ಕಲಬೆರಕೆ ತುಪ್ಪ ಬಳಕೆ ವಿವಾದದ ಹೊರತಾಗಿಯೂ ತಿರುಪತಿ ಲಡ್ಡು ಖರೀದಿ ಮತ್ತು ಭಕ್ತರ ದರ್ಶನದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಲಡ್ಡು ಮಾರಾಟವು ಸಾಮಾನ್ಯ ಮಟ್ಟದಲ್ಲೇ ಮುಂದುವರೆದಿದೆ ಮತ್ತು ಭಕ್ತರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
ತಿರುಪತಿ: ಹಿಂದಿನ ಮುಖ್ಯಮಂತ್ರಿ ಜಗನ್ ಅವಧಿಯಲ್ಲಿ ತಿರುಪತಿ ಶ್ರೀವಾರಿ ಲಡ್ಡು ತಯಾರಿಕೆಗೆ ಕಲ ಬೆರಕೆ ತುಪ್ಪ ಬಳಸಲಾಗಿತ್ತು ಎಂಬ ವಿವಾದದ ಹೊರತಾಗಿಯ ಲಡ್ಡು ಖರೀದಿ ಮೇಲೆ ಯಾವುದೇ ಪರಿಣಾಮ ಕಂಡುಬಂದಿಲ್ಲ.
ಹಿಂದಿನ ಸರ್ಕಾರದ ಮೇಲೆ ಹಾಲಿ ಸಿಎಂ ಆರೋಪ ಮಾಡಿದ ನಂತರದ 4 ದಿನದಲ್ಲಿ 14 ಲಕ್ಷ ಲಡ್ಡು ಮಾರಾಟವಾಗಿದೆ. ನಿತ್ಯ ಶ್ರೀನಿವಾಸನ ದರ್ಶನಕ್ಕೆ ಸಾವಿರರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ನಿತ್ಯ ದೇಗುಲದಲ್ಲಿ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತದೆ. ಆರೋಪ ಮಾಡಿದ ಬೆನ್ನಲ್ಲೇ ಅಂದರೆ ಸೆ.19ರಂದು 3.59 ಲಕ್ಷ, ಸೆ.20ರಂದು 3.17 ಲಕ್ಷ, ಸೆ.21ರಂದು 3.67 ಲಕ್ಷ ಮತ್ತು ಸೆ.22ರಂದು 3.60 ಲಕ್ಷ ಲಡ್ಡು ಮಾರಾಟವಾಗಿದೆ. ಇದು ನಿತ್ಯದ ಸರಾಸರಿ ಮಾರಾಟದ ಪ್ರಮಾಣವಾದ 3.50 ಲಕ್ಷದ ಸಮೀಪದಲ್ಲೇ ಇದೆ. 'ವಿವಾದ ಹಳೆಯ ವಿಷಯ. ಬಾಲಾಜಿ ಮೇಲಿನ ನಮ್ಮ ಅಚಲ ಭಕ್ತಿಯನ್ನು ಯಾರೂ ಅಲ್ಲಾಡಿಸಲಾಗದು' ಎಂದು ಹಲವು ಭಕ್ತರು ಹೇಳಿದ್ದಾರೆ.
ಮಾತಾಡೋ ಮುನ್ನ ಯೋಚಿಸು; ಹಿಂದೂಗಳ ವಿರುದ್ಧ ನಾಲಗೆ ಹರಿಬಿಟ್ಟ ಪ್ರಕಾಶ ರಾಜ್‌ಗೆ ಡಿಸಿಎಂ ಪವನ್ ಕಲ್ಯಾಣ ಎಚ್ಚರಿಕೆ
ಕಲಬೆರಕೆ ತುಪ್ಪ ಬಳಕೆ ಆರೋಪದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಿಎಂ ಚಂದ್ರಬಾಬುನಾಯ್ಡುನಾಯ್ಡು, 'ನಾವು ಇದೀಗ ಕರ್ನಾಟಕದ ಶುದ್ಧ ನಂದಿನಿ ತುಪ್ಪ ಬಳಸುತ್ತಿದ್ದೇವೆ' ಎಂದಿದ್ದರು. ಇದು ಭಕ್ತರ ಮೇಲೆ ಪರಿಣಾಮ ಬೀರಿದಂತೆ ಕಂಡುಬಂದಿದೆ. ಪ್ರತಿ ನಿತ್ಯ ದೇಗುಲಕ್ಕೆ ಇದೀಗ ಸುಮಾರು 60 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಿದ್ದಾರೆ.
ಪಳನಿ ಪ್ರಸಾದದಲ್ಲಿ ಸಂತಾನ ಹರಣ ಔಷಧಿ ಇದೆ ಎಂದ ನಿರ್ದೇಶಕ ಅರೆಸ್ಟ್; ಇತ್ತ ಡ್ರೈಫ್ರೂಟ್ಸ್ ಪ್ರಸಾದ ನೀಡಲು ಮನವಿ