
ಬಿಗಿ ಭದ್ರತೆಯಲ್ಲಿಂದು ಮೈಸೂರು ದಸರಾಕ್ಕೆ ಬಾನು ಮುಷ್ತಾಕ್ ಚಾಲನೆ
ಮೈಸೂರು : ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ‘ನಾಡಹಬ್ಬ’ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಸೋಮವಾರದಿಂದ ಆರಂಭವಾಗಲಿದೆ. ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಇಡೀ ‘ಸಾಂಸ್ಕೃತಿಕ ನಗರಿ’ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ. ಸಾಮಾನ್ಯವಾಗಿ ಹತ್ತು ದಿನ ನಡೆಯುವ ದಸರಾ, ಈ ಬಾರಿ ಹನ್ನೊಂದು ದಿನಗಳು ನಡೆಯುತ್ತಿರುವುದು ವಿಶೇಷ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ಬಿಗಿ ಭದ್ರತೆಯಲ್ಲಿಂದು ಮೈಸೂರು ದಸರಾಕ್ಕೆ ಬಾನು ಮುಷ್ತಾಕ್ ಚಾಲನೆ
ಪಾಕ್ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಅಭಿಷೇಕ್ ಶರ್ಮಾ! ಬದ್ದ ಎದುರಾಳಿ ಮೇಲೆ ಭಾರತ ಮತ್ತೊಮ್ಮೆ ದಿಗ್ವಿಜಯ
ದುಬೈ: ಪಾಕ್ ಬೌಲರ್‌ಗಳಿಗೆ ಎಡಗೈ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅಕ್ಷರಶಃ ಸಿಂಹಸ್ವಪ್ನರಾಗಿ ಕಾಡಿದರು. ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಕಳೆದ ಬಾರಿ 7 ವಿಕೆಟ್‌ನಿಂದ ಬದ್ದ ಎದುರಾಳಿ ಪಾಕ್ ಮಣಿಸಿದ್ದ ಭಾರತ, ಈ ಬಾರಿ ಇನ್ನೂ 7 ಎಸೆತ ಬಾರಿ ಇರುವಂತೆ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವ ಸಂಭ್ರಮಾಚರಣೆ ಮಾಡಿದೆ. ಭಾರತ ಎದುರು ಪಾಕ್ ಮತ್ತೊಮ್ಮೆ ಮಂಡಿಯೂರಿದೆ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ಪಾಕ್ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಅಭಿಷೇಕ್ ಶರ್ಮಾ! ಬದ್ದ ಎದುರಾಳಿ ಮೇಲೆ ಭಾರತ ಮತ್ತೊಮ್ಮೆ ದಿಗ್ವಿಜಯ
ಸುಳ್ಳು ಕೇಸಲ್ಲಿ 8 ವರ್ಷ ಜೈಲಲ್ಲಿದ್ದವಗೆ ಹೈಕೋರ್ಟ್ ರಿಲೀಫ್!
ಸ್ವಇಚ್ಛೆಯಿಂದ ಯುವಕನೊಂದಿಗೆ ಮನೆಬಿಟ್ಟು ಹೋದ ಯುವತಿ, ಒಂದೂವರೆ ವರ್ಷ ಬಳಿಕ ಪೊಲೀಸರ ಮುಂದೆ ಅ*ಚಾರದ ಆರೋಪ ಮಾಡುತ್ತಾಳೆ. ಇದೇ ಸತ್ಯವೆಂದು ನಂಬಿ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಯುವಕ ಎಂಟು ವರ್ಷದಿಂದ ಜೈಲಿನಲ್ಲಿ ಕೊಳೆಯುತ್ತಿದ್ದ. ಇದೀಗ ಯುವತಿ ಹೇಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ತೀರ್ಮಾನಿಸಿರುವ ಹೈಕೋರ್ಟ್ ಯುವಕನ ಬಿಡುಗಡೆಗೆ ಆದೇಶಿಸಿದೆ. ಆ ಮೂಲಕ ಜೀವಾವಧಿ ಶಿಕ್ಷೆಗೆ ಒಳಗಾಗಿ ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣ ನಿವಾಸಿ ಶಂಕರ್ ನಾಯ್ಕಗೆ ‘ಹೊಸ ಜೀವನ’ ಕರುಣಿಸಿದೆ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ಅಪ್ರಾಪ್ತೆ ಆರೋಪ ಸಾಬೀತಾಗಿಲ್ಲ: ಸುಳ್ಳು ಕೇಸಲ್ಲಿ 8 ವರ್ಷ ಜೈಲಲ್ಲಿದ್ದವಗೆ ಹೈಕೋರ್ಟ್ ರಿಲೀಫ್!
ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಶ್ರೀ ಉಚ್ಛಾಟನೆ
ರಾಜ್ಯದ ಲಿಂಗಾಯತ ಸಮುದಾಯದ ಪ್ರಮುಖ ಮಠಗಳಲ್ಲಿ ಒಂದಾದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಛಾಟನೆ ಮಾಡಲು ಪೀಠದ ಧರ್ಮದರ್ಶಿಗಳ ನೇತೃತ್ವದ ಸಭೆ ನಿರ್ಧಾರ ತೆಗೆದುಕೊಂಡಿದೆ. ಭಾನುವಾರ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಸಭೆ ಸೇರಿದ್ದ ಧರ್ಮದರ್ಶಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಪೀಠದ ಧರ್ಮದರ್ಶಿಗಳಾದ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ನೀಲಕಂಠ ಅಸೂಟಿ ತಿಳಿಸಿದ್ದಾರೆ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಶ್ರೀ ಉಚ್ಛಾಟನೆ
ದಸರಾ ಧಮಾಕಾ- ಜಿಎಸ್ಟಿ ಇಳಿಕೆ ಇಂದಿನಿಂದ ಜಾರಿ : 375 ಉತ್ಪನ್ನಗಳು ಅಗ್ಗ
ನವರಾತ್ರಿ ಆರಂಭದ ಮೊದಲ ದಿನವೇ ದೇಶದ ಜನತೆಗೆ ಡಬಲ್ ಧಮಾಕಾ ಸಿಕ್ಕಿದ್ದು, ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಸೋಮವಾರದಿಂದ ಜಾರಿಗೆ ಬಂದಿದೆ. ಪರಿಣಾಮ ಜನ ಸಾಮಾನ್ಯರಿಗೆ 375 ಉತ್ಪನ್ನಗಳು ಮತ್ತಷ್ಟು ಅಗ್ಗಕ್ಕೆ ದೊರೆಯಲಿವೆ. ಸರ್ಕಾರ ಸೆ.22ರಿಂದ ಜಿಎಸ್ಟಿ ಜಾರಿಗೆ ಬರಲಿದೆ ಎಂದು ಇದೇ ತಿಂಗಳ 3 ರಂದು ಘೋಷಿಸಿತ್ತು. ಇದರ ಅನ್ವಯ ಎರಡು ಸ್ತರದಲ್ಲಿ ಹಿಂದಿದ್ದ ಶೇ.5, ಶೇ.15, ಶೇ.18 ಹಾಗೂ ಶೇ.28ಗಳನ್ನು ಬದಲಿಸಿ ಕೇವಲ ಶೇ. 5 ಹಾಗೂ ಶೇ.18ರ ಸ್ತರಕ್ಕೆ ಇಳಿಸಲಾಗಿದೆ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ದಸರಾ ಧಮಾಕಾ- ಜಿಎಸ್ಟಿ ಇಳಿಕೆ ಇಂದಿನಿಂದ ಜಾರಿ : 375 ಉತ್ಪನ್ನಗಳು ಅಗ್ಗ
ತಿಮ್ಮಪ್ಪನ ಹುಂಡಿಯಿಂದ ವೈಎಸ್ಸಾರ್ ಕಾಂಗ್ರೆಸ್ ₹ 100 ಕೋಟಿ ಕಳವು : ಬಿಜೆಪಿ
ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ 5 ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನ ಕಾಣಿಕೆ ಹುಂಡಿಯಿಂದ 100 ಕೋಟಿ ರು.ಗೂ ಅಧಿಕ ಲೂಟಿ ಮಾಡಿದೆ ಎಂದು ಟಿಟಿಡಿ ಮಂಡಳಿಯ ಸದಸ್ಯರೂ ಆಗಿರುವ ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಿಸಿಟೀವಿ ದೃಶ್ಯಗಳನ್ನೂ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಹಣವನ್ನು ಕದ್ದು ಇರಿಸಿಕೊಳ್ಳುವ ದೃಶ್ಯಗಳಿವೆ. ಪೂರ್ತಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ:ತಿಮ್ಮಪ್ಪನ ಹುಂಡಿಯಿಂದ ವೈಎಸ್ಸಾರ್ ಕಾಂಗ್ರೆಸ್ ₹ 100 ಕೋಟಿ ಕಳವು : ಬಿಜೆಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ