ಮಗುವಿಗೆ ಕಾಂಗ್ರೆಸ್‌ ಎಂದು ನಾಮಕರಣ!

Published : Jan 23, 2020, 04:03 PM IST
ಮಗುವಿಗೆ ಕಾಂಗ್ರೆಸ್‌  ಎಂದು ನಾಮಕರಣ!

ಸಾರಾಂಶ

ತಂದೆಯೊಬ್ಬ ತನ್ನ ಮಗುವಿಗೆ ಕಾಂಗ್ರೆಸ್‌  ಎಂದು ನಾಮಕರಣ ಮಾಡಿದ್ದಾರೆ. ತಮಾಷೆಯಲ್ಲ... ಇಲ್ಲಿದೆ ವಿವರ

ಉದಯ್‌ಪುರ[ಜ.23]: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ನೌಕರರೊಬ್ಬರು ತಮ್ಮ ಮಗುವಿಗೆ ‘ಕಾಂಗ್ರೆಸ್‌ ಜೈನ್‌’ ಎಂದು ಹೆಸರಿಡುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ.

ವಿನೋದ್‌ ಜೈನ್‌ ಎಂಬವರು 2019ರ ಜುಲೈನಲ್ಲಿ ಹುಟ್ಟಿದ್ದ ತನ್ನ ಮಗುವಿಗೆ ಈ ಹೆಸರು ಇಟ್ಟಿದ್ದು, ಅದೇ ಹೆಸರಿನಲ್ಲಿ ಜನ್ಮ ಪ್ರಮಾಣ ಪತ್ರ ಕೂಡ ಮಾಡಿಸಿಕೊಂಡಿದ್ದಾರೆ.

ನನ್ನ ಕುಟುಂಬ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠವಾಗಿದ್ದು ಹಾಗಾಗಿ ಮಗನಿಗೆ ಕಾಂಗ್ರೆಸ್‌ ಎಂದು ಹೆಸರಿಟ್ಟಿದ್ದೇನೆ. ಭವಿಷ್ಯದಲ್ಲಿ ಆತ ಕಾಂಗ್ರೆಸ್‌ ಸೇರಿ ದೊಡ್ಡ ರಾಜಕಾರಣಿಯಾಗುತ್ತಾನೆ ಎಂದು ವಿನೋದ್‌ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?
ಅತಿಹೆಚ್ಚು ಮದ್ಯಪಾನ ಮಾಡುವ ಜಗತ್ತಿನ ಸೈನ್ಯ ಯಾವುದು? ಭಾರತದ ಸೇನೆಗೆ ಎಷ್ಟನೇ ಸ್ಥಾನ?