲದೇ 2009 ರಲ್ಲಿ ಬಸ್’ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಮೂಲಕ  ಶೈಲೇಂದ್ರ ಸಿಂಗ್ ಶಲ್ಲಿ ಸುದ್ದಿಯಾಗಿದ್ದರು.

ಇನ್ನು ನಾಮಪತ್ರ ಹಿಂಪಡೆಯಲು ನಾಳೆ(ಜ.24) ಕೊನೆಯ ದಿನವಾಗಿದ್ದು, ನಾಳೆ ಸಂಜೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ತಿಳಿಯಲಿದೆ.

ದಿಲ್ಲಿ ಎಲೆಕ್ಷನ್‌ನ ನಿರ್ಣಾಯಕ ಅಂಶಗಳೇನು?

ಈವರೆಗೆ ದೆಹಲಿ ಚುನಾವಣೆಯಲ್ಲಿ ಒಟ್ಟು 1,029 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 1,528 ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

click me!