ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ

By Suchethana D  |  First Published Dec 17, 2024, 11:53 AM IST

ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ ಸಿಗಲಿದೆ. ಏನೆಲ್ಲಾ ಬದಲಾವನೆ ಆಗ್ತಿದೆ ನೋಡಿ. ಡಿಟೇಲ್ಸ್​ ಇಲ್ಲಿದೆ 
 


ವಿಶ್ವದ ಅತ್ಯಂತ ಶ್ರೀಮಂತ ದೇವರಲ್ಲಿ ಒಂದು ಎಂದೆನಿಸಿಕೊಳ್ಳುತ್ತಿರುವ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯವೂ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆನ್​ಲೈನ್​ ಮೂಲಕ ಮೂರು ತಿಂಗಳ ಮೊದಲೇ ಬುಕ್ಕಿಂಗ್​ ವ್ಯವಸ್ಥೆಯಿದ್ದು, ಐದೇ ನಿಮಿಷಗಳಲ್ಲಿ ಎಲ್ಲಾ ದರ್ಶನಗಳೂ ಕ್ಲೋಸ್​ ಆಗುವುದೇ ಇದಕ್ಕೆ ಸಾಕ್ಷಿಯಾಗಿದೆ. ಆನ್​ಲೈನ್​ ಬುಕ್ಕಿಂಗ್​ ಮಾಡುವವರಷ್ಟೇ ಅಲ್ಲದೇ, ಬುಕ್ಕಿಂಗ್​ ಇಲ್ಲದೆಯೂ ಬರುವವರ ಸಂಖ್ಯೆಯೂ ಹೆಚ್ಚಿದೆ. ಇದೇ ಕಾರಣಕ್ಕೆ ಎಷ್ಟೇ ಆಧುನಿಕ ವ್ಯವಸ್ಥೆಯನ್ನು ಅಲ್ಲಿ ಜಾರಿ ಮಾಡಿದರೂ ಕೆಲವೊಮ್ಮೆ ಹಲವು ಗಂಟೆ ಕ್ಯೂನಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆ ಇದೆ. ವಿಶೇಷ ಸಂದರ್ಭಗಳಲ್ಲಂತೂ ದಿನಪೂರ್ತಿ ಕ್ಯೂನಲ್ಲಿ ನಿಲ್ಲುವ ಉದಾಹರಣೆಗಳೂ ಸಾಕಷ್ಟಿವೆ. ಈ ಸಮಸ್ಯೆ ನಿವಾರಣೆಗೆ ಈಗ ಹೊಸ ಆಡಳಿತ ಮಂಡಳಿಯು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಇದು ಜಾರಿಗೊಳ್ಳಲಿದ್ದು, ಒಂದು ಗಂಟೆಯಲ್ಲಿಯೇ ದರ್ಶನ ಪಡೆಯಲು ಸಾಧ್ಯವಾಗಿದೆ.

ಮುಖ ಗುರುತಿಸುವಿಕೆ ಆಧರಿತ ಕೃತಕ ಬುದ್ಧಿಮತ್ತೆ (facial recognition-based Artificial Intelligence (AI)) ಬಳಸಿ ಈ ಹೊಸ ಪದ್ಧತಿ ಅಳವಡಿಸಲಾಗಿದೆ. ಇದರಿಂದ ಭಕ್ತರ ಕಾಯುವ ಸಮಯ ಕಡಿಮೆ ಆಗಲಿದೆ. ಈ ಕುರಿತು, ತಿರುಮಲ ತಿರುಪತಿ ದೇವಸ್ತಾನಮ್​ (ಟಿಟಿಡಿ) ಟ್ರಸ್ಟ್ ಬೋರ್ಡ್​ ತಿಳಿಸಿದೆ. ಇನ್ನು ಆರು ತಿಂಗಳೊಳಗೆ ಎಐ-ಚಾಲಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಒಮ್ಮೆ ಇದನ್ನು ಸ್ಥಾಪಿಸಿದ ನಂತರ ಸಾಮಾನ್ಯ ಭಕ್ತರು 1 ಗಂಟೆಯೊಳಗೆ ಭಗವಾನ್ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪೂರ್ಣಗೊಳಿಸಬಹುದು. ಬೆಂಗಳೂರು ಮೂಲದ ಕಂಪೆನಿಯೊಂದು ಈಗಾಗಲೇ ತಿರುಪತಿ ಮತ್ತು ತಿರುಮಲದಲ್ಲಿ ಪ್ರಾಯೋಗಿಕ ಯೋಜನೆಯ ತಯಾರಿಯನ್ನು ಆರಂಭಿಸಿದೆ ಎಂದು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ. 

Tap to resize

Latest Videos

ಅಮೆರಿಕಕ್ಕೆ ತೆರಳುವ ಮುನ್ನ ಶಿವಣ್ಣ ಫ್ಯಾಮಿಲಿ ಹೋಟೆಲ್​ನಲ್ಲಿ ಕಾಣಿಸಿಕೊಂಡದ್ದು ಹೀಗೆ... ವಿಡಿಯೋ ವೈರಲ್​

 ವಿಮಾನ ನಿಲ್ದಾಣಗಳಲ್ಲಿ ಬಳಸುವ ಡಿಜಿ ಯಾತ್ರಾ ವ್ಯವಸ್ಥೆಯಿಂದ ಪ್ರೇರಿತವಾದ AI-ಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ದರ್ಶನಕ್ಕೆ ನಿರ್ದಿಷ್ಟ ಸಮಯದ ಸ್ಲಾಟ್ ಅನ್ನು ನಿಗದಿಪಡಿಸಲಾಗುತ್ತದೆ. ಅವರು ನಿಗದಿತ ಸಮಯದ ಒಂದು ಗಂಟೆಯೊಳಗೆ ಸರತಿ ಸಾಲಿನಲ್ಲಿ ಸೇರಬಹುದು ಮತ್ತು ಮುಂದಿನ ಒಂದು ಗಂಟೆಯಲ್ಲಿ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು. 

undefined

ಈ ವಿನೂತನ ವ್ಯವಸ್ಥೆಯನ್ನು ಪ್ರಸ್ತುತ ಬೆಂಗಳೂರು ಮೂಲದ ಕಂಪನಿಯು ಡೆಮೋ ಮಾಡುತ್ತಿದೆ, ಉದಾರ ದಾನಿಗಳು ಪ್ರಾಯೋಜಿಸಿತ್ತಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ನಾವು ಬ್ಲ್ಯಾಕ್​ ಟಿಕೆಟಿಂಗ್​ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಭಕ್ತರನ್ನು ವಿಭಾಗಿಸುವ ಪ್ರಸ್ತುತ ವ್ಯವಸ್ಥೆಯು ಹಳತಾಗಿದೆ.  ಎಲ್ಲ ಭಕ್ತರೂ ತಡೆರಹಿತ ಮತ್ತು ಗೌರವಾನ್ವಿತ ಅನುಭವವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಜನಸಂದಣಿಯನ್ನು ನಿರ್ವಹಿಸಲು ಈ ಹಿಂದೆ ಪರಿಚಯಿಸಲಾದ ಸಮಯ-ಸ್ಲಾಟ್ ಆಧರಿತ ದರ್ಶನ ವ್ಯವಸ್ಥೆಯು ಬ್ಲ್ಯಾಕ್​ ಟಿಕೆಟಿಂಗ್​ನಿಂದಾಗಿ ಹಾಳಾಗಿದೆ. ಇದಲ್ಲದೆ, ದರ್ಶನ ಕಾಯುವ ಸಮಯವು ದೀರ್ಘವಾಗಿದೆ. ಈ ಸುರಕ್ಷಿತ ವ್ಯವಸ್ಥೆಯಿಂದ ಯಾವುದೇ ಭಕ್ತರು, ಅವರ ಮೂಲವನ್ನು ಲೆಕ್ಕಿಸದೆ, ಒಂದು ಗಂಟೆಯೊಳಗೆ ದರ್ಶನವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಮುಂದಿನ ಆರು ತಿಂಗಳೊಳಗೆ ಈ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಹೊಂದಿದ್ದೇವೆ, ಸಾಧ್ಯವಾದರೆ ಇನ್ನೂ ಬೇಗ ಇದನ್ನು ಪರಿಚಯಿಸುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ. 

ಮದುವೆ ಒಳ್ಳೆಯದ್ದಾ, ಕೆಟ್ಟದ್ದಾ? ಸದ್ಗುರು ಒಳ್ಳೆಯವರಾ, ಕೆಟ್ಟವರಾ? ನಟಿ ಸುಹಾನಿಸಿ ಪ್ರಶ್ನೆಗೆ ಅವರು ಹೇಳಿದ್ದೇನು ಕೇಳಿ...
 

click me!