ಹೈ ಪ್ರೊಫೈಲ್‌ ಅಪರಾಧಿಗಳಿಂದ ತುಂಬಿ ತುಳುಕುತ್ತಿರುವ ತಿಹಾರ್ ಜೈಲು: ಸಿಬ್ಬಂದಿಗೆ ಸಂಕಷ್ಟ

Published : Aug 28, 2022, 11:14 AM ISTUpdated : Aug 28, 2022, 11:15 AM IST
ಹೈ ಪ್ರೊಫೈಲ್‌ ಅಪರಾಧಿಗಳಿಂದ ತುಂಬಿ ತುಳುಕುತ್ತಿರುವ ತಿಹಾರ್ ಜೈಲು: ಸಿಬ್ಬಂದಿಗೆ ಸಂಕಷ್ಟ

ಸಾರಾಂಶ

ಹಲವು ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳಾಗಿ ಜೈಲು ಸೇರಿರುವವರ ಆಶ್ರಯ ತಾಣವಾದ ತಿಹಾರ್ ಜೈಲು ಈಗ ಅಪರಾಧಿಗಳಿಂದ ತುಂಬಿ ತುಳುಕುತ್ತಿದ್ದು, ಇವರನ್ನು ನೋಡಿಕೊಳ್ಳುವುದೇ ಈಗ ಜೈಲಿನ ಸಿಬ್ಬಂದಿಗೆ ಕಷ್ಟದ ಕೆಲಸ ಆಗಿದೆ.

ನವದೆಹಲಿ: ಹಲವು ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳಾಗಿ ಜೈಲು ಸೇರಿರುವವರ ಆಶ್ರಯ ತಾಣವಾದ ತಿಹಾರ್ ಜೈಲು ಈಗ ಅಪರಾಧಿಗಳಿಂದ ತುಂಬಿ ತುಳುಕುತ್ತಿದ್ದು, ಇವರನ್ನು ನೋಡಿಕೊಳ್ಳುವುದೇ ಈಗ ಜೈಲಿನ ಸಿಬ್ಬಂದಿಗೆ ಕಷ್ಟದ ಕೆಲಸ ಆಗಿದೆ. ತಿಹಾರ್ ಜೈಲು ಕಟ್ಟಡ ಅನೇಕ ಹೈ ಪ್ರೊಫೈಲ್ ಅಪರಾಧಿಗಳ ಪಾಲಿಗೆ ಮನೆ ಎನಿಸಿದೆ. ಈ ತಿಹಾರ್ ಜೈಲು ಸಂಕೀರ್ಣವು ಅದರ ನೈಜ ಸಾಮರ್ಥ್ಯದ ಎರಡೂವರೆ ಪಟ್ಟು ಹೆಚ್ಚು ಕೈದಿಗಳನ್ನು ಹೊಂದಿದ್ದು, ಅವರನ್ನು ಮೇಲ್ವಿಚಾರಣೆ ಮಾಡುವುದೇ ಕಷ್ಟಕರವಾಗಿದೆ.

ಅಪರಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕ್ರಮವಾಗಿ 2004 ರಲ್ಲಿ ಹಾಗೂ 2016ರಲ್ಲಿ ರೋಹಿಣಿ ಹಾಗೂ ಮಂಡೋಲಿ ಎಂಬ ಇನ್ನೆರಡು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆದಾಗ್ಯೂ ಈಗ ಅಪರಾಧಿಗಳ ಸಂಖ್ಯೆ ಮತ್ತೆ ಹೆಚ್ಚಳವಾದ ಹಿನ್ನೆಲೆ ಜೈಲು ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ. 

ಜೈಲಿನ ಬಗ್ಗೆ ಮಾಹಿತಿ ಹಕ್ಕು(RTI) ಅಡಿ ಅರ್ಜಿ ಸಲ್ಲಿಸಿದಾಗ ತಿಹಾರ್ ಜೈಲಿನ ಡೈರೆಕ್ಟರ್‌ ಜನರಲ್‌ ಕಚೇರಿ ನೀಡಿದ ಮಾಹಿತಿ ಪ್ರಕಾರ, ತಿಹಾರ್ ಜೈಲು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಜೈಲು ಕಟ್ಟಡವಾಗಿದ್ದು, ಇದು ಒಂಭತ್ತು ಸೆಂಟ್ರಲ್ ಜೈಲುಗಳನ್ನು ಒಳಗೊಂಡಿದೆ. 5,200 ಕೈದಿಗಳನ್ನು ಇರಿಸುವ ಸಾಮರ್ಥ್ಯ ಈ ಜೈಲಿಗೆ ಇದೆ. ಆದರೆ  13,183 ಕೈದಿಗಳು ಇಲ್ಲಿನ ವಿವಿಧ ಸೆಂಟ್ರಲ್‌ ಜೈಲಿನಲ್ಲಿ ಸೆರೆಯಲ್ಲಿದ್ದಾರೆ. 

ಉಪವಾಸ ಸತ್ಯಾಗ್ರಹ ಅಂತ್ಯ ಮಾಡಿದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌!

ಮಂಡೋಲಿಯೂ ಆರು ಸೆಂಟ್ರಲ್ ಜೈಲು ಕಟ್ಟಡಗಳನ್ನು ಹೊಂದಿದ್ದು, 1050 ಕೈದಿಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇಲ್ಲಿ 2,037 ಕೈದಿಗಳು ಪ್ರಸ್ತುತ ವಾಸವಿದ್ದಾರೆ. ರೋಹಿಣಿಯೂ ಒಂದು ಸೆಂಟ್ರಲ್ ಜೈಲನ್ನು ಹೊಂದಿದ್ದು, 3,776 ಜನ ಇರಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಆದರೆ 4,355 ಕೈದಿಗಳು ಇಲ್ಲಿ ಪ್ರಸ್ತುತ ವಾಸವಿದ್ದಾರೆ. 

ಇಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದಾಗ್ಯೂ ಕೈದಿಗಳನ್ನು ನಿರ್ವಹಿಸುತ್ತಿದ್ದೇವೆ. ಕೈದಿಗಳ ಸಂಖ್ಯೆ ಹೆಚ್ಚಳದಿಂದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಕೆಲವು ಕೈದಿಗಳು ಪರಸ್ಪರ ಹೊಡೆದಾಡುತ್ತಾರೆ. ಇದರಿಂದ ಸರಿಯಾದ ಕಣ್ಗಾವಲು ನಿರ್ವಹಿಸಲು ಮತ್ತು ಕೈದಿಗಳ ಸುಧಾರಣಾ ಚಟುವಟಿಕೆಗಳನ್ನು ನಡೆಸಲು ತೊಂದರೆ ಆಗಿದೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಮೂರು ಕಾರಾಗೃಹ ಸಂಕೀರ್ಣಗಳಲ್ಲಿರುವ 16 ಕೇಂದ್ರ ಕಾರಾಗೃಹಗಳು ಆ ವಾರ್ಡ್‌ಗಳಲ್ಲಿ ಬಂಧಿಯಾಗಿರುವ ಕೈದಿಗಳಿಗಾಗಿ ಹೈ-ಸೆಕ್ಯುರಿಟಿ ವಾರ್ಡ್‌ನ ಸಾಮಾನ್ಯ ಪ್ರದೇಶದಲ್ಲಿ ಟಿವಿ ಸೌಲಭ್ಯವನ್ನು ಹೊಂದಿವೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

DKS VS CT Ravi: ನಾನು ತಿಹಾರ್ ಜೈಲು ರಿಟರ್ನ್ ಅಲ್ಲ, ನನ್ನ ರೆಕಾರ್ಡ್ ಶುದ್ಧವಾಗಿದೆ: ಸಿ ಟಿ ರವಿ

ಅವರ ಪ್ರಕಾರ 10,026 ಕೈದಿಗಳ ಸಾಮರ್ಥ್ಯವಿರುವ ತಿಹಾರ್‌ ಜೈಲಿನ 16 ಸೆರೆಮನೆಗಳಲ್ಲಿರುವ ಕೈದಿಗಳ ಸಂಖ್ಯೆ ಅಂದಾಜು 19,500 ರೂ. ಆಗಿದೆ. ಕಳೆದ ಕೆಲ ವರ್ಷಗಳಿಂದ ಕೈದಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗಿರುವುದು ಇದಕ್ಕೆ ಕಾರಣ. ಈ ಜೈಲಿನಲ್ಲಿ ಹೈ-ಪ್ರೊಫೈಲ್ ಗ್ಯಾಂಗ್‌ಸ್ಟಾರ್‌ಗಳು, ಅಪರಾಧಿಗಳು ವಾಸವಿದ್ದಾರೆ. ಒಲಿಂಪಿಕ್‌ನಲ್ಲಿ ಕುಸ್ತಿಯಲ್ಲಿ ಬೆಳ್ಳಿ ಪದಕ ಗಳಿಸಿದ್ದ ಸುಶೀಲ್ ಕುಮಾರ್‌, ವಂಚಕ ಸುಕೇಶ್ ಚಂದ್ರಶೇಖರ್, ಇವರೆಲ್ಲಾ ಈ ಜೈಲಿನಲ್ಲಿದ್ದಾರೆ, ಸುಕೇಶ್ ಚಂದ್ರಶೇಖರ್‌ ಇತ್ತೀಚೆಗಷ್ಟೇ ತಿಹಾರ್‌ನಿಂದ ಮಂಡೋಲಿಯ ಜೈಲು ಕಟ್ಟಡಕ್ಕೆ ಕೋರ್ಟ್ ಸೂಚನೆ ಮೇರೆಗೆ ಸ್ಥಳಾಂತರಗೊಂಡಿದ್ದ, ಬರೀ ಈತನಷ್ಟೇ ಅಲ್ಲದೇ ಕಾಶ್ಮೀರ ಪ್ರತ್ಯೇಕತವಾದಿ ನಾಯಕ ಯಾಸೀನ್ ಮಲಿಕ್ ಕೂಡ ಈ ತಂಡದಲ್ಲಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್