Good News: ಮದ್ಯ ಪ್ರಿಯರೇ ಇಲ್ ಕೇಳಿ, ಸ್ಕಾಚ್ ವಿಸ್ಕಿ ಮೇಲೆ ಶೇ.50 ಸುಂಕ ಕಟ್!

By Suvarna NewsFirst Published Nov 22, 2021, 12:36 PM IST
Highlights

*ಮಹಾರಾಷ್ಟ್ರ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌
* ಸ್ಕಾಚ್ ವಿಸ್ಕಿಯ ಮೇಲೆ  ಶೇ. 50 ಅಬಕಾರಿ ಸುಂಕ ಕಡಿತ!
*ಆದಾಯ ₹ 250 ಕೋಟಿಗೆ ಏರಿಕೆಯಾಗುವ ನಿರೀಕ್ಷೆ!

ಮುಂಬೈ(ನ.22): ಪೆಟ್ರೋಲ್‌ ಡೀಸೆಲ್‌ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ (Maharashtra Government) ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯದಲ್ಲಿ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿಯ (Scotch whiskey) ಬೆಲೆಯನ್ನು ಇತರ ರಾಜ್ಯಗಳಿಗೆ ಸರಿಸಮನಾಗಿ ತರಲು ಮಹಾರಾಷ್ಟ್ರ ಸರ್ಕಾರವು ಅದರ ಮೇಲಿನ ಅಬಕಾರಿ ಸುಂಕವನ್ನು (excise duty) ಶೇಕಡಾ 50 ರಷ್ಟು ಕಡಿತಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ. "ಆಮದು ಮಾಡಿಕೊಂಡ ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚದ 300 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ನವೆಂಬರ್‌ 18 ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. 

ಈ ಬೆನ್ನಲ್ಲೇ ಮಹಾರಷ್ಟ್ರದಲ್ಲಿ ಸ್ಕಾಚ್‌ ವಿಸ್ಕಿಯ ಬೆಲೆ ಕಡಿಮೆಯಾಗಲಿದೆ. 1000 ಮಿಲಿ ಆಮದು ಮಾಡಿದ ಸ್ಕಾಚ್ ವಿಸ್ಕಿ ಬಾಟಲಿಯ ಬೆಲೆ ಕನಿಷ್ಠ ರೂ 5,800 ರಿಂದ ಗರಿಷ್ಠ ರೂ 14,000 ಇರುತ್ತದೆ. ಇದು ಕನಿಷ್ಠ 35 ರಿಂದ 40% ರಷ್ಟು ಕಡಿಮೆಯಾಗಲಿದೆ. ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. ಆಮದು ಮಾಡಿಕೊಳ್ಳುವ ಸ್ಕಾಚ್ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ಷಿಕ ₹ 100 ಕೋಟಿ ಆದಾಯ (Revenue) ಬರುತ್ತದೆ. ಒಂದು ಲಕ್ಷ ಬಾಟಲಿಗಳಿಂದ (Bottles) 2.5 ಲಕ್ಷ ಬಾಟಲಿಗಳಿಗೆ ಮಾರಾಟವಾಗುವ ನಿರೀಕ್ಷೆ ಇರುವುದರಿಂದ ಆದಾಯ ₹ 250 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸುಂಕ ಕಡಿತವು ಇತರ ರಾಜ್ಯಗಳಿಂದ ಸ್ಕಾಚ್ ಕಳ್ಳಸಾಗಣೆ (Smuggling) ಮತ್ತು ನಕಲಿ ಮದ್ಯ ಮಾರಾಟವನ್ನು (spurious liquor) ತಡೆಯುತ್ತದೆ ಎಂದು ಅವರು ಹೇಳಿದ್ದಾರೆ. 

ನಿಜವಾದ ಕಾಂಗ್ರೆಸ್ಸಿಗರು ಮದ್ಯಪಾನ ಮಾಡಲ್ಲ: ಮೊಯ್ಲಿ

ಅಧಿಕಾರಿಗಳ ಪ್ರಕಾರ  2016-17, 2017-18 ಹಾಗೂ 2018-19 ವಾರ್ಷಿಕದಲ್ಲಿ ಸರ್ಕಾರ 200 ಕೋಟಿ ರು. ಅಬಕಾರಿ ಸುಂಕ ಸಂಗ್ರಹಿಸಿದೆ. ಆದರೆ 2019-20 ಹಾಗೂ 2020-21 ವಾರ್ಷಿಕದಲ್ಲಿ ಈ ಅದಾಯ 100 ಕೋಟಿ ರು. ಗೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಶ್ವದ ಅತ್ಯಂತ ಪುರಾತನ ಮದ್ಯ ಫ್ಯಾಕ್ಟರಿಯಲ್ಲಿ ಸಿಕ್ತು 1,400 ವರ್ಷ ಹಳೆಯ ಉಂಗುರ!

ಇಸ್ರೇಲ್‌ನ (Israel) ಪುರಾತತ್ವ ಶಾಸ್ತ್ರಜ್ಞರು ವಿಶ್ವದ ಅತಿದೊಡ್ಡ ಪುರಾತನ ಮದ್ಯದ ಕಾರ್ಖಾನೆಯಲ್ಲಿ (Alcohol Factory) ಎರಡು ಚಿನ್ನದ ಉಂಗುರಗಳನ್ನು (Gold Ring) ಪತ್ತೆ ಹಚ್ಚಿದ್ದಾರೆ. ಆ ಸಮಯದಲ್ಲಿ ಜನರು ಹ್ಯಾಂಗೊವರ್ (Hangover) ತಡೆಯಲು ಈ ಉಂಗುರವನ್ನು ಧರಿಸುತ್ತಿದ್ದರು ಎಂದು ತಜ್ಞರು ಅಂದಾಜಿಸಿದ್ದಾರೆ. ಇಸ್ರೇಲಿ ಪುರಾತತ್ವಶಾಸ್ತ್ರಜ್ಞರು ಈ ಅದ್ಭುತ ಉಂಗುರಗಳನ್ನು ದೇಶದ ಮಧ್ಯ ಪ್ರದೇಶದಲ್ಲಿರುವ ಯವ್ನೆ ನಗರದಲ್ಲಿ ಕಂಡುಕೊಂಡಿದ್ದಾರೆ. 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಬೈಜಾಂಟೈನ್ ಲಿಕ್ಕರ್ ಫ್ಯಾಕ್ಟರಿ ಇರುವ ಸ್ಥಳವೂ ಇದೇ.

ಚಾಲಕ ಮದ್ಯಪಾನ ಮಾಡಿದ್ರೆ ಅಮೆರಿಕ ಕಾರು ಚಲಿಸೋಲ್ಲ, ಹೊಸ ವ್ಯವಸ್ಥೆ!

ಪ್ರಾಚೀನ ಕಾಲದಲ್ಲಿ ಈ ಕಾರ್ಖಾನೆಯಿಂದ ಪ್ರತಿ ವರ್ಷ 20 ಲಕ್ಷ ಲೀಟರ್ ಮದ್ಯ ಉತ್ಪಾದನೆಯಾಗುತ್ತಿತ್ತು. ನೇರಳೆ ಬಣ್ಣದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಈ ಉಂಗುರಗಳು ತುಂಬಾ ಹೊಳೆಯುತ್ತವೆ. ಈ ಉಂಗುರಗಳನ್ನು ಶ್ರೀಮಂತ ವ್ಯಕ್ತಿಯೊಬ್ಬರು ಧರಿಸಿದ್ದರು ಎಂದು ಹೇಳಲಾಗಿದೆ. ಈ ಉಂಗುರಗಳು ಏಳನೇ ಶತಮಾನದ್ದು (7th century) ಎನ್ನಲಾಗಿದ್ದು, ಈ ಉಂಗುರಗಳನ್ನು ಧರಿಸಿದ ಕೊನೆಯ ವ್ಯಕ್ತಿ ವೈನ್ ಟೇಸ್ಟರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ನೇರಳೆ ಕಲ್ಲು ಮದ್ಯದ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ.

click me!