ಭಾರತ ವಿರೋಧಿ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ: ಭಾರತಕ್ಕೆ ಶ್ರೀಲಂಕಾ ನೂತನ ಅಧ್ಯಕ್ಷನ ಭರವಸೆ

By Kannadaprabha News  |  First Published Dec 17, 2024, 11:01 AM IST

ಶ್ರೀಲಂಕಾ ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತಕ್ಕೆ ಭರವಸೆ ನೀಡಿದೆ. ಹಂಬನ್‌ತೋಟ ಬಂದರನ್ನು ಬಳಸಿಕೊಂಡು ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಚೀನಾ ಮಾಡುತ್ತಿದ್ದ ಯತ್ನಕ್ಕೆ ತೆರೆ ಬಿದ್ದಿದೆ.


ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ತನ್ನ ನೆಲದ ಮೂಲಕ ಭಾರತ ವಿರೋಧಿ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತಕ್ಕೆ ಶ್ರೀಲಂಕಾ ಭರವಸೆ ನೀಡಿದೆ. ಈ ಮೂಲಕ ಲಂಕಾದ ಹಂಬನ್‌ತೋಟ ಬಂದರು ಬಳಸಿಕೊಂಡು ತನ್ನ ಸಮರ ನೌಕೆಗಳ ಮೂಲಕ ಭಾರತದ ಮೇಲೆ ಬೇಹುಗಾರಿಕೆಗೆ ಉದ್ದೇಶಿಸಿದ್ದ ಚೀನಾ ಯತ್ನಕ್ಕೆ ತೆರೆ ಬಿದ್ದಿದೆ.

ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ನೂತನ ಅಧ್ಯಕ್ಷ ಕುಮಾರ ದಿಸನಾಯಕೆ ನಡುವೆ ನಡೆದ ಮಾತುಕತೆಯ ವೇಳೆ, ‘ಶ್ರೀಲಂಕಾದ ಯಾವುದೇ ಭೂಭಾಗ, ಜಲಭಾಗವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ಲ ಎಂದು ದಿಸನಾಯಕೆ ಭಾರತಕ್ಕೆ ಭರವಸೆ ನೀಡಿದರು ಎಂದು ಜಂಟಿ ಹೇಳಿಕೆ ತಿಳಿಸಿದೆ.

Tap to resize

Latest Videos

ಚೀನಾ ಸರ್ಕಾರ ಕಳೆದ ಕೆಲ ವರ್ಷಗಳಿಂದ ಮಿಷನ್‌ ಇಂಡಿಯನ್‌ ಓಷ್ಯನ್‌ ತಂತ್ರಗಾರಿಕೆ ಮೂಲಕ ಭಾರತ ಸೇರಿದಂತೆ ಹಿಂದೂ ಮಹಾಸಾಗರದ ಸುತ್ತಮುತ್ತಲ ದೇಶಗಳ ಮೇಲೆ ಬೇಹುಗಾರಿಕೆ ಕೆಲಸ ಮಾಡುತ್ತಿತ್ತು. ಅದನ್ನು ತಡೆಯಲು ಭಾರತ ಸತತವಾಗಿ ನಡೆಸಿದ ಪ್ರಯತ್ನದ ಫಲವಾಗಿ ಈ ನಿರ್ಧಾರ ಹೊರಬಿದ್ದಿದೆ.

ಚೀನಾ ಸರ್ಕಾರ, ಸಾಲದ ರೂಪದಲ್ಲಿ ಶ್ರೀಲಂಕಾಕ್ಕೆ ಹಂಬನ್‌ತೋಟಾ ಬಂದರು ನಿರ್ಮಿಸಿಕೊಟ್ಟಿತ್ತು. ಆದರೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ತಾನೇ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಉಪಗ್ರಹಗಳು ಮತ್ತು ಬ್ಯಾಲೆಸ್ಟಿಕ್‌ ಕ್ಷಿಪಣಿಗಳ ಮೇಲೆ ನಿಗಾ ಇಡುವ ತನ್ನ ಅತ್ಯಾಧುನಿಕ ಬೇಹುಗಾರಿಕಾ ಉಪಗ್ರಹವನ್ನು ಪದೇಪದೇ ಸುದೀರ್ಘ ಅವಧಿಗೆ ಹಂಬನ್‌ತೋಟಾ ಬಂದರಿನ ಬಳಿ ನಿಯೋಜಿಸಿ, ಭಾರತದ ಮೇಲೆ ಬೇಹುಗಾರಿಕೆ ಯತ್ನ ನಡೆಸಿತ್ತು. ಈ ಕುರಿತಂತೆ ಭಾರತ ಸರ್ಕಾರ ಹಲವು ಬಾರಿ ಶ್ರೀಲಂಕಾ ಸರ್ಕಾರಕ್ಕೆ ತನ್ನ ಕಳವಳ ವ್ಯಕ್ತಪಡಿಸಿತ್ತು.

undefined

ಅದರ ಬೆನ್ನಲ್ಲೇ ಇದೀಗ ತನ್ನ ಭೂ, ಸಮುದ್ರ ಪ್ರದೇಶಗಳನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ದ ಎಂದು ಶ್ರೀಲಂಕಾ ಭರವಸೆ ನೀಡಿದೆ. ಇದು ಕಳೆದ ಕೆಲ ವರ್ಷಗಳಿಂದ ಮರಳಿ ಶ್ರೀಲಂಕಾ ಜೊತೆಗೆ ಸ್ನೇಹ ಸಂಬಂಧ ವೃದ್ಧಿಸುವ ಸಂಬಂಧ ಭಾರತ ನಡೆಸಿದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಗೆಲುವು ಎಂದೇ ಭಾವಿಸಲಾಗಿದೆ.

ಖ್ಯಾತ ಗಾಯಕ, ಹಾರ್ಮೋನಿಯಂ ವಾದಕ ಸಂಜಯ ಮರಾಠೆ ವಿಧಿವಶ

ಪಿಟಿಐ ಥಾಣೆಖ್ಯಾತ ಶಾಸ್ತ್ರೀಯ ಗಾಯಕ ಮತ್ತು ಹಾರ್ಮೋನಿಯಂ ವಾದಕ ಸಂಜಯ್ ರಾಮ್ ಮರಾಠೆ (68) ಮಹಾರಾಷ್ಟ್ರದ ಥಾಣೆ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.

ಖ್ಯಾತ ಪಂಡಿತ್ ರಾಮ್ ಮರಾಠೆ ಅವರ ಹಿರಿಯ ಪುತ್ರರು. ತೀವ್ರ ಹೃದಯಾಘಾತಕ್ಕ ತುತ್ತಾಗಿದ್ ಅವರನ್ನು ಥಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಇಹಲೋಕ ತ್ಯಜಿಸಿದರು.ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಮರಾಠೆ ಅವರ ಕೊಡುಗೆ ಅಸಾಧಾರಣವಾಗಿದೆ. ಅವರು ಹಾರ್ಮೋನಿಯಂ ಮತ್ತು ಅವರ ಭಾವಪೂರ್ಣ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ಮರಾಠಿ ರಂಗಭೂಮಿಗೂ ಕೊಡುಗೆ ನೀಡಿದ್ದರು.

ಆಮರಣ ಉಪವಾಸ: ರೈತ ಮುಖಂಡ ದಲ್ಲೇವಾಲಗೆ ಸ್ಥಿತಿ ವಿಷಮ

ಚಂಡೀಗಢ: ವಿವಿಧ ಬೇಡಿಕೆ ಈಡೇರಿಕೆಗಾಗಿ 21 ದಿನಗಳಿಂದ ಆಮರಣಾಂತ ನಿರಶನ ನಡೆಸುತ್ತಿರುವ ಪಂಜಾಬ್‌ನ ರೈತ ಮುಖಂಡ ಜಗಜಿತ್‌ ಸಿಂಗ್ ದಲ್ಲೇವಾಲರ ಆರೋಗ್ಯ ಸ್ಥಿತಿ ವಿಷಮಿಸಿದೆ. ಅವರ ತಪಾಸಣೆ ನಡೆಸಿದ ವೈದ್ಯರು, ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಆದರೆ, ದಲ್ಲೇವಾಲ ಮಾತ್ರ ತಮಗೆ ಯಾವುದೇ ಚಿಕಿತ್ಸೆ ಬೇಡ ಎಂದು ಪಟ್ಟುಹಿಡಿದಿದ್ದಾರೆ.

ವರದಿಗಳ ಪ್ರಕಾರ ಅವರ ಅವರ ದೇಹದಲ್ಲಿ ಕ್ರಿಯೇಟಿನೈನ್‌ ಮಟ್ಟ ಹೆಚ್ಚಾಗುತ್ತಿದೆ. ಜತೆಗೆ ಜಿಎಫ್‌ಆರ್‌(ಗ್ಲೋಮೆರುಲರ್‌ ಫಿಲ್ಟರೇಷನ್‌ ರೇಟ್‌-ಇದು ಮೂತ್ರಪಿಂಡದ ಆರೋಗ್ಯವನ್ನು ನಿರ್ಧರಿಸುತ್ತದೆ) ಇಳಿಮುಖವಾಗುತ್ತಿದೆ. ಕೆಟೋನ್ಸ್‌ ಕೂಡ ಹೆಚ್ಚಿನ ಮಟ್ಟದಲ್ಲಿದ್ದು ಇದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ದಲ್ಲೇವಾಲ ಅವರ ಆರೋಗ್ಯ ಪರೀಕ್ಷಿಸುತ್ತಿರುವ ವೈದ್ಯರ ತಂಡದ ಭಾಗವಾಗಿರುವ ಡಾ.ಅವ್‌ತಾರ್‌ ಸಿಂಗ್‌ ಹೇಳಿದ್ದಾರೆ.

ದಲ್ಲೇವಾಲ ಅ‍ವರು ನೀರು ಬಿಟ್ಟರೆ ಬೇರೇನೂ ಸ್ವೀಕರಿಸುತ್ತಿಲ್ಲ. ಅವರು ಸೂಕ್ತ ಚಿಕಿತ್ಸೆಪಡೆಯದೇ ಹೋದರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

click me!