
ಚೆನ್ನೈ(ಜ.23): ಆನೆಗಳು ತುಂಬ ಜಾಣ ಪ್ರಾಣಿಗಳಾಗಿದ್ದು, ಅವುಗಳಿಗೆ ದಾರಿ ಮಾಡಿಕೊಡುವುದು ಮನುಷ್ಯರ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ತಮಿಳುನಾಡು ಸರ್ಕಾರದ ‘ನೀಲಗಿರಿ ಎಲಿಫಂಡ್ ಕಾರಿಡಾರ್’ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಆನೆಗಳಿಗೆ ದಾರಿ ಮಾಡಿಕೊಡುವುದು ಕಡ್ಡಾಯ ಎಂದು ನೀಲಗಿರಿ ಅಭಯಾರಣ್ಯದ ರೆಸಾರ್ಟ್’ಗಳಿಗೆ ಸೂಚನೆ ನೀಡಿದೆ.
ನಾಡಿಗೆ ಬಂದ ಪುಟ್ಟ ಆನೆ ಮರಿಯನ್ನು ಉಪಚರಿಸಿ ಕಾಡಿಗೆ ಬಿಟ್ಟರು!
ಅಭಯಾರಣ್ಯದಲ್ಲಿ ರೆಸಾರ್ಟ್ ಪ್ರಾರಂಭಿಸುವುದು ಕಾನೂನುಬಾಹಿರ ಎಂದಿರುವ ಸುಪ್ರೀಂಕೋರ್ಟ್, ಆನೆಗಳ ಕಾರಿಡಾರ್ ನೀತಿಗೆ ಭಂಗ ತರವುದು ಸಲ್ಲ ಎಂದು ಸ್ಪಷ್ಟಪಡಿಸಿದೆ.
ನೀಲಗಿರಿ ಅಭಯಾರಣ್ಯದ ಎಲಿಫಂಟ್ ಕಾರಿಡಾರ್ ಸಮೀಪವಿರುವ ರೆಸಾರ್ಟ್’ಗಳನ್ನು ಮುಚ್ಚಬೇಕು ಎಂದು ತಮಿಳುನಾಡು ಸರ್ಕಾರ ಆದೇಶ ಹೊರಡಸಿತ್ತು. ಈ ಆದೇಶದ ವಿರುದ್ಧ ರೆಸಾರ್ಟ್ ಮಾಲೀಕರು ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.
ಗ್ರಾಮದೊಳಗೆ ಕಾಡಾನೆಯ ಗಂಭೀರ ನಡಿಗೆ..! ಹೋಗಪ್ಪಾ ಹೋಗು ಎಂದ್ರು ಜನ
ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಸರ್ಕಾರದ ಆದೇಶದ ಪರ ಆದೇಶ ಹೊರಡಿಸಿದೆ.
ಆದರೆ ರೆಸಾರ್ಟ್ ಮಾಲೀಕರ ತೊಂದರೆಗಳನ್ನು ಆಲಿಸಲು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನೂ ರಚಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ